ನೆರುಪ್ಪುಡಾ… ನಿರಂಗುಡಾ…ಮುಡಿಯುಮಾ ಕಬಾಲಿ ಡಾ…

0
357

 
ಬೆಂಗಳೂರು ಸಿನಿ ಪ್ರತಿನಿಧಿ ವರದಿ
ತೆರೆಯ ಮೇಲೆ ಅಬ್ಬಳಿಸಿದ ಕಬಾಲಿ
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ “ಕಬಾಲಿ” ತೆರೆಗೆ ಅಪ್ಪಳಿಸಿದೆ. ಮಧ್ಯರಾತ್ರಿಯಿಂದಲೇ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಆರಂಭವಾಗಿದೆ.
ಕಳೆದ ಒಂದು ವಾರದಿಂದಲೇ ಚಿತ್ರ ವೀಕ್ಷಣೆಗಾಗಿ ಕಾತುರರಾಗಿದ್ದ ಅಭಿಮಾನಿಗಳು ಚಿತ್ರಮಂದಿರಗಳಲ್ಲಿ ಕ್ಕಿಕ್ಕಿರಿದು ತುಂಬಿ ಚಿತ್ರ ವೀಕ್ಷಣೆ ಮಾಡಿದ್ದಾರೆ. ದೇಶಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾಗಿರುವ ಕಬಾಲಿ ಚಿತ್ರ ಸುಮಾರು 4200 ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಕಬಾಲಿ ಚಿತ್ರ ತಮಿಳುನಾಡಿನಲ್ಲಿ ಸುಮಾರು 650 ಸ್ಕ್ರೀನ್ ಗಳಲ್ಲಿ, ಕರ್ನಾಟಕದಲ್ಲಿ 251, ಆಂಧ್ರ ಪ್ರದೇಶದಲ್ಲಿ 530, ತೆಲಂಗಾಣದಲ್ಲಿ 335, ಕೇರಳದಲ್ಲಿ 308 ಸೇರಿದಂತೆ ಉತ್ತರ ಭಾರತದ ಸುಮಾರು 1, 100 ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.
 
 
ಕೇವಲ ಭಾರತ ಮಾತ್ರವಲ್ಲದೇ ಅಮೆರಿಕದ 450 ಚಿತ್ರ ಮಂದಿರಗಳಲ್ಲಿ ಕಬಾಲಿ ಪ್ರದರ್ಶನ ಕಾಣುತ್ತಿದ್ದು, ವಿಶ್ವದ ವಿವಿಧ ದೇಶಗಳ ಒಟ್ಟು 550 ಚಿತ್ರಮಂದಿರಗಳಲ್ಲಿ ಕಬಾಲಿ ತೆರೆಕಾಣುವ ಮೂಲಕ ಒಟ್ಟು 4200 ಸ್ಕ್ರೀನ್ ಗಳಲ್ಲಿ ಏಕ ಕಾಲದಲ್ಲಿ ತೆರೆಕಂಡಿದೆ.
 
ಬೆಂಗಳೂರಿನ ನಟರಾಜ, ವೆಂಕಟೇಶ್ವರ, ಊರ್ವಶಿ ಸೇರಿದಂತೆ ಪ್ರಮುಖ ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರ ತೆರೆಕಂಡಿದ್ದು, ಕೆಲ ಮಲ್ಟಿಪ್ಲೆಕ್ಸ್ ಗಳಲ್ಲಿ ದಿನವೊಂದಕ್ಕೆ 20 ಪ್ರದರ್ಶನ ಏರ್ಪಡಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಮಧ್ಯರಾತ್ರಿಯಿಂದಲೇ ಶೋ ಆರಂಭವಾಗಿದ್ದು, ಟಿಕೆಟ್ ಭಾರಿ ಬೇಡಿಕೆ ಎದುರಾಗಿದೆ. 80 ರಿಂದ 150 ಮುಖಬೆಲೆಯ ಟಿಕೆಟ್ ಗಳು 1500 ರು.ದಿಂದ 5000 ರು.ಗಳ ವರೆಗೆ ಬ್ಲಾಕ್ ನಲ್ಲಿ ಮಾರಾಟವಾಗುತ್ತಿದೆ ಎಂದು ತಿಳಿದುಬಂದಿದೆ.
 
 
ವಿಶೇಷ ವಿಮಾನದಲ್ಲಿ ಚೆನ್ನೈಗೆ ಪ್ರಯಾಣ
ಜಗತ್ತಿನೆಲ್ಲೆಡೆ ರಜನಿ ಅಭಿನಯದ ಕಬಾಲಿ ಸಿನಿಮಾ ಕ್ರೇಜ್ ಹೆಚ್ಚಾಗಿದೆ. ರಜನಿ ಅಭಿಮಾನಿಗಳು ವಿಶೇಷ ವಿಮಾನದಲ್ಲಿ ಚೆನ್ನೈಗೆ ತೆರಳಿದ್ದಾರೆ. ಬೆಂಗಳೂರಿನಿಂದ 166 ಮಂದಿ ಅಭಿಮಾನಿಗಳು ಏರ್ ಏಷ್ಯಾ ವಿಮಾನದಲ್ಲಿ ಪ್ರಯಾಣಿಸಿದ್ದಾರೆ.

LEAVE A REPLY

Please enter your comment!
Please enter your name here