ನೋಟು ಕಳ್ಳರ ಪತ್ತೆಗಾಗಿ ರಹಸ್ಯ ಕಾರ್ಯಾಚರಣೆ

0
350

ರಾಷ್ಟ್ರೀಯ ಪ್ರತಿನಿಧಿ ವರದಿ
ದೇಶದ 500 ಬ್ಯಾಂಕ್ ಗಳಲ್ಲಿ ಸ್ಟಿಂಗ್ ಆಪರೇಷನ್ ನಡೆದಿದೆ. ದೇಶದ ಹಲವು ಬ್ಯಾಂಕ್ ಗಳಲ್ಲಿ ತೀವ್ರ ನಿಗಾ ಇಟ್ಟ ಕೇಂದ್ರ ಸರ್ಕಾರ ರಹಸ್ಯ ಕಾರ್ಯಾಚರಣೆ ನಡೆಸಿದೆ.ಹಳೆ ನೋಟು ಬದಲಾವಣೆ ವೇಳೆ ನಡೆದ ಅಕ್ರಮದ ಬಗ್ಗೆ ಸ್ಟಿಂಗ್ ಕಾರ್ಯಾಚರಣೆ ನಡೆಸಿದೆ. 400 ಸಿಡಿಗಳಲ್ಲಿ ರಹಸ್ಯ ಕಾರ್ಯಾಚರಣೆ ದೃಶ್ಯ ರೆಕಾರ್ಡ್ ಆಗಿದೆ.
 
ಕೇಂದ್ರ ವಿತ್ತ ಸಚಿವಾಲಯದ ಕಚೇರಿಯಲ್ಲಿ 400 ಸಿಡಿಗಳನ್ನು ಇಡಲಾಗಿದೆ. ಬ್ಯಾಂಕ್ ಗಳಲ್ಲಿನ ಅಧಿಕಾರಿ, ಸಿಬ್ಬಂದಿ ಕೆಲಸದ ಬಗ್ಗೆ ತೀವ್ರ ನಿಗಾ ಇಡಲಾಗಿದೆ. ಕೇಂದ್ರ ಸರ್ಕಾರ ಹಣದ ಚಲಾವಣೆ ಬಗ್ಗೆ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್ ಗಳಲ್ಲಿ ಸ್ಟಿಂಗ್ ಆಪರೇಷನ್ ನಡೆಸಲಾಗಿದೆ.ಬ್ಯಾಂಕ್ ಗಳ ಹಣದ ವಹಿವಾಟಿನ ಬಗ್ಗೆ ಸಿಡಿಗಳಲ್ಲಿ ದಾಖಲು ಮಾಡಲಾಗಿದೆ.
 
ಕೇಂದ್ರ ಸರ್ಕಾರ ಸಿಡಿಗಳ ಪರಿಶೀಲನೆಗೆ ಸಮಿತಿ ಕೂಡ ರಚಿಸಲಿದೆ. 2017ರ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಸಮಿತಿ ರಚಿಸಲಿದೆ. ಸಿಡಿಗಳ ಪರಿಶೀಲನೆ ವೇಳೆ ಬ್ಯಾಂಕ್ ಗಳಲ್ಲಿ ಅಕ್ರಮ ಸಾಬೀತಾದರೆ ಬ್ಯಾಂಕ್ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here