ಪಂಜಾಬಿ ಪರಾಠ

0
235

 
ವಾರ್ತೆ ರೆಸಿಪಿ
ಬೇಕಾಗುವ ವಸ್ತುಗಳು:
ಗೋಧಿ ಹಿಟ್ಟು 3 ಕಪ್, ಉಪ್ಪು 1 ಟೀ ಚಮಚ, ಕರಗಿಸಿದ ಬೆಣ್ಣೆ 50 ಗ್ರಾಂ, ಜಜ್ಜಿದ ದಾಳಿಂಬೆ ಬೀಜ  30 ಗ್ರಾಂ, ಮೆಣಸಿನ ಹುಡಿ 1 ಟೀ ಚಮಚ, ಹಸಿ ಮೆಣಸಿನ ಕಾಯಿ ಸಣ್ಣಗೆ ತುಂಡರಿಸಿದ್ದು 2-3. ಮೊಸರು ಅರ್ಧ ಕಪ್, ಹಾಲು ಅರ್ಧ ಕಪ್, ಕರಿ ಮೆಣಸಿನ ಹುಡಿ ಅರ್ಧ ಟೀ ಚಮಚ.
 
 
ಮಾಡುವ  ವಿಧಾನ:
ಗೋಧಿ ಹಿಟ್ಟನ್ನು ಜರಡಿಯಾಡಿಸಿಟ್ಟು ಕೊಳ್ಳಿರಿ. ಅದಕ್ಕೆ ಮಿಕ್ಕ ಎಲ್ಲಾ ಸಾಮಾಗ್ರಿಗಳನ್ನು ಸೇರಿಸಿ ಕಲಸಿ ಗಟ್ಟಿಯಾಗಿ ನಾದಿಕೊಳ್ಳಿರಿ. ಒಂದು ಬಟ್ಟೆಯಲ್ಲಿ ನಾದಿದ ಹಿಟ್ಟನ್ನು 1 ಗಂಟೆ ಕಾಲ ಮುಚ್ಚಿಡಿ. ನಾದಿದ ಹಿಟ್ಟಿನಿಂದ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿರಿ. ಗೋಲಾಕಾರದಲ್ಲಿ ಪರಾಠವನ್ನು ಲಟ್ಟಿಸಿ. ತಂದೂರು ಒಲೆಯಲ್ಲಿ ಅಥವಾ ತವಾದಲ್ಲಿ ಕಾಯಿಸಿರಿ. ಬಿಸಿ ಬಿಸಿಯಾಗಿ ತಿನ್ನಲು ಹಿತಕರ.

LEAVE A REPLY

Please enter your comment!
Please enter your name here