ನೃತ್ಯ ರಂಗದಲ್ಲಿ ಮಿಂಚುತ್ತಿರುವ ಸಾಕ್ಷಿ ಗುರುಪುರ

0
219

 
ಲೇಖನ: ರಂಜಿತ್ ಮಡಂತ್ಯಾರು
ಪ್ರತಿಭೆಯೊಂದು ವ್ಯಕ್ತಿಯನ್ನು ಎಲ್ಲಿಯವರೆಗೆ ಪರಿಚಯ ಮಾಡಬಲ್ಲದು ಅನ್ನುವುದು ತಿಳಿಯದ ವಿಷಯ, ಹೌದು ಪರಪುರಾಮನ ಸೃಷ್ಟಿಯ ಈ ತುಳುನಾಡಿನ ಕರಾವಳಿ ತೀರದಲ್ಲಿ ಮೂಡಿ ಬಂದಿರುವ ಪ್ರತಿಭೆಗಳು ತುಳುನಾಡಿನ ಹೆಮ್ಮೆಯನ್ನು ಮತ್ತಷ್ಟು ಎತ್ತರಕ್ಕೆ ಪರಿಚಯ ಮಾಡುತ್ತಿದೆ. ಇದಕ್ಕೆ ಮಾದರಿಯಂತೆ ಮಂಗಳೂರಿನ ಮುದ್ದು ಮಗಳು ಸಾಕ್ಷಿ ಗುರುಪುರ ಅವರು ಸಾಕ್ಷಿಯಾಗಿದ್ದಾರೆ. ತನ್ನ ಬಾಲ್ಯದ ದಿನಗಳಿಂದಲೂ ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಬಾಲೆ ಸಾಕ್ಷಿ, ತನ್ನ ಸಮರ್ಥವಾದ ಮಾತುಗಾರಿಕೆ, ಕುಣಿತ, ಸಂಗೀತ, ಭಾಷಣ, ಛದ್ಮವೇಷ, ಕ್ರೀಡೆ, ಚಿತ್ರಕಲೆ, ಅಭಿನಯದೊಂದಿಗೆ ಕಳೆದ ಹಲವಾರು ವರ್ಷದಿಂದ ತನ್ನ ಬಹುಮುಖ ಪ್ರತಿಭೆಗಳನ್ನು ವೀಕ್ಷಕರಿಗೆ ಪರಿಚಯಿಸಿದ ಸಾಕ್ಷಿ, ಬಾಲ್ಯದಲ್ಲಿಯೇ ನೃತ್ಯದಲ್ಲಿ ಆಸಕ್ತಿಯನ್ನು ಮೈಗೂಡಿಸಿಕೊಂಡು ಸಮರ್ಥವಾದ ನೃತ್ಯಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಹೌದು ತನ್ನ ಸಣ್ಣ ವಯಸ್ಸಿನಲ್ಲಿ ಚಿಗುರಿದ ಪ್ರತಿಭೆ ನಿಜಕ್ಕೂ ಸಾಹಸವೇ ಸರಿ. ಕೇವಲ 8 ವರ್ಷದ ಈ ಮುದ್ದಿನ ಪ್ರತಿಭೆಯು ವಿದ್ಯಾಜ್ಯೋತಿ ವಾಮಂಜೂರು ಶಾಲೆಯ 4ನೇ ತರಗತಿಯ ವಿದ್ಯಾರ್ಥಿನಿ. ಈಕೆ ಮಂಗಳೂರಿನ ಸಮೀಪದ ಗುರುಪುರ ನಿವಾಸಿಗಳಾದ ದಾಮೋದರ ಮತ್ತು ಶೋಭಾ ದಂಪತಿಗಳ ಮುದ್ದಿನ ಮಗಳು ಸಾಕ್ಷಿ.
 
 
ಈಕೆ ಕೇವಲ 7 ತಿಂಗಳ ಮಗುವಾಗಿದ್ದಾಗಲೇ ಗುರುಪುರದ ಜಂಗಮ ಮಠದಲ್ಲಿ ನಡೆದ “ಮುದ್ದು ಕೃಷ್ಣ ವೇಷ” ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ್ದಳು. ಪ್ರಥಮ ಪ್ರಯತ್ನದಲ್ಲಿಯೇ ಪ್ರಥಮ ಸ್ಥಾನಗಳಿಸಿದ ಈಕೆ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಹೌದು ಈಕೆಯ ಹೆತ್ತವರು ಅಂದಿನಿಂದಲೇ ಮಗಳ ಪ್ರತಿಭೆಯನ್ನು ಬೆಳೆಸುವ ಕನಸು ಕಂಡಿದ್ದರು. ಆ ಕನಸು ನಿಜವಾಗಿಯೂ ನನಸಾಗುತ್ತಲೇ ಬಂದಿದೆ ಎಂದರೆ ತಪ್ಪಾಗದು. ಇದೇ ರೀತಿ ಸಾಕ್ಷಿಯೂ ತನ್ನ ಪ್ರತಿಭೆಯತ್ತ ಹೆಚ್ಚಿನ ಗಮನವಹಿಸಿದಳು. ಅಂದಿನಿಂದಲೂ ಅನೇಕ ನೃತ್ಯ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಾಳೆ. ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾಳೆ. ಇತ್ತೀಚೆಗೆ ಮಂಗಳೂರಿನ ಫಾರಂ ಮಾಲ್ ನಲ್ಲಿ ನಡೆದ ಡ್ಯಾನ್ಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. ನಂತರ 2015ರಲ್ಲಿ ಕರಾವಳಿಯಲ್ಲಿಯೇ ಹೆಸರು ವಾಸಿಯಾದ “ಸ್ಪಂದನ” ವಾಹಿನಿಯಲ್ಲಿ ನಡೆದ “ಡ್ಯಾನ್ಸ್ ಕಾ ಸೂಪರ್ ಸ್ಟಾರ್ ರಿಯಾಲಿಟಿ ಶೋ” ನೃತ್ಯ ಸ್ಪರ್ಧೆಯಲ್ಲಿ ಸಬ್ ಜ್ಯೂನಿಯರ್ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಒಂದು ಲಕ್ಷ ಬಹುಮಾನವನ್ನು ಪಡೆದಿದ್ದಾಳೆ. ಇನ್ನು ಅನೇಕ ಕಡೆ ನೃತ್ಯಗಳಲ್ಲಿ ಭಾಗವಹಿಸಿ ಅನೇಕ ಬಹುಮಾನವನ್ನು ತನ್ನ ಮುಡಿಗೇರಿಸಿ ಕೊಂಡಿದ್ದಾಳೆ.
 
ಹಾಗೂ ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಅನೇಕ ನೃತ್ಯ ಪ್ರದರ್ಶಗಳನ್ನು ನೀಡಿ ಪ್ರಶಸ್ತಿಗಳನ್ನು ಪಡೆದಿದ್ದಾಳೆ. ಸುಮಾರು 150ಕ್ಕೂ ಅಧಿಕ ನೃತ್ಯ ಪ್ರದರ್ಶನ ನೀಡಿದ ಹಿರಿಮೆ ಈಕೆಯಾದ್ದು. ಈಕೆಯ ಎಲ್ಲಾ ಸಾಧನೆಯನ್ನು ಗುರುತಿಸಿದ ಸುಧಾ ವಾಹಿನಿ ಕಲಾಕೇಂದ್ರ ಬೆಂಗಳೂರು ಇವರು “ಪುಟ್ಟಣ್ಣ ಕಣಗಾಲ್” ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಹೀಗೆ ಈಕೆಯ ಪ್ರತಿಭೆಗೆ ಅನೇಕ ಕಡೆಗಳಲ್ಲಿ ಪ್ರಶಸ್ತಿ ಸನ್ಮಾನ ನೀಡಿ ಗೌರವಿಸಿದ್ದಾರೆ. ಹಾಗೂ ಅನೇಕ ಪ್ರತಿಭಾ ಕಾರಂಜಿಗಳಲ್ಲೂ ಅನೇಕ ಕಡೆಗಳಲ್ಲಿ ಪ್ರಶಸ್ತಿ ತನ್ನದಾಗಿಸಿ ಕೊಂಡಿದ್ದಾಳೆ. ಹಾಗೂ ಪ್ರೇಕ್ಷಕರಿಂದ ಉತ್ತಮ ಪ್ರಶಂಸೆಯನ್ನು ಪಡೆದು ಕೊಂಡಿದ್ದಾಳೆ. ಹೀಗೆ ನೃತ್ಯ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಬೇಕೆನ್ನುವ ಮನದಾಸೆ ಹೆತ್ತವರದು. ಹೌದು ಸಾಕ್ಷಿ ಗುರುಪುರ ಅವರು ರಾಜ್ಯ. ರಾಷ್ಟ ಮಟ್ಟದಲ್ಲಿ ತನ್ನ ಪ್ರತಿಭೆಯ ಮೂಲಕ ಕರಾವಳಿಯ ಕಂಪನ್ನು ಎಲ್ಲೆಡೆ ಬಿತ್ತರಿಸಲ್ಲಿ ಮತ್ತು ಇವರ ನೃತ್ಯವನ್ನು ಪ್ರೋತ್ಸಾಹಿಸಿ, ಶುಭ ಹಾರೈಸೋಣ.

LEAVE A REPLY

Please enter your comment!
Please enter your name here