ನ.23ಕ್ಕೆ ಮೆಡಿಕಲ್ ಶಾಪ್ ಬಂದ್

0
400

ರಾಷ್ಟ್ರೀಯ ಪ್ರತಿನಿಧಿ ವರದಿ
ಆನ್ ಲೈನ್ ಮೂಲಕ ಔಷಧ ಮಾರಾಟಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದನ್ನು ಖಂಡಿಸಿ, ನವೆಂಬರ್ 23ರಂದು ದೇಶವ್ಯಾಪಿ ಮೆಡಿಕಲ್ ಶಾಪ್ ಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಅಖಿಲ ಭಾರತ ಔಷಧ ವ್ಯಾಪಾರಿಗಳ ಒಕ್ಕೂಟ(ಎಐಒಸಿಡಿ) ತಿಳಿಸಿದೆ.
 
 
 
ಸಾಮಾನ್ಯ ಜನರ ಆರೋಗ್ಯ ರಕ್ಷಣೆ, ಮಾದಕ ವ್ಯಸನಿಗಳ ಮೇಲೆ ಕಡಿವಾಣ, ಅಕ್ರಮ ಮಾರಾಟ ನಿಯಂತ್ರಣ ಹಾಗೂ 8,80,000 ಔಷಧ ವ್ಯಾಪಾರಿಗಳ ಒಳಿತಿಗಾಗಿ ಮುಷ್ಕರ ಅನಿವಾರ್ಯ ಎಂದು ಎಐಒಸಿಡಿ ಅಧ್ಯಕ್ಷ ಜಿಎಸ್ ಶಿಂಧೆ ಹೇಳಿದ್ದಾರೆ.
 
 
ಕೇಂದ್ರ ಸರ್ಕಾರದ ಆನ್‌ಲೈನ್ ಫಾರ್ಮಸಿ ಮೂಲಕ ಔಷಧಿ ಮಾರಾಟ ಮಾಡುವ ಕ್ರಮ ಖಂಡಿಸಿ ಔಷಧ ವ್ಯಾಪಾರಿಗಳ ಸಂಘ ಕರೆ ನೀಡಿರುವ ಬಂದ್ ಗೆ ಕರ್ನಾಟಕದ ಔಷಧಿ ಮಾರಾಟಗಾರರ ಸಂಘ ಕೂಡಾ ಬೆಂಬಲ ವ್ಯಕ್ತಪಡಿಸಿದೆ.

LEAVE A REPLY

Please enter your comment!
Please enter your name here