ನೇತ್ರಾವತಿ ನೀರು ಬಳಸಿದ್ರೆ ಕ್ರಿಮಿನಲ್ ಕೇಸ್!

0
179

ಮಂಗಳೂರು ಪ್ರತಿನಿಧಿ ವರದಿ
ನೇತ್ರಾವತಿ ನದಿ ನೀರನ್ನೇ ನಂಬಿರುವ ದಕ್ಷಿಣ ಕನ್ನಡ ಜಿಲ್ಲೆಯ ರೈತರಿಗೆ ಸರ್ಕಾರ ಶಾಕ್ ನೀಡಿದೆ. ನೇತ್ರಾವತಿ ನದಿ ನೀರನ್ನು ಉಪಯೋಗಿಸದಂತೆ ಸರ್ಕಾರ ರೈತರಿಗೆ ಎಚ್ಚರಿಕೆ ನೀಡಿದೆ.
 
 
ಜನವರಿಯಲ್ಲಿ ಮಂಗಳೂರು ಪಾಲಿಕೆಗೆ ನೀರಿನ ಸಮಸ್ಯೆ ಎದುರಾಗುವ ಹಿನ್ನೆಲೆಯಲ್ಲಿ ನೇತ್ರಾವತಿ ನದಿ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸಬಾರದು. ಒಂದು ವೇಳೆ ರೈತರು ನದಿ ನೀರನ್ನು ಕೃಷಿಗೆ ಬಳಸಿದ್ರೆ ಕ್ರಿಮಿನಲ್ ಕೇಸ್ ಆಗುತ್ತದೆ ಎಂದು ಜಿಲ್ಲಾಧಿಕಾರಿ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
 
 
ನೇತ್ರಾವತಿ ಕರಾವಳಿ ಜನರ ಜೀವನದಿಯಾಗಿದ್ದು, ಇದೇ ನೀರನ್ನು ನಂಬಿ ಜನ ಬದುಕುತ್ತಿದ್ದಾರೆ. ಈಗ ಸರ್ಕಾರದ ನೀತಿಯಿಂದ ದ.ಕ. ಜಿಲ್ಲೆಯ ಜನರು ಅಸಮಾಧಾನಗೊಂಡಿದ್ದಾರೆ. ಅಲ್ಲದೆ ಡಿಸಿ ಆದೇಶ ಪಾಲಿಸೋದಿಲ್ಲ ಎಂದು ರೈತರು ಕಿಡಿಕಾರಿದ್ದಾರೆ.

LEAVE A REPLY

Please enter your comment!
Please enter your name here