ದೇಶಪ್ರಮುಖ ಸುದ್ದಿರಾಜ್ಯವಾರ್ತೆ

ನೂತನ ಅಧ್ಯಕ್ಷರಿಗೆ ಆರಂಭದಲ್ಲೇ ಅಗ್ನಿಪರೀಕ್ಷೆ`!

ಇದು ವಾರ್ತೆ ಎಕ್ಸ್ ಕ್ಲೂಸಿವ್

ಭಾರತೀಯ ಜನತಾ ಪಕ್ಷ ನೂತನ ಅಧ್ಯಕ್ಷರನ್ನೇನೋ ಆಯ್ಕೆಮಾಡಿದೆ. ಕರಾವಳಿಯ ಕುವರನಿಗೆ ಅಧ್ಯಕ್ಷ ಪಟ್ಟವನ್ನು ನೀಡಿ ಹೊಸ ಜವಾಬ್ದಾರಿ ಹೆಗಲಿಗೇರಿಸಿದೆ. ಆದರೆ ಇದು ಅಷ್ಟೊಂದು ಸುಲಭದ ಹಾದಿಯಲ್ಲ. ಭಾರತೀಯ ಜನತಾ ಪಕ್ಷ ತತ್ವ ಸಿದ್ದಾಂತದ ಅಡಿಯಲ್ಲಿ ಕಾರ್ಯನಿರ್ವಹಿಸುವ ಪಕ್ಷವೆಂದೇ ಖ್ಯಾತಿ ಪಡೆದಿದೆಯಾದರೂ ಈಗ ದೊರಕಿದ ಜವಾಬ್ದಾರಿ ಮಾತ್ರ ಸದ್ಯದ ಮಟ್ಟಿಗೆ ಅಗ್ನಿಪರೀಕ್ಷೆ ಎಂದರೆ ತಪ್ಪಲ್ಲ.

ನೂತನ ಅಧ್ಯಕ್ಷ ಸಾಕಷ್ಟು ಸಮಯ ಪಕ್ಷ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಅನುಭವ ಪಡೆದವರು. ಕರಾವಳೀ ಭಾಗದಿಂದ ಸಂಸದರಾಗಿಯೂ ಆಯ್ಕೆಗೊಂಡವರು. ಇದೀಗ ಹೊಸ ಜವಾಬ್ಧಾರಿಯನ್ನು ನಳೀನ್ ಕುಮಾರ್ ಕಟೀಲು ಹೇಗೆ ನಿಭಾಯಿಸುತ್ತಾರೆ; ರಾಜ್ಯ ರಾಜಕೀಯದಲ್ಲಿ ಎದ್ದಿರುವ ಆಂತರಿಕ ಹೊಗೆಯನ್ನು ಆರಿಸುವಲ್ಲಿ ಸಫಲಾರಗುತ್ತಾರೆಯೇ ಎಂಬುದು ಈಗಿರುವ ದೊಡ್ಡ ಕುತೂಹಲ.

ಕಾರ್ಯಕರ್ತರನ್ನೇ ಕೇಂದ್ರವಾಗಿಸಿ ಮತಗಟ್ಟೆ, ಶಕ್ತಿಕೇಂದ್ರಗಳಿಂದಲೇ ಪಕ್ಷ ಕಟ್ಟುವ, ಅದರಲ್ಲಿ ಕರಾವಳೀ ಭಾಗದಲ್ಲಿ ಯಶಸಾಧಿಸಿದ ರೀತಿಯಲ್ಲಿಯೇ ಸಮಗ್ರ ಕರ್ನಾಟಕದಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಕನಸು ಕಂಡ ನಳೀನ್ ಕುಮಾರ್ ಕಟೀಲು; ಹಿರಿಯರ ಮಾರ್ಗದರ್ಶನದಲ್ಲಿ ಎಲ್ಲರ ಸಹಕಾರದೊಂದಿಗೆ ಈಗಿರುವ ಅಗ್ನಿಪರೀಕ್ಷೆಯನ್ನು ಜಯಿಸುವ ಹುಮ್ಮಸ್ಸಿನಲ್ಲಿದ್ದಾರೆ. ಪ್ರಸಕ್ತ ರಾಜ್ಯ ರಾಜಕೀಯದಲ್ಲಿ ಅನೇಕ ಮಂದಿ ಶಾಸಕರು ಸಚಿವ ಸ್ಥಾನದ ಆಕಾಂಕ್ಷೆಯಲ್ಲಿದ್ದಾರೆ. ಈ ಎಲ್ಲರ ಆಶೆಗಳು ಇಂದು ಆಕ್ರೋಶದ ರೀತಿ ಹೊರಹೊಮ್ಮುತ್ತಿದೆ.

ಅಧಿಕಾರ ಸಿಗದಿದ್ದಾಗ ನೋವು ಉಂಟಾಗುವುದು ಸಹಜ. ಆದರೆ ಆ ನೋವು ಸ್ಫೋಟದ ರೀತಿಯಲ್ಲಿ ಹೊರಬಿದ್ದಾಗ ಪಕ್ಷದಲ್ಲಿ ತೊಡಕುಂಟಾಗುತ್ತದೆ. ಇದನ್ನು ಶಮನ ಮಾಡುವ, ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನೂತನ ಅಧ್ಯಕ್ಷ ತನ್ನ ಚಾಣಾಕ್ಷತನವನ್ನು ಮೆರೆಯಬೇಕಾಗಿದೆ.
ಎಷ್ಟೇ ಆಗಲಿ ದಕ್ಷಿಣ ಕನ್ನಡದ ಜನ ಬುದ್ದಿವಂತರೇ ಹೌದು…ಹೀಗಾಗಿಯೇ ಪಕ್ಷದ ನೇತಾರ, ಚಾಣಾಕ್ಷ ಅಮಿತ್ ಷಾ ಕೂಡಾ ರಾಜ್ಯ ರಾಜಕೀಯದ ಪ್ರಸಕ್ತ ಸನ್ನಿವೇಶದಲ್ಲಿ ಚಾಣಾಕ್ಷ ಅಧ್ಯಕ್ಷನೇ ಪಕ್ಷಕ್ಕೆ ಅವಶ್ಯಕ ಎನ್ನುವ ನಿಟ್ಟಿನಲ್ಲಿ ನಳೀನ್ ಕುಮಾರ್ ಕಟೀಲು ಅವರನ್ನು ನೇಮಕ ಮಾಡಿರಬೇಕೆಂಬುದು ಈಗ ಚರ್ಚಿತ ವಿಚಾರ!

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here