ನೋಟುಗಳು ಪರಿವರ್ತೆನೆಯಾದವು…ಅಚ್ಚರಿ ಮೂಡಿತು!!!

0
1392


ನಿತ್ಯ ಅಂಕಣ:೭೦-ತಾರಾನಾಥ್‌ ಮೇಸ್ತ,ಶಿರೂರು.
ಗುರುದೇವ ನಿತ್ಯಾನಂದರ ಭಕ್ತರು ಸೇರಿಕೊಂಡು ಗಣೇಶಪುರಿಯಲ್ಲಿ “ಅಕ್ಷರ ಸರಸ್ವತಿ ದೇವಾಲಯ” ಸ್ವರೂಪವಾದ ಶಾಲೆಯೊಂದನ್ನು ನಿರ್ಮಿಸಲು ಯೋಚಿಸುತ್ತಾರೆ. ಅದರಂತೆ ಕಟ್ಟಡ ನಿರ್ಮಾಣ ಕಾರ್ಯನಡೆಸಲು ದಾನಿಗಳಿಂದ ದೇಣಿಗೆ ಸಂಗ್ರಹಗಳು ನಡೆಯುತ್ತಿರುತ್ತವೆ.

ಒಂದು ದಿನ ಗುರುದೇವರ ಭಕ್ತ ಮುಂಬಯಿ ನಿವಾಸಿ ಶ್ರೀ ಎ.ಬಿ. ನಾಯರ್ ಎನ್ನುವವರು, ಗುರುದೇವರ ದರ್ಶನ ಪಡೆಯುಲು ಗಣೇಶಪುರಿಗೆ ಬಂದಿದ್ದರು. ಅವರು ಶ್ರೀಮಂತ ವ್ಯಕ್ತಿಯಾಗಿದ್ದರು. ನಾಯರ್ ಅವರಿಗೆ, ಗುರುದೇವರ ಭಕ್ತರು ಸೇರಿಕೊಂಡು ಸರ್ವರ ಸಹಕಾರದೊಂದಿಗೆ ಶಾಲೆ ನಿರ್ಮಿಸುವ ವಿಚಾರವು ತಿಳಿದು ಬರುತ್ತದೆ. ಈ ವಿಚಾರ ತಿಳಿದು ಎ.ಬಿ. ನಾಯರ್ ಅವರು ಸಂತೋಷ ಪಡುತ್ತಾರೆ. ಶಾಲೆ ಕಟ್ಟುವ ಸತ್ಕಾರ್ಯ ಯೋಜನೆಗೆ ತಾನು ನೆರವು ನೀಡಬೇಕೆಂದು ನಿರ್ಧರಿಸುತ್ತಾರೆ. ಅದರಂತೆ ಗುರುದೇವರಿರುವ ಸ್ಥಳದತ್ತ ಬಂದು, ಗುರುದೇವರು ಕುಳಿತಿರುವ ಬೆಂಚಿನ ಕೆಳಗೆ, ಇಟ್ಟಿರುವ ಹರಿವಾಣದಲ್ಲಿ ಒಂದು ಸಾವಿರ ಮುಖಬೆಲೆಯ ನೋಟನ್ನು ಹಾಕುತ್ತಾರೆ. ಆ ಕಾಲದಲ್ಲಿ ಬಹಳ ದೊಡ್ಡದಾದ ಮೊತ್ತ ಅದು. ನಂತರ ನಾಯರ್ ಅವರು ಗುರುದೇವರ ಕಾಲಿಗೆರಗಿ ನಮಸ್ಕರಿಸುತ್ತಾರೆ. ನಂತರ ಪಕ್ಕದಲ್ಲಿದ್ದ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾರೆ.

ಕೂತಲಿಂದ ನಾಯರ್ ಅವರ ಕಣ್ಣುಗಳು ಹಣವಿರುವ ಹರಿವಾಣದ ನೋಟ ಹಾಯಿಸುತ್ತಿದ್ದವು. ಅವರು ನೋಡುತ್ತಿದ್ದಂತೆಯೇ ಒಂದು ಸಾವಿರ ಮುಖಬೆಲೆಯ ನೋಟು, ಒಮ್ಮೆಗೆ ಸಾವಿರ ಮುಖಬೆಲೆಯ, ಕೆಳಗಿನ ಬೆಲೆಯ ಹಲವು ನೋಟುಗಳಾಗಿರುವುದು, ನಾಯರ್ ಅವರಿಗೆ ಕಂಡು ಬಂದಿತು. ನಾಯರ್ ಅವರಿಗೆ ಪರಮಾಶ್ಚರ್ಯ ಆಗುತ್ತದೆ. ಏನಿದು..! ಯಾಕೆ ಹೀಗಾಯಿತು..? ಇದು ನನ್ನ ಕಣ್ಣಿಗೆ ಭ್ರಮೆಯಾಗಿ ಕಾಣುತ್ತೀದೆಯೇ..!! ಏನಾದರೂ ಯಕ್ಷಿಣೆ ನಡೆಯುತ್ತಿದೆಯೇ..? ಎಂದು ಹಲವರು ಪ್ರಶ್ನೆಗಳು ಅವರಿಗೆ ಮನಸ್ಸಿನೊಳಗೆ ಕಾಡುತ್ತವೆ. ಉತ್ತರ ಪಡೆಯಲು ಅವರು ಗುರುದೇವರಲ್ಲಿ ತಾನು ಕಂಡಿರುವ ದೃಶ್ಯವನ್ನು ಹೇಳಲು ಮನಸ್ಸು ಮಾಡುತ್ತಾರೆ. ಆದರೆ ನಾಯರ್ ಅವರಿಗೆ ಕೇಳಲು ಧೈರ್ಯ ಬಾರದೆ ಸುಮ್ಮನಾಗುತ್ತಾರೆ. ಹಾಗೆ ವಿಸ್ಮಯ ಕಂಡು ಮುಂಬೈಗೆ ತೆರಳುತ್ತಾರೆ.

ಮುರುದಿನದ ಪತ್ರಿಕೆಯಲ್ಲಿ ಒಂದು ಸಾವಿರ ನೋಟು ಸರಕಾರವು ಅಮಾನ್ಯೀಕರಣ ಮಾಡಿದೆ. ನೋಟುಗಳು ಹೊಂದಿದವರು ಬ್ಯಾಂಕಿಗೆ ತಲುಪಿಸ ಬಹುದು. ಅದರ ಮೌಲ್ಯದ ಇತರ ನೋಟುಗಳನ್ನು ಪಡೆಯಬೇಕೆಂದು ಪ್ರಕಟಣೆಯಲ್ಲಿ ಸೂಚಿಸಲಾಗಿತ್ತು. ಇಂಗ್ಲೆಂಡ್ ದೇಶದಿಂದ ಬಂದಿರುವ ಆದೇಶವು ಇದಾಗಿತ್ತು. 1938 ರಲ್ಲಿ ಚಲಾವಣೆಗೆ ಬಂದಿದ್ದ ಒಂದು ಸಾವಿರ ಮುಖಬೆಲೆಯ ನೋಟು 1946 ಜನವರಿಯಲ್ಲಿ 12 ರಂದು ಅಮಾನ್ಯೀಕರಣ ಆಗುತ್ತದೆ. ಗುರುದೇವರಿಗೆ ಮಾತ್ರ ದಿವ್ಯಶಕ್ತಿಯಿಂದ ಈ ವಿಚಾರವು ಮೊದಲೇ ತಿಳಿದು ಬರುತ್ತದೆ. ಮುಂಚಿತ ದಿನವೇ ಭಕ್ತನಾದ ನಾಯರ್ ಅವರು ನೀಡಿರುವ ಸಾವಿರ ಮುಖಬೆಲೆಯ ನೋಟನ್ನು ಅವರು ಚಿಲ್ಲರೆಗೊಳಿಸಿ ಪರಿವರ್ತಿಸಿದ್ದರು. ಮರುದಿನ ಪತ್ರಿಕೆ ಓದಿದ ಬಳಿಕ ಗುರುದೇವರ ಪವಾಡದ ಗುಟ್ಟು ಶ್ರೀ ಎ..ಬಿ ನಾಯರ್ ಅವರಿಗೆ ತಿಳಿದು ಅಚ್ಚರಿ ಪಡುತ್ತಾರೆ.

LEAVE A REPLY

Please enter your comment!
Please enter your name here