ನೃತ್ಯ ಪ್ರಾತ್ಯಕ್ಷಿಕೆ ಪ್ರದರ್ಶನ

0
403

 
ವರದಿ: ಸುಧೀರ್ ರಾವ್
ಈ ಸಂಸ್ಥೆಯ ನೃತ್ಯ ಪ್ರಾತ್ಯಕ್ಷಿಕೆ ಪ್ರದರ್ಶನ ಕಾರ್ಯಕ್ರಮವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಭಾಗಿತ್ವದೊಂದಿಗೆ ಇತ್ತೀಚೆಗೆ ಉಡುಪಿಯ ಅಂಬಲಪಾಡಿ ಶ್ರೀ ಜನಾರ್ಧನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ಜರಗಿತು.
 
mnglor_dance samavesha
 
ನೃತ್ಯ ಕಲಾಪರಿಷತ್ತಿನ ಅಧ್ಯಕ್ಷರಾದ ಪಿ.ಕಮಲಾಕ್ಷ ಆಚಾರ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಮಂಜರಿ ಡಿಜಿಟ ಸ್ಟೋಡಿಯೋ ಉಡುಪಿ ಇದರ ಮಾಲಾಕರಾದ ಚಂದ್ರಶೇಖರ ಕೆ.ಎಸ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಆರಂಭದಲ್ಲಿ ನಾಟ್ಯಶಾಸ್ತ್ರ ಪ್ರವಚನ ಹಾಗೂ ಡಾ||ಶ್ರೀವಿದ್ಯಾಮುರಳಿಧರ್ ಇವರಿಂದ ನಾಯಕೀ ಭಾವ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮವು ಸಂಪನ್ನಗೊಂಡಿತು. ನಂತರ ನೃತ್ಯವ ಸಂತ ನಾಟ್ಯಾಲಯ ಕುಂದಾಪುರ ಇದರ ನಿರ್ದೇಶಕಿಯಾದ ಪ್ರವಿತಾ ಅಶೋಕ್ ಇವರ ನಿರ್ದೇಶನದ ಭರತ ನೃತ್ಯ ಮತ್ತು ಸೃಷ್ಠಿಕಲಾಕುಟೀರ ಉಡುಪಿ ನೃತ್ಯ ಸಂಸ್ಥೆಯ ನಿರ್ದೇಶಕಿ ಡಾ||ಮಂಜರಿ ಚಂದ್ರ ನಿರ್ದೇಶನದ ಭರತನೃತ್ಯವು ಪ್ರದರ್ಶನಗೊಂಡಿತು.
 
 
 
ವಿದುಷಿ ಸುಮಂಗಲಾ ರತ್ನಾಕರ್ ಅವರು ಕಲಾವಿದರನ್ನು ಪರಿಚಯಿಸಿದರು. ಸಂಸ್ಥೆಯ ಸದಸ್ಯರಾದ ಸೌಮ್ಯಸುಧೀಂದ್ರ, ಯಶಾರಮಕೃಷ್ಣ, ಸುರೇಶ್ ಅತ್ತಾವರ ಹಾಗೂ ಶ್ರೀಧರಹೊಳ್ಳ ಅವರು ಉಪಸ್ಥಿತರಿದ್ದರು. ನೃತ್ಯವಿದುಷಿ ಪ್ರತಿಭಾ.ಎಲ್.ಸಾಮಗರು ಪ್ರದರ್ಶನದ ವಿಮರ್ಶೆ ಮಾಡಿದರು. ಸಂಸ್ಥೆಯ ಕಾರ್ಯದರ್ಶಿ ವಿದ್ವಾನ್.ಕೆ.ಚಂದ್ರಶೇಖರ ನಾವಡರು ಸ್ವಾಗತಿಸಿ, ಕಾರ್ಯಕ್ರಮದ ನಿರ್ವಹಣೆಮಾಡಿದರು. ಸದಸ್ಯರಾದ ವಿದ್ವಾನ್ ಸುಧೀರ್ ರಾವ್ ಕೊಡವೂರರು ಧನ್ಯವಾದವನ್ನು ನೀಡಿದರು.

LEAVE A REPLY

Please enter your comment!
Please enter your name here