ನೀವು ತಿಳಿಯಲೇ ಬೇಕಾದ 10 ವಿಷಯಗಳು

0
444

ಅಂಕಣ: ಡಾ.ಸತೀಶ ಶಂಕರ್ ಬಿ.
ಮಧುಮೇಹ- ತಿಳಿಯಲೇ ಬೇಕಾದ 10 ವಿಷಯಗಳು:
1. ಮಧುಮೇಹದ ಹೆಚ್ಚಳಕ್ಕೆ ಕಾರಣ:
1. ಬೊಜ್ಜುತನ
2. ವ್ಯಾಯಾಮದ ಕೊರತೆ
3. ಆಧುನಿಕ ಜೀವನಶೈಲಿ
2. ಮಧುಮೇಹ ಹೆಚ್ಚಾಗಿ ಮುಂದುವರಿದ ಮತ್ತು ಮುಂದುವರಿಯುತ್ತಿರುವ ದೇಶದಲ್ಲಿ ಕಂಡುಬರುತ್ತಿದೆ. ಮಧುಮೇಹದಿಂದ ಸಾವಿನ ಪ್ರಮಾಣ ಮುಂದಿನ 10 ವರ್ಷದಲ್ಲಿ ಶೇ.50ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
3. ಮಧುಮೇಹದಲ್ಲಿ ಎರಡು ವಿಧ:
1. Type 1 ಮಧುಮೇಹ: ಇನ್ಸೂಲಿನ್ ಉತ್ಪಾದನೆ ಅಥವಾ ಕೊರತೆಯಿಂದ ಬರುತ್ತದೆ.
2. Type2 ಮಧುಮೇಹ: ಇನ್ಸೂಲಿನ್ ಗೆ ಶರೀರ ಸೂಕ್ತವಾಗಿ ಸ್ಪಂದಿಸದೇ ಇದ್ದಾಗ ಬರುತ್ತದೆ.
4. Type2 ಮಧುಮೇಹ ಅತ್ಯಂತ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಒಟ್ಟು ಮಧುಮೇಹದಲ್ಲಿ ಶೇ.90ರಷ್ಟು Type2 ಮಧುಮೇಹವೇ ಇದೆ.
5. Type2 ಮಧುಮೇಹ ಹಿಂದಿನ ಕಾಲದಲ್ಲಿ ವಯಸ್ಸಾದವರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿತ್ತು. ಈಗ ಪತ್ತೆಹಚ್ಚಲಾಗುತ್ತಿರುವ ಮಧುಮೇಹದಲ್ಲಿ ಶೇ.50ರಷ್ಟು ಮಂದಿ ಮಕ್ಕಳು ಮತ್ತು 35 ವರ್ಷದ ಒಳಗಿನವರು.
6. ಮೂರನೇ ವಿಧವಾದ ಮಧುಮೇಹ ಗೆಸ್ಟೇಶನಲ್ ಮಧುಮೇಹ ಗರ್ಭಿಣಿಯಿದ್ದಾಗ ಮೊದಲ ಬಾರಿಗೆ ಮಧುಮೇಹ ಕಾಣಿಸಿಕೊಂಡರೆ ಅದಕ್ಕೆ ಗೆಸ್ಟೇಶನಲ್ ಮಧುಮೇಹ ಎನ್ನಲಾಗುತ್ತದೆ.
7. ಮಧುಮೇಹದಿಂದ ಹೃದಯದ ತೊಂದರೆ ಮತ್ತು ಕಿಡ್ನಿ ಫೆಲ್ಯೂರ್ ನಂತಹ ಅಪಾಯವಿದೆ.
8. ಮಧುಮೇಹ ಹತೊಟಿಯಲ್ಲಿ ಇಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಇದರಿಂದಾಗಿ ಕುರುಡುತನ, ಕಾಲಿನ ಅಲ್ಸರ್ ಸಮಸ್ಯೆ ಅಥವಾ ಹೃದಯದ ತೊಂದರೆ, ಕಿಡ್ನಿ ಫೆಲ್ಯೂರ್ ನಿಂದ ಸಾವೂ ಸಂಭವಿಸಬಹುದು.
9. ಮಧುಮೇಹವನ್ನು ತಡೆಗಟ್ಟಲು ಮೂರು ಸೂತ್ರ ಜೀವನಲ್ಲಿ ಅಳವಡಿಸಿ:
1. ತೂಕ ಸಮತೋಲನದಲ್ಲಿ ಇಡುವುದು.
2. ಆರೋಗ್ಯಪೂರ್ಣ, ಹಿತ, ಮಿತವಾದ ಆಹಾರ
3. ವ್ಯಾಯಾಮ, ದಿನಂಪ್ರತಿ ಅರ್ಧ ತಾಸು ನಡಿಗೆ
ಯೋಗ: ಹಲಾಸನ, ವಕ್ರಾಸನ, ಅರ್ಧಮತ್ಸೇಂದ್ರಾಸನ, ಧನುರಾಸನ
10. ಜಂಕ್ ಫುಡ್, ಫಾಸ್ಟ್ ಫುಡ್, ಸಾಫ್ಟ್ ಡ್ರಿಂಕ್ಸ್ ನಿಂದ ದೂರವಿರಿ.
 
ಅಂಕಣ: ಡಾ.ಸತೀಶ ಶಂಕರ್ ಬಿ.
[email protected]

LEAVE A REPLY

Please enter your comment!
Please enter your name here