ಪಂಚರಾಜ್ಯಗಳ ಫಲಿತಾಂಶಕ್ಕೆ ಬೇಸರ

0
329

 
ಬೆಂಗಳೂರು ಪ್ರತಿನಿಧಿ ವರದಿ
5 ರಾಜ್ಯಗಳ ಚುನಾವಣಾ ಫಲಿತಾಂಶಕ್ಕೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಬೇಸರ ವ್ಯಕ್ತಪಡಿಸಿದ್ದಾರೆ. ಮೊನ್ನೆ ಪಂಚರಾಜ್ಯಗಳ ಫಲಿತಾಂಶ ಕಂಡು ಅಕ್ಷರಶಃ ಕಣ್ಣೀರು ಬಂತು ಎಂದು ಪರಮೇಶ್ವರ್ ಬೇಸರದ ಮಾತುಗಳನ್ನಾಡಿದ್ದಾರೆ.
 
 
 
ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಪರಮೇಶ್ವರ್ ಅವರು ಕಾಂಗ್ರೆಸ್ ಸಾಧನೆಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಪಕ್ಷದ ಅಧ್ಯಕ್ಷನಾಗಿ ನಾನು ಈ ಮಾತನ್ನು ಹೇಳಲೇಬೇಕಾಗಿದೆ. ಕಾಂಗ್ರೆಸ್ ಪಕ್ಷ ಎತ್ತ ಸಾಗುತ್ತಿದೆ ಎಂದು ಡಾ. ಪರಮೇಶ‍್ವರ್ ಪ್ರಶ್ನಿಸಿದ್ದಾರೆ. ಮುಂದಿನ ಪೀಳಿಗೆಗೆ ಕಾಂಗ್ರೆಸ್ ಬಗ್ಗೆ ಏನೆಂದು ಹೇಳಬೇಕು, ಏನೆಂದು ಹೇಳಿ ನಮ್ಮ ಪಕ್ಷವನ್ನು ಮುಂದಿನವರಿಗೆ ಬಿಡಬೇಕು ಎಂದು ಹೇಳಿದ್ದಾರೆ.
 
 
 
ದೇಶದಲ್ಲಿ ಕಾಂಗ್ರೆಸ್ ಮುಕ್ತ ಮಾಡಲು ಬಿಜೆಪಿ ಹೊರಟಿದೆ. ಈ ಪರಿಸ್ಥಿತಿಯಲ್ಲಿ ನಾವು ಸುಮ್ಮನಿರಬೇಕಾ? ಎಂದು ಪರಮೇಶ್ವರ್ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
 
 
 
ನಾವು ನುಡಿದಂತೆ ನಡೆದಿದ್ದೇವೆ.ಸಿದ್ಧರಾಮಯ್ಯರ ಸರ್ಕಾರ ಇದನ್ನು ಮಾಡಿ ತೋರಿಸಿದೆ. ಅದನ್ನು ಜನರಿಗೆ ಹೇಳಬೇಕು, ಮಾರ್ಕೆಟ್ ಮಾಡಬೇಕು. ಏನು ಮಾಡದವರೇ ಮಾರ್ಕೆಟಿಂಗ್ ಮಾಡಿಕೊಳ್ಳುತ್ತಿದ್ದಾರೆ.

LEAVE A REPLY

Please enter your comment!
Please enter your name here