ನೋಟ್ ಅಪಮೌಲ್ಯಕ್ಕೆ 1 ತಿಂಗಳು

0
349

ವಿಶೇಷ ಲೇಖನ
ಕೇಂದ್ರ ಸರ್ಕಾರದಿಂದ ಹಳೆ ನೋಟುಗಳು ಬ್ಯಾನ್ ಇಂದಿಗೆ ಒಂದು ತಿಂಗಳಾಯಿತು. ನ.8ರಂದು ರಾಷ್ಟ್ರದಲ್ಲಿ 500 ಮತ್ತು 1000 ರೂ.ಮುಖಬೆಲೆಯ ನೋಟ್ ರದ್ದಾಗಿದೆ. ನೋಟ್ ಬ್ಯಾನ್ ಆದಾಗಿನಿಂದ ಜನರು ತೀವ್ರ ಪರದಾಟ ನಡೆಸಿದ್ದಾರೆ. ಅಲ್ಲದೆ ದಿನ ನಿತ್ಯ ಬ್ಯಾಂಕ್, ಎಟಿಎಂ ಮುಂದೆ ಕಿ.ಮೀಸಟ್ಟಲೆ ಸರತಿ ಸಾಲು ಕಂಡುಬರುತ್ತಿದೆ. ಜತೆಗೆ ಎಟಿಎಂಗಳ ಮುಂದೆ ನಿತ್ಯ ನೋ ಕ್ಯಾಶ್ ಅನ್ನೋ ಬೋರ್ಡ್ ಬೇರೆ…
ನೋಟ್ ಬ್ಯಾನ್ ಆಗಿ ಇಂದಿಗೆ 30 ದಿನಗಳಾದರೂ ಹಣಕ್ಕಾಗಿ ಸಾರ್ವಜನಿಕರ ಪರದಾಟ ಕಷ್ಟ ಇನ್ನೂ ಕಡಿಮೆಯಾಗಿಲ್ಲ. ಆದರೆ 50 ದಿನಗಳಲ್ಲಿ ಈ ಎಲ್ಲಾ ಸಮಸ್ಯೆಗಳು ಸರಿ ಹೋಗುತ್ತದೆ ಎಂದು ಪ್ರದಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದಾರೆ.
ನೋಟ್ ಬ್ಯಾನ್ ಎಫೆಕ್ಟ್:

  1. ಇತಿಹಾಸ ನಿರ್ಮಾಣ:
    ನೋಟ್ ಬ್ಯಾನ್ ನಿಂದ ಪ್ರಧಾನಿ ನರೇಂದ್ರ ಮೋದಿ ಅವರು ಇತಿಹಾಸವನ್ನೇ ನಿರ್ಮಾಣ ಮಾಡಿದ್ದಾರೆ.  ದೇಶದಲ್ಲಿನ ಖೋಟಾನೋಟು ಚಲಾವಣೆ, ಭ್ರಷ್ಟಾಚಾರ, ಭಯೋತ್ಪಾದನೆ, ಕಪ್ಪುಹಣ ತಡೆಯುವ ಉದ್ದೇಶದಿಂದ ಪ್ರದಾನಿ 500 ಮತ್ತು 1000ರೂ. ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ್ದಾರೆ.

   2) ಪ್ರೀತಿಯಿಂದ ಸ್ವೀಕರಿಸಿದ ಸಾಮಾನ್ಯರು:
ನೋಟ್ ಬ್ಯಾನ್ ನಿಂದ ಸಾರ್ವಜನಿಕರು ಕಷ್ಟಪಟ್ಟರೂ ಅದನ್ನು ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಅಲ್ಲದೆ ಪ್ರಧಾನಿ ನೋಟ್ ಬ್ಯಾನ್ ಮಾಡಿದ್ದು, ಒಳ್ಳೆದ್ದೇ ಆಯ್ತು, ಸ್ವಲ್ಪ ದಿನ ನಮಗೆ ಕಷ್ಟ ಆಗಬಹುದು. ಆದರೆ ಇದರಿಂದ ದೇಶಕ್ಕೆ ಒಳ್ಳೆದಾಗಲಿದೆ ಎಂದು ಸಾರ್ವಜನಿಕರು ಖುಷಿಯಿಂದ ಹೇಳುತ್ತಾರೆ.
 3) ಕಳಧನಿಕರಿಗೆ ಭಾರೀ ಹೊಡೆತ:
ನೋಟ್ ಬ್ಯಾನ್ ನಿಂದ ಕಳಧನಿಕರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಮನೆಯಲ್ಲಿ ಅಟ್ಟಿ ಅಟ್ಟಿಯಾಗಿ ಕಟ್ಟಿಟ್ಟ ಕಪ್ಪು ಹಣವನ್ನು ಹೇಗೆ ಪಿಂಕ್ ಮಾಡುವುದು ಎಂದು ಯೋಚಿಸಿ ಕಂಗಾಲಾಗಿದ್ದಾರೆ ಎಂದರೂ ತಪ್ಪಾಗಲಾರದು.
 
 
 
4) ಈಗಿರುವ ನೋಟ್ ಗಳೂ ಇತಿಹಾಸ ಸೇರುವ ಸಾಧ್ಯತೆ?
ಅಲ್ಲದೆ ಈಗ ಚಲಾವಣೆಯಲ್ಲಿರುವ ನೋಟುಗಳು ಸಹ ಮುಂದಿನ ದಿನಗಳಲ್ಲಿ ಬ್ಯಾನ್ ಆಗುವ ಸಾಧ್ಯತೆಗಳು ಹೆಚ್ಚಾಗಿದೆ.
 
ಬ್ಯಾಂಕ್ ಗಳಲ್ಲಿ ಹಣವನ್ನು ಹೇಗೆ-ಎಷ್ಟು ಪಡೆಯಬಹುದು?
ಸಾರ್ವಜನಿಕರು ತನ್ನ ವೈಯುಕ್ತಿಕ ಖಾತೆಯಿಂದ ಒಂದು ವಾರಕ್ಕೆ 24 ಸಾವಿರ ರೂ ಹಣವನ್ನು ಬಿಡಿಸಿಕೊಳ್ಳಬಹುದು. ವ್ಯಕ್ತಿ ಕೃಷಿಕನಾಗಿ ಖಾತೆ ತೆರೆಯುವಾಗ ತನ್ನ ಉದ್ಯೋಗವನ್ನು ಕೃಷಿಯೆಂದು ಖಾತೆಯಲ್ಲಿ ನಮೂದಿಸಿದ್ದರೆ ಆ ವ್ಯಕ್ತಿಗೆ ಒಂದು ವಾರಕ್ಕೆ 25 ಸಾವಿರ ರೂ ಬಿಡಿಸಿಕೊಳ್ಳಲು ಅವಕಾಶವಿದೆ ಇನ್ನು ವ್ಯಾಪಾರಸ್ಥರಾದರೆ ತಮ್ಮ ಫರ್ಮ್ ಹೆಸರಿನ ಖಾತೆಯಿಂದ ಒಂದು ವಾರಕ್ಕೆ 50 ಸಾವಿರ ರೂ ಹಣ ಬಿಡಿಸಿಕೊಳ್ಳಲು ಅವಕಾಶವಿದೆ. ಇದರ ಜೊತೆಗೆ ಎಟಿಎಂನಿಂದಲೂ ದಿನವೊಂದಕ್ಕೆ 2000 ರೂ ನಂತೆ ವಾರಕ್ಕೆ 24 ಸಾವಿರ ರೂ ಗಳನ್ನು ಯಾವುದೇ ಶುಲ್ಕವಿಲ್ಲದೆ ತೆಗೆದುಕೊಳ್ಳಬಹುದು. ಈ ಸೌಲಭ್ಯ ಇದು ಡಿ.31 ರವರೆಗೆ ಮಾತ್ರ ಇರುತ್ತದೆ.
ಮದುವೆ ಕಾರ್ಯಕ್ರಮಕ್ಕೆ ಆರ್ ಬಿಐ, ವಧು ಮತ್ತು ವಧುವಿನ ತಂದೆ,ತಾಯಿ ಹಾಗೂ ವರ ಮತ್ತು ವರನ ತಂದೆ, ತಾಯಿ ಈ ಆರು ಜನರಲ್ಲಿ ಒಬ್ಬರಿಗೆ 2.5 ಲಕ್ಷ ರೂ ಹಣವನ್ನು ಬಿಡಿಸಿಕೊಳ್ಳಲು ಅವಕಾಶ ನೀಡಿದೆ. ಅದು ನ.8 ಕ್ಕೂ ಮೊದಲು ಖಾತೆಯಲ್ಲಿ ಹಣ ಜಮಾವಾಗಿದ್ದರೆ ಮಾತ್ರ ಬಿಡಿಸಿಕೊಳ್ಳಬಹುದು. ಬ್ಯಾಂಕ್ ಗೆ 2.5 ಲಕ್ಷಕ್ಕೆ ಖರ್ಚಿನ ವಿವರವನ್ನು ಮೊದಲೇ ತೋರಿಸಬೇಕು, ಜೊತೆಗೆ ಆಮಂತ್ರಣ ಪತ್ರಿಕೆ ನೀಡಬೇಕು.

LEAVE A REPLY

Please enter your comment!
Please enter your name here