ನೂತನ ಮಂತ್ರಿಗಳ ಪದಗ್ರಹಣಕ್ಕೆ ನಾಳೆ ಮುಹೂರ್ತ

0
565

 
ಬೆಂಗಳೂರು ಪ್ರತಿನಿಧಿ ವರದಿ
ಕೊನೆಗೂ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸಂಪುಟ ಸರ್ಜರಿಯಾಗಿದೆ. ಸಂಪುಟ ಪುನಾರಚನೆ ಖಚಿತವಾಗಿದ್ದು, ಭಾನುವಾರ ಸಂಜೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಂದು ನವದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ.ಪರಮೇಶ್ವರ್ ಅವರು ಸೋನಿಯಾ ನಿವಾಸಕ್ಕೆ ತೆರಳಿ ಈ ವಿಚಾರ ಚರ್ಚೆ ನಡೆಸಿ ಒಪ್ಪಿಗೆ ಪಡೆದಿದ್ದಾರೆ. ನಾಳೆ ಸಂಜೆ ರಾಜಭವನದಲ್ಲಿ ನಡೆಯುವ ಸಮಾರಂಭದಲ್ಲಿ ನೂತನ ಸಚಿವರುಗಳಾಗಿ 10 ಮಂದಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
 
 
ಗೇಟ್ ಪಾಸ್ ಸಚಿವರು…
ರಾಜ್ಯ ಸಚಿವ ಸಂಪುಟದಿಂದ 13 ಹಾಲಿ ಸಚಿವರು ಔಟ್ ಆಗಿದ್ದಾರೆ. ಐಟಿಬಿಟಿ ಸಚಿವ ಎಸ್ ಆರ್ ಪಾಟೀಲ್, ವಸತಿ ಸಚಿವ ಅಂಬರೀಶ್, ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ತೋಟಗಾರಿಕೆ ಸಚಿವ ಶ್ಯಾಮನೂರು ಶಿವಶಂಕರಪ್ಪ, ಆಹಾರ, ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್, ಜವಳಿ ಸಚಿವ ಬಾಬೂರಾವ್ ಚಿಂಚನಸೂರ್, ಅಲ್ಪಸಂಖ್ಯಾತ ಖಾತೆ ಸಚಿವ ಖಮರುಲ್ ಇಸ್ಲಾಂ, ಕಂದಾಯ ಸಚಿವ ವಿ ಶ್ರೀನಿವಾಸ್ ಪ್ರಸಾದ್, ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ, ಕಾರ್ಮಿಕ ಸಚಿವ ಪಿಟಿ ಪರಮೇಶ್ವರ್ ನಾಯ್ಕ್, ಸಣ್ಣ ಕೈಗಾರಿಕೆ ಸಚಿವ ಸತೀಶ್ ಜಾರಕಿಹೊಳಿ, ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ, ಮೀನುಗಾರಿಕೆ ಸಚಿವ ಅಭಯ್ ಚಂದ್ರ ಜೈನ್ ಸಚಿವ ಸ್ಥಾನದಿಂದ ಔಟ್ ಆಗಿದ್ದಾರೆ. ಈ ಎಲ್ಲಾ ಹಾಲಿ ಸಚಿವರನ್ನು ಕೈಬಿಡಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.
 
 
 
ಯಾರಿಗೆಲ್ಲಾ ಸಚಿವ ಭಾಗ್ಯ:
ಕಾಗೋಡು ತಿಮ್ಮಪ್ಪ ಸ್ಪೀಕರ್ ಸ್ಥಾನವನ್ನು ತೆರವುಗೊಳಿಸಲಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಹೊಸಬರಿಗೆ ಮಂತ್ರಿ ಭಾಗ್ಯ ದೊರಕಿದೆ. ಧಾರವಾಡ ಜಿಲ್ಲೆ ಕಲಘಟಗಿ ಕ್ಷೇತ್ರದ ಶಾಸಕ ಸಂತೋಷ್ ಲಾಡ್, ಚಿತ್ತಾಪುರ್ ಶಾಸಕ ಪ್ರಿಯಾಂಕ್ ಖರ್ಗೆ, ಹಾವೇರಿ ಶಾಸಕ ರುದ್ರಪ್ಪ ಲಮಾಣಿ, ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ವಿಜಯನಗರ ಶಾಸಕ ಎಂ ಕೃಷ್ಣಪ್ಪ, ಮೈಸೂರಿನ ನರಸಿಂಹರಾಜ ಶಾಸಕ ತನ್ವೀರ್ ಸೇಠ್, ಸಾಗರ ಶಾಸಕ ಕಾಗೋಡು ತಿಮ್ಮಪ್ಪ, ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್, ಗೋಕಾಕ್ ಸಚಿವ ರಮೇಶ್ ಜಾರಕಿಹೊಳಿ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ಬಾಗಲಕೋಟೆ ಹೆಚ್ ವೈ ಕೋಟೆ, ಬಳ್ಳಾರಿ ಗ್ರಾಮೀಣ ಶಾಸಕ ಎನ್ ವೈ ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ಲಭಿಸಿದೆ.
ಹೈಕಮಾಂಡ್ ಗ್ರೀನ್ ಸಿಗ್ನಲ್ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿರುವ ಸಿಎಂ ಸಿದ್ದರಾಮಮಯ್ಯ ಮತ್ತು ಡಾ.ಜಿ ಪರಮೇಶ್ವರ್ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.
 
 
ಸೋನಿಯಾ ಸಮ್ಮತಿ:
ಮೀಟಿಂಗ್ ನಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ರಾಜ್ಯ ಸಚಿವ ಸಂಪುಟದಿಂದ ಇನ್ನೂ ಕೆಲವರನ್ನು ಕೈಬಿಡಬಹುದು. ಒಟ್ಟು 14 ಮಂದಿ ಸಚಿವರನ್ನು ಕೈಬಿಡುವಂತೆ ಸೋನಿಯಾ ಸಮ್ಮತಿ ಸೂಚಿಸಿದ್ದರು.
 
 
14 ಸಚಿವರನ್ನೂ ಕೈಬಿಟ್ಟರೂ ಸಹ 12 ಮಂದಿಗೆ ಸಚಿವ ಸಂಪುಟಕ್ಕೆ ಸೇರ್ಪಡಿಸಿಕೊಂಡಿದ್ದಾರೆ.  ಇನ್ನೆರಡು ಸ್ಥಾನಗಳನ್ನು ಖಾಲಿ ಬಿಡಲು ನಿರ್ಧರಿಸಲಾಗಿದೆ. ಇಂದು ಸಂಜೆಯೇ ರಾಜ್ಯಪಾಲರಿಗೆ ನೂತನ ಸಚಿವರ ಪಟ್ಟಿ ರವಾನೆಯಾಗಲಿದೆ. ನಾಳೆ ಪ್ರಮಾಣವಚನ ಸ್ವೀಕರಿಸಲಿರುವ ನೂತನ ಸಚಿವರಿಗೆ ಸೋಮವಾರ ಖಾತೆ ಹಂಚಿಕೆಯಾಗಲಿದೆ.
 
ಇಬ್ಬರು ಹಿರಿಯ ಕಾಂಗ್ರೆಸ್ ನಾಯಕರಿಗೆ ಮಂತ್ರಿಗಿರಿ ಲಭಿಸಿದೆ. ಕಾಗೋಡು ತಿಮ್ಮಪ್ಪ ಮತ್ತು ರಮೇಶ್ ಕುಮಾರ್ ಗೂ ಸಿಎಂ ಸಂಪುಟದಲ್ಲಿ ಸ್ಥಾನ ದೊರಕಿದೆ.

LEAVE A REPLY

Please enter your comment!
Please enter your name here