ನೋಡಿ ಸ್ವಾಮೀ ಹೇಳೋದು ಕೇಳಿ…ನಿಮ್ಮ ಒಳ್ಳೇದಕ್ಕೇ ಹೇಳ್ತಿದ್ದೀವಿ…ಪೊಲೀಸರಿಂದ ಹೀಗೊಂದು ಮನವಿ!

0
837

ಮೂಡುಬಿದಿರೆ: ಹೌದು..ಕಿಲ್ಲರ್‌ ಕೊರೊನಾದಿಂದ ದೂರವಿರಲು ಪೊಲೀಸ್‌ ಇಲಾಖೆ ಜನತೆಯಲ್ಲಿ ಪರಿ ಪರಿಯಾಗಿ ಮನವಿ ಮಾಡುತ್ತಿದೆ. ಮೂಡುಬಿದಿರೆಯ ಜನತೆಯಲ್ಲಿ ಎಚ್ಚರಿಕೆಯಿಂದಿರುವಂತೆ ವಿನಂತಿಸಿದೆ. ದಿನ ನಿತ್ಯದ ವಸ್ತುಗಳ ಖರೀದಿಗೆ ಬರುವವರಲ್ಲಿ ಮಾಸ್ಕ್‌ ತೊಡಿ, ಅಂತರ ಕಾಯ್ದುಕೊಳ್ಳುವಂತೆ ಸಲಹೆ ಮಾಡಿದೆ. ಒತ್ತೊತ್ತಾಗಿ ನಿಲ್ಲಬೇಡಿ, ಜನ ಜಮಾಯಿಸದಿರಿ ಎಂದು ತಿಳುವಳಿಕೆ ನೀಡುತ್ತಿದೆ. ಒಟ್ಟಿನಲ್ಲಿ ಮೂಡುಬಿದಿರೆಯಲ್ಲಿ ಜನತೆ ಜಾಗೃತರಾಗುವಂತೆ ಆದಷ್ಟು ನಿಯಂತ್ರಣ ಮಾಡುತ್ತಿದ್ದ ದೃಶ್ಯ ಕಂಡು ಬಂತು.

ಅಂತರ ರೇಖೆ: ಮೂಡುಬಿದಿರೆಯ ದಿನಸಿ ಅಂಗಡಿ, ಮಾಂಸ, ತರಕಾರಿ, ಮೆಡಿಕಲ್‌ ಶಾಪ್‌ ಗಳ ಮುಂಭಾಗದಲ್ಲಿ ಜನತೆ ಅಂತರ ಕಾಯ್ದು ಸರತಿ ಸಾಲಿನಲ್ಲಿ ಆಹಾರ ಸಾಮಾಗ್ರಿಖರೀದಿಸಲು ಸುಣ್ಣದ ಗೆರೆಗಳನ್ನು ಹಾಕಿ ಮೂಡುಬಿದಿರೆ ಪೊಲೀಸ್‌ ಹಾಗೂ ಸ್ಥಳೀಯ ಸಂಘಟನೆ ಸದಸ್ಯರು ಕಾರ್ಯ ನಿರ್ವಹಿಸಿರುವುದು ಸವತ್ರ ಶ್ಲಾಘನೆಗೆ ಪಾತ್ರವಾಗಿದೆ. ಎಲ್ಲೂ ಒತ್ತಡಗಳು, ಗೊಂದಲಗಳಾಗದಂತೆ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ. ಸಮಯಕ್ಕೆ ಸರಿಯಾಗಿ ಅಂಗಡಿಗಳನ್ನು ತೆರೆದು ಸರಿಯಾದ ಸಮಯಕ್ಕೆ ಮುಚ್ಚುವಂತೆ ನೋಡಿಕೊಳ್ಳಲಾಗಿದೆ.

ವಾಟ್ಸ್‌ ಆಪ್‌ ಗ್ರೂಪ್‌ ರಚನೆ: ಮೂಡುಬಿದಿರೆ ಪರಿಸರದಲ್ಲಿ ಕೊರೊನೊ ಸಮಸ್ಯೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ, ಅಶಕ್ತ ಜನರ ಅತ್ಯವಶ್ಯಕತೆ ಸ್ಪಂದಿಸುವುದು ಹಾಗೂ ತುರ್ತು ಸ್ಪಂದನೆಯ ಸದುದ್ದೇಶದಿಂದ ʻಜೆ.ಬಿ ಎಮರ್ಜೆನ್ಸಿ ಟೀಂʼ ಎಂಬ ವಾಟ್ಸ್‌ ಆಪ್‌ ಗ್ರೂಪ್‌ ರಚನೆಗೊಂಡಿದೆ. ಮೂಡುಬಿದಿರೆಯ ಪ್ರತಿಷ್ಠಿತ ಸಂಘಟನೆ ಜವನೆರ್‌ ಬೆದ್ರದ ಅಮರ್‌ ಕೋಟೆ ನೇತೃತ್ವದಲ್ಲಿ ನಿರ್ಮಾಣಗೊಂಡ ಈ ತಂಡವು ತುರ್ತು ಪರಿಸ್ಥಿತಿಯ ಸ್ವಯಂಸೇವಕರು ನಾವು ಎಂದು ಈ ವಾಟ್ಸ್‌ ಆಪ್‌  ಹೇಳಿಕೊಂಡಿದೆ.

Advertisement

ಮೂಡುಬಿದಿರೆ ಸ್ಪೂರ್ತಿ ವಿಶೇಷ ಶಾಲೆಯ ಆಡಳಿತ ಮಂಡಳಿ ಮೂಡುಬಿದಿರೆ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಅಸಹಾಯಕರಿಗೆ ಅಗತ್ಯ ದಿನಸಿ ವಸ್ತುಗಳನ್ನು ಉಚಿತವಾಗಿ ಅವರವರ ಮನೆಗೆ ತಲುಪಿಸುವ ಕಾರ್ಯ ಮಾಡುತ್ತಿದೆ.

ಸ್ಫೂರ್ತಿ ಶಾಲೆಯ ಆಡಳಿತ ಮಂಡಳಿಯಿಂದ ಅಸಹಾಯಕರಿಗೆ ಸಹಕಾರ

ಪೊಲೀಸ್‌ ಇಲಾಖೆ ಶ್ಲಾಘನೆ: ಜೆ.ಬಿ.ಎಮರ್ಜೆನ್ಸಿ ಟೀಂ ಗೆ ಮೂಡುಬಿದಿರೆ ಪೊಲೀಸ್‌ ನಿರೀಕ್ಷಕರಾದ ದಿನೇಶ್‌ ಕುಮಾರ್‌ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಉತ್ತಮ ಕಾರ್ಯ ಮಾಡುವ ಉದ್ದೇಶದಿಂದ ರಚನೆಗೊಂಡ ತಂಡಕ್ಕೆ ಶುಭ ಹಾರೈಸಿದ್ದಾರೆ.

ವಾರ್‌ ರೂಂ: ಭಾರತೀಯ ಜನತಾ ಪಾರ್ಟಿ ಮೂಡುಬಿದರೆ ಮಂಡಲ ವತಿಯಿಂದ ಜಗತ್ತಿಗೆ ಬಂದಿರುವ ಮಹಾಮಾರಿ ಕೊರೊನಾ ವಿರುದ್ಧ ಹೋರಾಡಲು ಹಾಗೂ ಜನತೆಗೆ ಸ್ಪಂದಿಸುವ ನಿಟ್ಟಿನಲ್ಲಿ ವಾರ್‌ ರೂಂ ತೆರೆಯಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಜವನೆರ್‌ ಬೆದ್ರದಿಂದ ಕಾರ್ಯ: ಮೂಡುಬಿದಿರೆಯ ಅಮರ್‌ ಕೋಟೆ ನೇತೃತ್ವದ ಜವನೆರ್‌ ಬೆದ್ರ ತಂಡವು ಅಂಗಡಿಗಳ ಮುಂಭಾಗದಲ್ಲಿ ಜನತೆ ಅಂತರ ಕಾಯ್ದಕೊಳ್ಳುವಂತೆ ಸುಣ್ಣದ ಗೆರೆಗಳನ್ನು ಎಳೆದು ಪೊಲೀಸ್‌ ಇಲಾಖೆಗೆ ಸಹಕಾರ ನೀಡಿತು.

ಮೂಡುಬಿದಿರೆಯ ಸ್ವಯಂ ಸೇವಾ ಸಮಾನ ಮನಸ್ಕರ ಯುವಕರು ಜನತೆಯ ಅತ್ಯವಶ್ಯಕತೆಗಳನ್ನು ಪೂರೈಸಲು  ಸಿದ್ಧವಾಗಿವೆ. ವಾಟ್ಸ್‌ ಆಪ್‌ ಮೂಲಕ ಸಹಕಾರ ನೀಡುವುದಾಗಿ ವಿನಂತಿಸಿಕೊಂಡಿದೆ.

ನಾಳೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12ರ ವರೆಗೆ ಈ ಬಳಗ ಮತ್ತೆ ಕಾರ್ಯೋನ್ಮುಖವಾಗಲಿದೆ. ಬಳಗದ ಸದಸ್ಯರೆಲ್ಲರ ಒಗ್ಗೂಡುವಿಕೆಯಿಂದ ನಾವು ಬಹಳಷ್ಟನ್ನು ಸಾಧಿಸಬೇಕಿದೆ.. ಕೊರೋನದ ವಿರುದ್ಧ ಹೋರಾಡಬೇಕಿದೆ. ನಮ್ಮವರನ್ನು ನಾವು ರಕ್ಷಿಸಬೇಕಿದೆ.

ಗುರುವಾರವೂ ಕಾರ್ಯ:  ಮೂಡುಬಿದಿರೆಯ ಪ್ರದೇಶಗಳಲ್ಲಿ ಜನರ ಅಗತ್ಯಕ್ಕೆ ತಕ್ಕಂತೆ ಅವಶ್ಯಕ ವಸ್ತುಗಳ ಪೂರೈಕೆಗೆ ಜೆ.ಬಿ.ಎಮರ್ಜೆನ್ಸಿ ಟೀಂ ಸಿದ್ಧಗೊಂಡಿದೆ.

ದಿನಸಿ ಸಾಮಾಗ್ರಿಗಳ ಪಟ್ಟಿಯೊಂದಿಗೆ ಮನೆಯ ವಿಳಾಸ ಹಾಗೂ ಅವರ ಮೊಬೈಲ್ ನಂಬರ್ ನಿಮಗೆ ತಂಡದ ಸದಸ್ಯರಿಗೆ ಒದಗಿಸುವ ವ್ಯವಸ್ಥೆ ಮಾಡುವುದಲ್ಲದೆ,  ದಿನಸಿ ಸಾಮಾಗ್ರಿಗಳ ಪಟ್ಟಿಯನ್ನು ಕೊಂಡು ಹೋಗಿ  ಅಂಗಡಿಗಳಲ್ಲಿ ಖರೀದಿಸಿ ಖರೀದಿಸಿದ ಬಿಲ್‌ನೊಂದಿಗೆ ಆಯಾ ವಿಳಾಸಕ್ಕೆ ತಮ್ಮ ವಾಹನಗಳಲ್ಲಿ ತಲುಪಿಸಿ  ಬಿಲ್ ಮೊತ್ತವನ್ನು ಮಾತ್ರ ಪಡೆದುಕೊಳ್ಳುವ ತೀರ್ಮಾನ ತಂಡ ತೆಗೆದುಕೊಂಡಿದೆ.  

LEAVE A REPLY

Please enter your comment!
Please enter your name here