ನ್ಯಾಚುರಲ್ ಲೀಡರ್ ಬಗ್ಗೆ ಅರಿವು ಮೂಡಿದೆ

0
331

ಬೆಂಗಳೂರು ಪ್ರತಿನಿಧಿ ವರದಿ
ಕರ್ನಾಟಕ ಒಂದು ಇನ್ನೋವೇಟಿವ್ ರಾಜ್ಯವಾಗಿದೆ. ಭಾರತದ ಪ್ರಗತಿ ದರಕ್ಕಿಂತ ಕರ್ನಾಟಕದ್ದು ಹೆಚ್ಚಾಗಬೇಕು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
 
 
ಬೆಂಗಳೂರಿನಲ್ಲಿ ಮಾತನಾಡಿದ ಜೇಟ್ಲಿ, ಯುಪಿಎ ಸರ್ಕಾರದಲ್ಲಿ ನ್ಯಾಚುರಲ್ ಲೀಡರ್ ಇರಲಿಲ್ಲ. ಪ್ರಧಾನಿ ಮೋದಿ ಬಂದ ಮೇಲೆ ನ್ಯಾಚುರಲ್ ಲೀಡರ್ ಬಗ್ಗೆ ಅರಿವು ಮೂಡಿದೆ. ನ್ಯಾಚುರಲ್ ಲೀಡರ್ ಹೇಗಿರಬೇಕೆಂದು ದೇಶರಕ್ಕೆ ಅರಿವಾಗಿದೆ.
 
 
 
ಯುಪಿಎ ಸರ್ಕಾರಕ್ಕೆ ಅಭಿವೃದ್ಧಿಯ ಉದ್ದೇಶವೇ ಇಲ್ಲ. ನಮ್ಮ ಸರ್ಕಾರ ಬಂದ ಮೇಲೆ ಧೈರ್ಯವಾಗಿ ನಿರ್ಧರಿಸಬಹುದು. 2019ರ ಅಂತ್ಯಕ್ಕೆ ಎಲ್ಲಾ ಗ್ರಾಮಗಳಿಗೂ ರಸ್ತೆ ಸೌಕರ್ಯ ಕಲ್ಪಿಸಲಾಗುತ್ತದೆ. 2018ರ ಹೊತ್ತಿಗೆ ಎಲ್ಲಾ ಗ್ರಾಮಗಳಿಗೂ ವಿದ್ಯುತ್ ವ್ಯವಸ್ಥೆ ಮಾಡಲಾಗುತ್ತದೆ. 2022ಕ್ಕೆ ದೇಶದಲ್ಲಿ ಎಲ್ಲಾ ವಸತಿರಹಿತರು ಇರಬಾರದು. ಇದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಟಾರ್ಗೆಟ್ ಆಗಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
 
 
 
ಇನ್ನೂ 35 ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು. ಹಳ್ಳಿ ಮತ್ತು ನಗರಗಳನ್ನು ಜೋಡಿಸುವ ಕೆಲಸವಾಗಬೇಕಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here