ನೋಡಿ..ನೀವು..ಮನೆಯಲ್ಲಿಯೇ ಇರಿ…

0
355
ಚಿತ್ರ: ರವಿ,ಮಾನಸ ಡಿಜಿಟಲ್ಸ್

ಮೂಡುಬಿದಿರೆಯಲ್ಲಿ ಜನತೆಗೆ ಹಾಗೂ ದಿನಸಿ ಅವಶ್ಯ ವಸ್ತುಗಳ ಖರೀದಿಗೆ ಮಧ್ಯಾಹ್ನ ೧೨ರ ವರೆಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಅವಧಿಗೂ ಮೀರಿ ತೆರೆದರೆ ಹಾಗೂ ಜನ ಸಂಚಾರ ಕಂಡು ಬಂದರೆ ಕೂಡಲೇ ದಂಡ ಹಾಗೂ ಕ್ರಮ ಕೈಗೊಳ್ಳುವುದಾಗಿ ಮೂಡುಬಿದಿರೆ ಪೊಲೀಸ್‌ ಖಡಕ್‌ ಸೂಚನೆ ನೀಡಿದ್ದಾರೆ. ಹೌದು ಮೂಡುಬಿದಿರೆಯಲ್ಲಿ ನಿನ್ನೆಯಂತೆ ಇಂದಿಲ್ಲ. ಕೊಂಚ ಜನ ಎಚ್ಚೆತ್ತುಕೊಂಡಂತೆ ಭಾಸವಾಗುತ್ತಿತ್ತು. ಆದರೂ ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆಯವರ ಮುತುವರ್ಜಿಯಿಂದ ಜನತೆ ಒಂದಷ್ಟು ಎಚ್ಚೆತ್ತುಕೊಂಡಂತೆ ಭಾಸವಾಗುತ್ತಿದೆ. ಮೂಡುಬಿದಿರೆಯಲ್ಲಿ ಬೆಳಗ್ಗಿನ ಹೊತ್ತಲ್ಲಿ ಅಂಗಡಿಗಳು ಕಾರ್ಯಾಚರಿಸುತ್ತಿದ್ದವಾದರೂ; ಪೊಲೀಸ್‌ ಇಲಾಖೆ ಅನಾವಶ್ಯಕವಾಗಿ ರಸ್ತೆಗಿಳಿದವರಿಗೆ ʻಬುದ್ದಿʼಹೇಳಿ ಮನೆಗೆ ಕಳುಹಿಸಿತು. ವಾಹನದಲ್ಲಿ ಮೈಕ್‌ ಮೂಲಕ ʻಮನೆಯಲ್ಲಿಯೇ ಇರಿʼ ಎಂಬ ಸಂದೇಶವನ್ನು ಸಾರಿತಲ್ಲದೆ, ಸೆಕ್ಷನ್‌ ೧೪೪ಜಾರಿಯಲ್ಲಿರುವುದರಿಂದ ಅನಾವಶ್ಯಕ ಹೊರಬರಬೇಡಿ ಎಂಬ ಎಚ್ಚರಿಕೆ ಸಂದೇಶ ನೀಡಿತು.

ಸಂಜೆಯ ವೇಳೆಗೆ ಎಲ್ಲವೂ ಸ್ತಬ್ಧ: ಮೂಡುಬಿದಿರೆಯಲ್ಲಿ ಸಂಜೆಯ ವೇಳೆಗೆ ನೀರವ ಮೌನ ಆವರಿಸಿತ್ತು. ಒಬ್ಬರೇ ಒಬ್ಬರು ಮೂಡುಬಿದಿರೆಯ ರಸ್ತೆಗಳಲ್ಲಿರಲಿಲ್ಲ. ಪ್ರತಿಯೊಬ್ಬರು ಸರಕಾರದ ಆದೇಶ ಪಾಲನೆ ಮಾಡಿದ್ದರು. ಕರಾಳ ಮೌನ ಮೂಡುಬಿದಿರೆಯಲ್ಲಿತ್ತು.

LEAVE A REPLY

Please enter your comment!
Please enter your name here