ನೀವು ಭೇಟಿ ನೀಡಿ…

0
312

 
ಗುತ್ತುಮನೆಯಲ್ಲಿ ಬಿಸುಕಣಿ ಆಚರಣೆ 
ವರದಿ: ಭವ್ಯ ಜಿ. ಮಯ್ಯ
ಇಂದಿನ ಯುವ ಪೀಳಿಗೆಗೆ ಮುಖ್ಯವಾಗಿ ಮಕ್ಕಳಿಗೆ ಮತ್ತು ಜನರಿಗೆ ಬಿಸುಕಣಿಯ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ಪಿಲಿಕುಳದ ಗುತ್ತುಮನೆಯಲ್ಲಿ ಗುರುವಾರ ಬಿಸುಕಣಿಯನ್ನು ಆಚರಿಸಲಾಯಿತು. ಅಲ್ಲದೇ ನಿನ್ನೆಯಿಂದಲೇ ಸುಸಜ್ಜಿತ ಗುತ್ತುಮನೆಯನ್ನು ಸಾರ್ವಜನಿಕ ವೀಕ್ಷಣೆಗೆ ತೆರೆಯಲಾಗಿದೆ.
 

ಪಿಲಿಕುಳ ಗುತ್ತಿನ ಮನೆ
ಪಿಲಿಕುಳ ಗುತ್ತಿನ ಮನೆ

 
pilikua guttin mane1
ಗುತ್ತಿನ ಮನೆಗೆ ನೀವು ಭೇಟಿ ನೀಡಿ…
ಅಲ್ಲಿ ಹಳೆಯ ಕಾಲದ ಮನೆ-ಸಂಸ್ಕೃತಿ-ಪರಂಪರೆ-ಶ್ರೀಮಂತಿಕೆ ಎದ್ದು ಕಾಣುತ್ತಿತ್ತು. ಅಲ್ಲದೆ ಅವಿಭಕ್ತ ಕುಟುಂದವರು ವಾಸಿಸುತ್ತಿದ್ದಂತಹ ಮನೆಯಂತಿತ್ತು. ಹೌದು ಇಷ್ಟೇಲ್ಲ ಹೇಳುತ್ತಿರುವುದು ಪಿಲಿಕುಲದಲ್ಲಿರುವ ಗುತ್ತಿನ ಮನೆಯ ಕಥೆ. ಗುತ್ತಿನ ಮನೆಯಲ್ಲಿ ಹಳೆಯ ಕಾಲದ ನಮ್ಮ ಹಿರಿಯರು ಬಳಸುತ್ತಿದ್ದ ದಿನಬಳಕೆ ವಸ್ತುಗಳು, ಸಲಕರಣೆ, ಹಳೆಯ ಕಾಲದ ಭೂತಾರಾಧನೆ ಪದ್ಧತಿ-ದೈವದ ಕೋಣೆಯಲ್ಲಿ ವಿವಿಧ ದೈವಗಳ ಪ್ರತಿಮೆಗಳು, ಮಣೆ, ಕಡ್ತಲೆ, ಬೆತ್ತ, ಮೊಗ, ಗಗ್ಗರ, ಗಿಂಡಿ, ದೀಪಗಳು, ಜಾನಪದ ಕಲಾವಿದರು- ಅಟಿಕಳೆಂಜ, ಪಂಜಿ, ದೈವಗಳು, ಕೋಟಿ-ಚೆನ್ನಯ್ಯ ಪ್ರತಿಮೆಗಳು, ಯಕ್ಷಗಾನ-ಚೌಕಿಯಲ್ಲಿ ಯಕ್ಷಗಾನ ಕಲಾವಿದರು ವೇಷಧರಿಸುವ ನೋಟ, ದನದ ಹಟ್ಟಿ, ಕೃಷಿ ಬಳಕೆಗೆ ಬೇಕಾದ ಸಲಕರಣೆಗಳು ಮತ್ತು ಅವುಗಳನ್ನು ಸಂಗ್ರಹಿಸುವ ಕೊಠಡಿ, ಅಜ್ಜಿ ತನ್ನ ಮೊಮ್ಮಕ್ಕಳಿಗೆ ಕಥೆ ಹೇಳುವ ನೋಟ, ಕಂಬಳದ ಗದ್ದೆ, ಗಂಧ ಆರೆಯುವ ಕಲ್ಲು, ಬಾಳೆಹಣ್ಣು, ಅಡುಗೆ ಮನೆ-ಅಲ್ಲಿರುವ ಸಲಕರಣೆಗಳು-ಅಡುಗೆ ಮನೆಯಲ್ಲಿ ಸಂಪ್ರಾದಾಯಕ ಒಲೆಗಳು, ಒಲೆಗಳ ಮೇಲೆ ಮಣ್ಣಿನ ಪಾತ್ರೆಗಳಲ್ಲಿ ಬೇಯುತ್ತಿರುವ ಅಡುಗೆ, ಸಾಲು ಸಾಲಾಗಿ ಜೋಡಿಸಿರುವ ಹಳೆಯ ಕಾಲದ ಅಡುಗೆ ಪಾತ್ರಗಳು, ಉಪ್ಪಿನಕಾಯಿ ಭರಣಿಗಳು, ತೊಲೆಯಲ್ಲಿ ನೇತು ಹಾಕಿದ ಈರುಳ್ಳಿ-ಬೆಳ್ಳುಳ್ಳಿ ಗೊಂಚಲು, ಬುಟ್ಟಿಯಲ್ಲಿ ಸಂಗ್ರಹಿಸಿಟ್ಟ ಸೌತೆಕಾಯಿ, ಕುಂಬಳಕಾಯಿ, ಚೀನ ಕಾಯಿ ತರಕಾರಿಗಳು, ಅಟ್ಟದಲ್ಲಿ ಜೋಡಿಸಿರುವ ಅಕ್ಕಿ ಮುಡಿಗಳು, ಭತ್ತದ ಕಣಜ ಸೇರಿದಂತೆ ತುಳುನಾಡಿನ ಸಂಸ್ಕೃತಿ, ಜನಜೀವನ, ಪರಂಪರೆ, ಪರಿಕರಗಳು, ಕಲೆಗಳನ್ನು ಈ ಗುತ್ತಿನ ಮನೆಯಲ್ಲಿ ಅನಾವರಣಗೊಳಿಸಲಾಗಿದೆ. ಇಂಥ ಜಾನಪದ ಲೋಕವನ್ನೇ ಸೃಷ್ಠಿಸಿದ ಗುತ್ತಿನ ಮನೆಗೆ ನೀವು ಒಮ್ಮೆ ಭೇಟಿ ನೀಡಿ ಅಲ್ಲಿನ ಸೊಬಗನ್ನು ಸವಿಯಿರಿ.

LEAVE A REPLY

Please enter your comment!
Please enter your name here