ನೇರ ಫೋನ್ ಇನ್ ನಲ್ಲಿ ಕೃಷಿತಜ್ಞ

0
517

 
ಮಂಗಳೂರು ಪ್ರತಿನಿಧಿ ವರದಿ
ಮಂಗಳೂರು ಆಕಾಶವಾಣಿಯ ಕಲ್ಯಾಣವಾಣಿ ಜನಪರ ಯೋಜನೆಗಳ ಸರಣಿಯಲ್ಲಿ ನಾಳೆ (ಜೂನ್ 1ರಂದು) ಬುಧವಾರ ಬೆಳಗ್ಗೆ 8.50ರಿಂದ 9.30ರ ವರೆಗೆ ಕೃಷಿತಜ್ಞ ಶ್ರೀಪಡ್ರೆ ಅವರೊಂದಿಗೆ ನೇರ ಫೋನ್ ಇನ್ ಕಾರ್ಯಕ್ರಮ ಪ್ರಸಾರವಾಗಲಿದೆ.
 
 
‘ಹಿಡಿಯೋಣ ಬಾರಾ ಮಳೆ ನೀರ’ ಎಂಬ ವಿಷಯದ ಕುರಿತಾಗಿ ಮಳೆ ನೀರು ಕೊಯ್ಲು, ಮಳೆ ನೀರು ಸಂಗ್ರಹ, ಜಲಮರುಪೂರಣ, ಅಂತರ್ಜಲ ಹೆಚ್ಚಳ, ಬರ ನಿವಾರಣಾ ಉಪಾಯಗಳ ಬಗ್ಗೆ ಕೇಳುಗರು ಪ್ರಶ್ನೆಗಳನ್ನು ಕೇಳಬಹುರು. ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
 
 
 
ಕೇಳುಗರು 2211999 (ಎಸ್ಟಿಡಿ ಸಂಖ್ಯೆ 0824) ಹಾಗೂ ಮೊಬೈಲ್ ಸಂಖ್ಯೆ 827732 8000 ದೂರವಾಣಿಗೆ ಕರೆ ಮಾಡಿ ಸಂವಾದ ನಡೆಸಬಹುದೆಂದು ಕಾರ್ಯಕ್ರಮ ಮುಖ್ಯಸ್ಥರಾದ ಡಾ. ವಸಂತ ಕುಮಾರ್ ಪೆರ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here