ದೇಶಪ್ರಮುಖ ಸುದ್ದಿವಾರ್ತೆ

ಪಂಚರಾಜ್ಯಗಳ ಚುನಾವಣಾ ದಿನಾಂಕ ಪ್ರಕಟ

ರಾಷ್ಟ್ರೀಯ ಪ್ರತಿನಿಧಿ ವರದಿ
ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ವೇಳಾಪಟ್ಟಿ ಪ್ರಕಟವಾಗಿದೆ. ಉತ್ತರಪ್ರದೇಶ, ಉತ್ತರಾಖಂಡ್, ಪಂಜಾಬ್, ಮಣಿಪುರ ಮತ್ತು ಗೋವಾ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ಪ್ರಕಟಗೊಂಡಿದೆ.
 
 
 
ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗ ಆಯುಕ್ತ ನಸೀಮ್ ಜೈದಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ವೇಳಾಪಟ್ಟಿಯಲ್ಲಿ ಬಿಡುಗಡೆ ಮಾಡಲಾಗಿದೆ. ಇಂದಿನಿಂದಲೇ 5 ರಾಜ್ಯಗಳಲ್ಲಿ ಚುನಾವಣಾ ನೀತಿಸಂಹಿತೆ ಜಾರಿಯಾಗಲಿದೆ. 5 ರಾಜ್ಯಗಳಲ್ಲಿ ಒಟ್ಟು 16 ಕೋಟಿ ಮತದಾರರಿದ್ದಾರೆ. 5 ರಾಜ್ಯಗಳ 690 ವಿಧಾಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಒಟ್ಟು 1 ಲಕ್ಷದ 85 ಸಾವಿರ ಮತಗಟ್ಟೆಗಳಿವೆ. ಎಲ್ಲೆಡೆ ಮಹಿಳೆಯರಿಗಾಗಿ ಪ್ರತ್ಯೇಕ ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ.
 
 
ಒಂದೇ ಹಂತದಲ್ಲಿ ಎಲ್ಲಾ ರಾಜ್ಯಗಳಲ್ಲೂ ಚುನಾವಣೆ ನಡೆಯಲಿದೆ. ಗೋವಾದ 40 ಕ್ಷೇತ್ರಗಳಿಗೂ ಫೆಬ್ರವರಿ 4ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ- ಜನವರಿ 18 ಆಗಿದ್ದು, ನಾಮಪತ್ರ ಪರಿಶೀಲನೆ ದಿನಾಂಕ ಜನವರಿ -19 ಆಗಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ- ಜನವರಿ 21 ಆಗಿದೆ.
 
 
 
ಪಂಜಾಬ್ ನ 117 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಫೆಬ್ರವರಿ 4ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ- ಜನವರಿ 18 ಆಗಿದ್ದು, ನಾಮಪತ್ರ ಪರಿಶೀಲನೆ ದಿನಾಂಕ ಜನವರಿ -19 ಆಗಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ- ಜನವರಿ 21 ಆಗಿದೆ.
 
 
ಉತ್ತರಾಖಂಡ್ ನ 70 ಕ್ಷೇತ್ರಗಳಿಗೆ ಒಂದೇ ಹಂತದ ಮತದಾನ ನಡೆಯಲಿದ್ದು, ಫೆಬ್ರವರಿ 15ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ- ಜನವರಿ 27 ಆಗಿದ್ದು, ನಾಮಪತ್ರ ಪರಿಶೀಲನೆ ದಿನಾಂಕ ಜನವರಿ -28 ಆಗಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ- ಜನವರಿ 30 ಆಗಿದೆ.
 
ಮಣಿಪುರದ 60 ಕ್ಷೇತ್ರಗಳಿಗೆ 2 ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೊದಲ ಹಂತದಲ್ಲಿ 38 ವಿಧಾನಸಭಾ ಕ್ಷೇತ್ರಗಳಲ್ಲಿ ಹಾಗೂ 2ನೇ ಹಂತದಲ್ಲಿ 22 ವಿಧಾನಸಭಾ ಕ್ಷೇತ್ರಗಳಲ್ಲಿ ಎಲೆಕ್ಷನ್ ನಡೆಯಲಿದೆ. ಮೊದಲ ಹಂತದ ಚುನಾವಣೆ ಮಾರ್ಚ್ 4ಕ್ಕೆ ನಡೆಯಲಿದ್ದು, ಮಾರ್ಚ್ 8ರಂದು 2ನೇ ಹಂತದ ಮತದಾನ ನಡೆಯಲಿದೆ.
 
ಉತ್ತರಪ್ರದೇಶದ 403 ಕ್ಷೇತ್ರಗಳಿಗೆ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ 15 ಜಿಲ್ಲೆಯ 73 ಕ್ಷೇತ್ರಗಳಿಗೆ ಫೆ.11ರಂದು ಮತದಾನ ನಡೆಯಲಿದೆ. ಎರಡನೇ ಹಂತದಲ್ಲಿ 11 ಜಿಲ್ಲೆಗಳ 65 ಕ್ಷೇತ್ರಗಳ ಮತದಾನ ಫೆ.15ರಂದು ನಡೆಯಲಿದೆ. ಮೂರನೇ ಹಂತದಲ್ಲಿ 12 ಜಿಲ್ಲೆಗಳ 69 ಕ್ಷೇತ್ರಗಳಿಗೆ ಫೆ.19 ರಂದು ಮತದಾನ ನಡೆಯಲಿದೆ. ನಾಲ್ಕನೇ ಹಂತದಲ್ಲಿ 12 ಜಿಲ್ಲೆಗಳ 53 ಕ್ಷೇತ್ರಗಳ ಮತದಾನ ಫೆ.23 ರಂದು ನಡೆಯಲಿದೆ. ಐದನೇ ಹಂತದಲ್ಲಿ 11ಜಿಲ್ಲೆಗಳ 52ಕ್ಷೇತ್ರಗಳಿಗೆ ಫೆ.27ರಂದು ಮತದಾನ ನಡೆಯಲಿದೆ. ಆರನೇ ಹಂತದಲ್ಲಿ 7ಜಿಲ್ಲೆಗಳ 49ಕ್ಷೇತ್ರಗಳಿಗೆ ಮಾ.4ರಂದು ಚುನಾವಣೆ ನಡೆಯಲಿದೆ. ಏಳನೇ ಹಂತದಲ್ಲಿ 40ವಿಧಾನಸಭಾ ಕ್ಷೇತ್ರಗಳಿಗೆ ಮಾ.8ರಂದು ಚುನಾವಣೆ ನಡೆಯಲಿದೆ.
 
 
 
ಮಾರ್ಚ್11ಕ್ಕೆ ಫಲಿತಾಂಶ
ದೇಶದ 5 ರಾಜ್ಯಗಳಲ್ಲೂ ಮಾರ್ಚ್ 11ರಂದು ಫಲಿತಾಂಶ ಹೊರಬೀಳಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ಉತ್ತರಪ್ರದೇಶ, ಉತ್ತರಾಖಂಡ್, ಪಂಜಾಬ್, ಮಣಿಪುರ ಮತ್ತು ಗೋವಾ ವಿಧಾನಸಭೆ ಚುನಾವಣೆಯ ಫಲಿತಾಂಶ ಒಂದೇ ದಿನ ಘೋಷಣೆಯಾಗಲಿದೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here