ಪ್ರಮುಖ ಸುದ್ದಿವಾರ್ತೆಸಿನಿಮಾ

ನೋ ಕಾಮೆಂಟ್ಸ್!

ನಮ್ಮ ಪ್ರತಿನಿಧಿ ವರದಿ
ದರ್ಶನ್ ಟ್ವೀಟ್ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆಸದೆ ತೆರಳಿದ್ದಾರೆ. ತುಮಕೂರಿನಲ್ಲಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿ ಸುದೀಪ್ ತೆರಳಿದ್ದಾರೆ. ದರ್ಶನ್ ಅನ್ನುತ್ತಲೇ ಸುದೀಪ್ ಸ್ಥಳದಿಂದ ಹೊರಟು ಹೋಗಿದ್ದಾರೆ.
 
 
 
ಏನಿದು ಘಟನೆ?
ಸ್ಯಾಂಡಲ್ ವುಡ್ ನ ಖ್ಯಾತ ಕುಚಿಕು ಗೆಳೆಯರಾದ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಸ್ನೇಹ ಸಂಬಂಧ ಅಂತ್ಯವಾಗಿದೆ. ‘ನಮ್ಮಬ್ಬಿರ ಗೆಳೆತನ ಇಲ್ಲಿಗೆ ಅಂತ್ಯ’ ಎಂದು ಸ್ವತಃ ದಾಸ ದರ್ಶನ್ ಟ್ವೀಟ್ ಮಾಡಿದ್ದಾರೆ. ನಾನು ಸುದೀಪ್ ಸ್ನೇಹಿತರಲ್ಲ, ಕೇವಲ ಕಲಾವಿದರಷ್ಟೇ’ ಎಂದು ದರ್ಶನ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ತಿಳಿಸಿದ್ದರು. ಖಾಸಗಿ ವಾಹಿನಿಯಲ್ಲಿ ಸುದೀಪ್ ಕೊಟ್ಟ ಒಂದು ಇಂಟರ್ವ್ಯೂ ಇವರಿಬ್ಬರ ಸ್ನೇಹಕ್ಕೆ ಸಾಗರದಲ್ಲಿ ಸುನಾಮಿ ಎಬ್ಬಿಸಿದೆ ಎನ್ನಲಾಗಿದೆ. ಸರಣಿ ಟ್ವೀಟ್ ಮೂಲಕ ಗೆಳೆತನ ಕಡಿದುಕೊಂಡಿರುವುದಾಗಿ ಘೋಷಿಸಿದರು.
ದರ್ಶನ್ ಅವರು ಗೆಳೆತನ ಬ್ರೇಕ್ ಆಗಲು ಕಾರಣ ಎನ್ನಲಾದ ವಿಡಿಯೋವೊಂದನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದರು.ನನ್ನ ಸುದೀಪ್ ನಡುವೆ ಏನಿಲ್ಲ, ದಯವಿಟ್ಟು ಯಾವುದೇ ಗಾಳಿಸುದ್ದಿ ಹಬ್ಬಿಸಬೇಡಿ, ಇದು ಇಲ್ಲಿಗೆ ಅಂತ್ಯ ಎಂಬರ್ಥದಲ್ಲಿ ದರ್ಶನ್ ತೂಗುದೀಪ ಅವರು ಟ್ವೀಟ್ ಹಾಗೂ ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದಾರೆ.
ಈ ಇಬ್ಬರು ನಾಯಕರು ಸ್ಪರ್ಶ ಮತ್ತು ಮೆಜೆಸ್ಟಿಕ್ ಚಿತ್ರಗಳ ಮೂಲಕ ಲಕ್ಕಿ ಹೀರೊಯಿನ್ ಆದವ್ರು. ಸುಮಾರು 15 ರಿಂದ 17 ವರ್ಷಗಳ ನಂಟು ಈ ನಲ್ಲ ಮತ್ತು ಅಯ್ಯನದು. ಉಭಯ ನಾಯಕರು ತಮ್ಮ ಸಿನಿ ಬದುಕಿನ ಜೊತೆ ಜೊತೆಗೆ, ಸ್ನೇಹ ಸಾಗರವನ್ನು ವಿಶಾಲಗೊಳಿಸಿದ್ದರು.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here