ನೋಟು ಅಪನಗದೀಕರಣ ವಿತ್ತೀಯ ಸೇರ್ಪಡೆಯಲ್ಲಿ ಒಂದು ಮೈಲಿಗಲ್ಲು

0
313

ವರದಿ: ಪ್ರೀತಿ. ಆರ್.ಭಟ್
ನೋಟು ಅಪನಗದೀಕರಣ ನಗದುರಹಿತ ವ್ಯವಹಾರಕ್ಕೆ ಉತ್ತೇಜನವನ್ನು ನೀಡಲಿದೆ. ಇದು ದೇಶದ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿರುವ ಕಪ್ಪು ಹಣದ ಸಂಚಯನ ಹಾಗೂ ಚಲನೆಯನ್ನು ತಡೆಯಲಿದೆ ಎಂದು ಶ್ರೀ.ಧ.ಮಂ.ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಹಾಗೂ ನಿವೃತ್ತ ಬ್ಯಾಂಕ್ ಅಧಿಕಾರಿ ಗುರುನಾಥ ಪ್ರಭು ಅಭಿಪ್ರಾಯಪಟ್ಟರು.
 
 
 
ಶ್ರೀ ಗುರುನಾಥ ಪ್ರಭು ಅವರು ಉಜಿರೆಯ ಶ್ರೀ ಧ ಮಂಕಾಲೇಜಿನ ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿ ವೇದಿಕೆ ಅರ್ಥಾಂಕಣವು ಅಪನಗದೀಕರಣದ ಬಗ್ಗೆ ಆಯೋಜಿಸಿದ ಚರ್ಚಾ ಕೂಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಅವರು ಮಾತನಾಡುತ್ತಾ ಕೆಟ್ಟ ಸಾಲಬಧೆಯಿಂದ ನಲುಗಿ ಹೋಗಿದ್ದ ಬ್ಯಾಂಕುಗಳಿಗೆ ನೋಟು ಅಮಾನ್ಯತೆಯ ಫéಲವಾಗಿ ದೊಡ್ಡ ಪ್ರಮಾಣದಲ್ಲಿ ಹಣ ಹರಿದು ಬಂದಿದೆ ಎಂದು ತಿಳಿಸಿದರು.
 
 
ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಗಣರಾಜ್ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಕಪ್ಪು ಹಣ ಹಾಗೂ ಭ್ರಷ್ಟಾಚಾರದ ವಿಶವರ್ತುಲವನ್ನು ತೊಡೆದುಹಾಕಲು ನಗದು ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಿ ವ್ಯವಹಾರವನ್ನು ಲೆಕ್ಕಾಚಾರ ಸಿಗುವ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕವೇ ನಡೆಸಬೇಕು ಎನ್ನುವುದು ನೋಟು ಅಪನಗದೀಕರಣ ಪ್ರಕ್ರಿಯೆಯ ಆಶಯ ಎಂದು ತಿಳಿಸಿದರು.
 
 
ನಗದುರಹಿತ ವ್ಯವಹಾರಕ್ಕೆ ಸರಕಾರದಿಂದ ಬರುವ ಹೊಸ ರಿಯಾಯಿತಿಗಳು ಮುಂದಿನ ದಿನಗಳಲ್ಲಿ ಇ-ಕ್ರಾಂತಿಗೆ ಭದ್ರ ಬುನಾದಿ ಹಾಕಲಿದೆ. ಡಿಜಿಟಲ್ ಇಂಡಿಯಾ ಸಂಕಲ್ಪ ಹಾಗೂ ಪ್ರಕ್ರಿಯೆಗಳು ವಿತ್ತೀಯ ಸೇರ್ಪಡೆಯಲ್ಲಿ ಒಂದು ಮೈಲಿಗಲ್ಲು ಎಂದು ನೋಟು ಅಪನಗದೀಕರಣದ ಸಾಧಕ ಬಾಧಕಗಳ ಬಗ್ಗೆ ನಡೆದ ಚರ್ಚೆಯಲ್ಲಿ ಅಭಿಪ್ರಾಯಪಡಲಾಯಿತು.
 
 
ಚರ್ಚೆಯಲ್ಲಿ ವಿದ್ಯಾರ್ಥಿಗಳಾದ ಇಂದ್ರೇಶ್, ಕಿಶೋರ್, ಅಭಿಜ್ಞಾ, ವಸುಧಾ, ಗುರುರಾಜ್, ಭಾಗವಹಿಸಿದ್ದರು. ವೇದಿಕೆಯಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎ.ಜಯಕುಮಾರ ಶೆಟ್ಟಿ ಹಾಗೂ ಅರ್ಥಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದ ಡಾ ಯುವರಾಜ್ ಉಪಸ್ಥಿತರಿದ್ದರು. ಕು.ಸಿಂಧು ಸ್ವಾಗತಿಸಿ ಅಸ್ರತ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಕೊನೆಗೆ ಸ್ವಾತಿ ವಂದಿಸಿದರು.
 

LEAVE A REPLY

Please enter your comment!
Please enter your name here