ನುಗ್ಗೆಸೊಪ್ಪು ಚಟ್ನಿ

0
488

 
ವಾರ್ತೆ ರೆಸಿಪಿ:
ಬೇಕಾಗುವ ಪದಾರ್ಥಗಳು
ನುಗ್ಗೆ ಸೊಪ್ಪು – 1 ಬಟ್ಟಲು, ಕೆಂಪು ಮೆಣಸಿನಕಾಯಿ – 6, ಕರಿ ಮೆಣಸು – 4, ಜೀರಿಗೆ – 1 ಚಮಚ, ಹುಣಸೆಹಣ್ಣು – ಸಣ್ಣ ಉಂಡೆಯಷ್ಟು,
ತೆಂಗಿನಕಾಯಿ ತುರಿ – ಅರ್ಧ ಬಟ್ಟಲು.
 
ತಯಾರಿಸುವ ವಿಧಾನ:
ಒಂದು ಬೋಗುಣಿಯಲ್ಲಿ 1 ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ಮೆಣಸಿನಕಾಯಿ, ಕರಿ ಮೆಣಸು, ಜೀರಿಗೆ, ನುಗ್ಗೆ ಸೊಪ್ಪು ಹಾಕಿ ಹುರಿಯಿರಿ. ಇದಕ್ಕೆ ಉಪ್ಪು, ಹುಣಸೆಹಣ್ಣು, ತೆಂಗಿನಕಾಯಿ ತುರಿ ಬೆರೆಸಿ, ಸ್ವಲ್ಪವೇ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಈ ಚಟ್ನಿಯನ್ನು ಚಪಾತಿ ಅಥವಾ ದೋಸೆಯೊಡನೆ ತಿನ್ನಲು ಚೆನ್ನಾಗಿರುತ್ತದೆ

LEAVE A REPLY

Please enter your comment!
Please enter your name here