ನೆಲ್ಲಿಕುಂಜೆ: ಧಾರ್ಮಿಕ ಕಾರ್ಯಕ್ರಮ

0
261

 
ವರದಿ-ಚಿತ್ರ: ಶ್ಯಾಮ್ ಪ್ರಸಾದ್ ಬದಿಯಡ್ಕ
ನೆಲ್ಲಿಕುಂಜೆ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳವರ ಮಾರ್ಗದರ್ಶನದಲ್ಲಿ ಶುಕ್ರವಾರ ಗಣಪತಿ ಹೋಮ ಹಾಗೂ ದುರ್ಗಾ ಪೂಜೆ ನಡೆಯಿತು.
 
 
ಕ್ಷೇತ್ರದ ಜೀರ್ಣೋದ್ಧಾರ ಕಾರ್ಯವು ಭರದಿಂದ ಸಾಗುತ್ತಿದ್ದು ಗರ್ಭಗುಡಿಯ ಪಾಣಿಪೀಠದ ತನಕದ ಕೆಲಸಗಳು ಈಗಾಗಲೇ ಮುಗಿದಿರುತ್ತದೆ.
ಮುಂದಿನ ದಿನಗಳಲ್ಲಿ ದೇವಸ್ಥಾನಕ್ಕೆ ಅಗತ್ಯವಿರುವ ತುಳಸಿ ಹೂವಿಗೋಸ್ಕರ ದೇವಸ್ಥಾನದ ಸೇವಾಸಮಿತಿಯ ವತಿಯಿಂದ 10 ಸಾವಿರಕ್ಕೂ ಅಧಿಕ ತುಳಸೀ ಗಿಡಗಳನ್ನು ತಯಾರಿಸಲಾಯಿತು. ಸಾಂಕೇತಿಕವಾಗಿ ಈ ಸಂದರ್ಭದಲ್ಲಿ ದೇವಸ್ಥಾನದ ಪರಿಸರದಲ್ಲಿ ತುಳಸಿ ಗಿಡಗಳನ್ನು ನೆಡಲಾಯಿತು. ಮೊದಲು ಗಿಡಗಳನ್ನು ಶ್ರೀ ದೇವರ ಮುಂದಿಟ್ಟು ಊರವರೆಲ್ಲ ಸೇರಿ ಸಾಮೂಹಿಕ ಪ್ರಾರ್ಥನೆಗೈದು ಊರವರಿಗೂ ತುಳಸೀ ಗಿಡಗಳನ್ನು ತಮ್ಮ ಮನೆಗಳಲ್ಲಿ ನೆಡುವುದಕ್ಕೋಸ್ಕರ ಪ್ರಸಾದ ರೂಪದಲ್ಲಿ ಹಂಚಲಾಯಿತು.
 
 
ಸೇವಾಸಮಿತಿ ಅಧ್ಯಕ್ಷ ಸತೀಷ್ ರಾವ್ ನೆಲ್ಲಿಕುಂಜೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಮಾನಾಥ ರೈ ಮೇಗಿನಕಡಾರು, ಕಾರ್ಯಧ್ಯಕ್ಷ ಬಾಲಸುಬ್ರಹ್ಮಣ್ಯ ಸರ್ಪಮಲೆ, ಕಾರ್ಯದರ್ಶಿ ಮಹೇಶ ಗುತ್ತು, ವಿವಿಧ ಮಹಿಳಾ ಸಂಘಟನೆಗಳ ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದು, ಗಿಡನೆಟ್ಟರು.

LEAVE A REPLY

Please enter your comment!
Please enter your name here