ಪಂಚಪರಮೇಷ್ಠಿಗಳ ಆರಾಧನೆ

0
431

ನಮ್ಮ ಪ್ರತಿನಿಧಿ ವರದಿ
ನಾರಾವಿ ಬಸದಿಯಲ್ಲಿ ಭಾನುವಾರ ಪಂಚಪರಮೇಷ್ಠಿಗಳ ಆರಾಧನೆ ನಡೆಯಿತು. ತ್ರಿಕರಣಪೂರ್ವಕ ಪರಿಶುದ್ಧವಾಗಿ ಶ್ರದ್ಧಾ-ಭಕ್ತಿಯಿಂದ ಸರಿಯಾದ ತಿಳುವಳಿಕೆಯೊಂದಿಗೆ ಪೂಜೆ ಮಾಡಿದರೆ ಕರ್ಮ ಕ್ಷಯವಾಗುತ್ತದೆ. ಅಕ್ಷಯ ಸುಖವನ್ನೀಯುವ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಬೆಂಗಳೂರಿನ ಜಿನೇಂದ್ರ ಬಂಗ ಹೇಳಿದರು.
 
 
ನಾರಾವಿ ಬಸದಿಯಲ್ಲಿ ಭಾನುವಾರ ಅವರು ಪಂಚಪರಮೇಷ್ಠಿಗಳ ಆರಾಧನೆಯ ವಿಧಿ-ವಿಧಾನ ಮತ್ತು ಮಹತ್ವವನ್ನು ವಿವರಿಸಿದರು. ಕಾರ್ಕಳದ ಭರತ ಇಂದ್ರ, ಬಜಗೋಳಿಯ ನಿರ್ಮಾಣ ಇಂದ್ರ, ನಾರಾವಿ ಬಸದಿಯ ಮಹಾವೀರ ಇಂದ್ರರ ನೇತೃತ್ವದಲ್ಲಿ ನಡೆದ ಆರಾಧನೆಯಲ್ಲಿ 125 ಮಂದಿ ಶ್ರಾವಕ-ಶ್ರಾವಕಿಯರು ಭಾಗವಹಿಸಿದರು.
 
 
ತ್ಯಾಗಿ ನೆಲೆಗೆ ಶಿಲಾನ್ಯಾಸ
ಈದು ಗ್ರಾಮದ ಹೊಸ್ಮಾರು ಸಿದ್ಧರವನದಲ್ಲಿ ನಾಳೆ ಮಂಗಳವಾರ ತ್ಯಾಗಿ ನೆಲೆ ಮತ್ತು ನೂತನ ಗೋಪುರ ನಿರ್ಮಾಣಕ್ಕೆ ಶಿಲಾನ್ಯಾಸ ಸಮಾರಂಭ ನಡೆಯಲಿದೆ.
ಕಾರ್ಕಳ ಜೈನ ಮಠದ ಲಲಿತಕೀರ್ತಿ ಭಟ್ಟಾರಕರ ಉಪಸ್ಥಿತಿಯಲ್ಲಿ ಸಮಾರಂಭ ನಡೆಯಲಿದ್ದು ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಎಂ. ಎನ್. ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸುವರು.

LEAVE A REPLY

Please enter your comment!
Please enter your name here