ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಗೆ ಲೋಕಾ ಹುದ್ದೆಯಿಲ್ಲ!

0
149

ಬೆಂಗಳೂರು ಪ್ರತಿನಿಧಿ ವರದಿ
ಲೋಕಾಯುಕ್ತ ನ್ಯಾಯಮೂರ್ತಿ ಹುದ್ದೆಗೆ ನೇಮಕಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಮತ್ತೆ ಭಾರೀ ಮುಖಭಂಗವಾಗಿದೆ. ಲೋಕಾಯುಕ್ತ ನ್ಯಾಯಮೂರ್ತಿ ಹುದ್ದೆಗೆ ರಾಜ್ಯ ಸರ್ಕಾರ ಶಿಪಾರಸ್ಸು ಮಾಡಿದ್ದ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಹೆಸರನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ.
 
 
 
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎರಡು ಪುಟಗಳ ಪತ್ರ ಬರೆದಿರುವ ರಾಜ್ಯಪಾಲ ವಿ.ಆರ್. ವಾಲಾ ಅವರು ಲೋಕಾಯುಕ್ತ ಹುದ್ದೆಗೆ ಶಿಪಾರಸ್ಸು ಮಾಡಿದ್ದ ಸಲಹ ಸಮಿತಿಯ ಆಯ್ಕೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
 
 
 
ಕಳೆದ ಜ. 10 ರಂದು ಸರ್ಕಾರ ಲೋಕಾಯುಕ್ತ ಹುದ್ದೆಗೆ ವಿಶ್ವನಾಥ್ ಶೆಟ್ಟಿ ಅವರು ಹೆಸರನ್ನು ಶಿಪಾರಸ್ಸು ಮಾಡಿರುವುದು ಅನೇಕ ಸಂದೇಹಗಳಿಗೆ ಎಡೆಮಾಡಿಕೊಟ್ಟಿದೆ. ಸಲಹಾ ಸಮಿತಿ ಕೇವಲ ಒಂದೇ ದಿನ ಸಭೆ ನಡೆಸಿ ಆಯ್ಕೆ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದ್ದಾರೆ.
 
 
 
ಕೇವಲ ಸದನ ಸಲಹ ಸಮಿತಿ ಒಪ್ಪಿಕೊಂಡಿರುವದಕ್ಕೆ ನಾವು ಸಹಿ ಹಾಕಬೇಕೆಂಬ ನಿಯಮವಿಲ್ಲ. ಆಯ್ಕೆ ಮಾಡಿದ ವಿಧಾನ ಸಾರ್ವಜನಿಕವಾಗಿ ಅನುಮಾನಕ್ಕೆ ಎಡೆಮಾಡಿಕೊಟ್ಟರೆ ಕಾರ್ಯಾಂಗದ ಮುಖ್ಯಸ್ಥರಾದ ರಾಜ್ಯಪಾಲರು ಪ್ರಶ್ನೆ ಮಾಡಬಹುದೆಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

LEAVE A REPLY

Please enter your comment!
Please enter your name here