ನ್ಯಾಯಮೂರ್ತಿ ಎಸ್ ಅಬ್ದುಲ್ ನಝೀರ್ ಗೆ ಸನ್ಮಾನ

0
277

ಮೂಡುಬಿದಿರೆ ಪ್ರತಿನಿಧಿ ವರದಿ
ಮೂಡಬಿದಿರೆ ವಕೀಲರ ಸಂಘದ ವತಿಯಿಂದ ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಗೌರವಾನ್ವಿತ ನ್ಯಾಯಮೂರ್ತಿ ಮೂಡಬಿದಿರೆಯ ಎಸ್ ಅಬ್ದುಲ್ ನಝೀರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮೂಡುಬಿದಿರೆ ಕೋರ್ಟ್  ಆವರಣದಲ್ಲಿ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶ ಎ ಎನ್ ವೇಣುಗೋಪಾಲ ಗೌಡ, ಹೈಕೋರ್ಟ್ ನ್ಯಾಯಾಧೀಶರಾದ ಎ ಎಸ್ ಗೋಪಣ್ಣ ಮತ್ತು ಜೋನ್ ಮೈಕೆಲ್ ಡಿ.ಕುನ್ಹಾ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು ಮೂಡುಬಿದಿರೆ ಬಾರ್ ಅಸೋಸಿಯೇಷನ್ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ನಾಗೇಶ್ ಶೆಟ್ಟಿ ವಕೀಲರ ಸಂಘದ ಉಪಾಧ್ಯಕ್ಷರು, ಪ್ರವೀಣ್ ಲೋಬೋ, ಎಂ.ಬಿ ವಿಜಯ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here