ನೇತ್ರಾವತಿ: ಇಲ್ಲೂ ಅಣೆಕಟ್ಟು ಕಟ್ಟುತ್ತಾರಂತೆ…!

0
254

ದಿನೇಶ್ ಹೊಳ್ಳ
ಇದು ನೇತ್ರಾವತಿ ನದಿಯ ಮೂಲಸ್ಥಾನವಾಗಿರುವ ಎಳನೀರು ಘಾಟಿಯ ಬಂಗರಬಲಿಕೆ ಅರಣ್ಯ ಪ್ರದೇಶ. ಇಲ್ಲಿನ ಶಿಖರಗಳ ಹುಲ್ಲು ಮತ್ತು ಕಣಿವೆ ಭಾಗದ ಶೋಲಾರಣ್ಯಕ್ಕೆ ಒಂದು ನೈಸರ್ಗಿಕ ಸಂಭಂಧವಿದೆ. ಅದರ ಜೊತೆಗೆ ಈ ಹುಲ್ಲುಗಾವಲು ಮತ್ತು ಅಡವಿಯ ನಡುವೆ ಇರುವ ವನ್ಯಜೀವಿಗಳು ಆ ಜೈವಿಕ ಪ್ರದೇಶದ ಪೋಷಕರಾಗಿ ಸಂರಕ್ಷಣಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತವೆ. ಇಲ್ಲಿ ಹುಲ್ಲಿನಿಂದ ಮರದವರೆಗೆ, ಕೀಟದಿಂದ ಕಾಟಿಯವರೆಗೆ ಒಂದು ಅವಿನಾಭಾವ ಸಂಭಂದವಿರುತ್ತದೆ. ಒಂದು ಜೀವಿ ಲಯವಾದರೆ ಅದನ್ನು ಅವಲಂಭಿಸಿರುವ ಇನ್ನೊಂದರ ಅಂತ್ಯವಾಗಬಹುದು. ಪರಮಶಿವಯ್ಯನವರ ನದಿ ತಿರುವು ಯೋಜನೆಯ ಪ್ರಕಾರ ಈ ಅರಣ್ಯ ಪ್ರದೇಶದಲ್ಲಿ ಕೂಡಾ ಅಣೆಕಟ್ಟು ಕಟ್ಟಿ ಪೈಪ್‌ಲೈನ್ ಮಾಡಿ ಬೆಟ್ಟ ಕೊರೆಯುವ ಯೋಜನೆ ಇದೆ

LEAVE A REPLY

Please enter your comment!
Please enter your name here