ನೀರಿನ ಕ್ಷಾಮ- ಕಾರಣ – ಪರಿಹಾರ

0
404

 
ಚಿಗುರು ಅಂಕಣ: ರಾಧಾಕೃಷ್ಣ ಹೊಳ್ಳ
ಈ ವರ್ಷ ಹಿಂದೆಂದೂ ಕಂಡಿರದ ನೀರಿನ ಕ್ಷಾಮ ಕರಾವಳಿ ಮಲೆನಾಡು ಮತ್ತು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಂಡು ಬಂದಿದೆ. ಹೊಳೆ, ಹಳ್ಳ, ಕೆರೆ, ಬಾವಿಗಳ ನೀರು ಬತ್ತಿ ಹೋಗಿದ್ದು ಎಲ್ಲಾ ಕಡೆ ನೀರಿನ ಕೊರತೆ. ಹೆಚ್ಚಿನವರು ಕೊಳವೆ ಬಾವಿ ತೋಡಿಸಿ ನೀರು ನೀರಿನ ಅವಶ್ಯಕತೆಯನ್ನು ನೀಗಿಸಿಕೊಂಡರಾದರೂ, ಕೊಳವೆ ಬಾವಿಗಳು ಎಷ್ಟು ತೋಡಲ್ಪಟ್ಟವೋ ಅಷ್ಟೇ ಪ್ರಮಾಣದಲ್ಲಿ ತೋಡಿದ ಬಾವಿಗಳಲ್ಲಿ ಇಳುವರಿ ಕಡಿಮೆಯಾಯಿತು.
 
water_kshama_chiguru
 
ಕೆಲವು ಪೂರ್ಣ ಬತ್ತಿ ಹೋಯಿತು. ಇಂಥಃ ಸ್ಥಿತಿ ಈ ತನಕ ಆಗಿರಲಿಲ್ಲ. ಹೊಲಕ್ಕೆ ನೀರಾವರಿ ಹೇಗಾದರೂ ಇರಲಿ. ಕುಡಿಯಲು ನೀರಿದ್ದರೆ ಸಾಕು ಎಂಬ ಪರಿಸ್ಥಿತಿ ಉಂಟಾದುದು ಈ ಬಾರಿ. ಕೆಲವೆಡೆ ಟ್ಯಾಂಕರುಗಳಲ್ಲಿ ನೀರು ತರುವ ಪರಿಸ್ಥಿತಿ ಉಂಟಾಗಿತ್ತು.
 
 
ಇದಕ್ಕೆಲ್ಲಾ ಕಾರಣ ಈ ಕಳೆದ ವರ್ಷದ ಮುಂಗಾರು ಮಳೆ ಪ್ರಮಾಣದ ಕೊರತೆ. ಮುಂಗಾರು ಮಳೆ ಕೊರತೆಗೆ ಎಲ್ ನೀನೋ ಕಾರಣ ಎನ್ನುತ್ತಾರೆ. ಎಲ್ ನೀನೋ ಪರಿಸ್ಥಿತಿ ಹಿಂದಿನಿಂದಲೂ ಇತ್ತು. ಇದು ಉತ್ತರ ಫೆಸಿಫಿಕ್ ಸಾಗರದ ನೀರು ಬಿಸಿಯಾಗುವಿಕೆ. ಕಳೆದ ಎರಡು ವರ್ಷಗಳಿಂದ ಈ ಪರಿಸ್ಥಿತಿ ಆಗಿದೆ. ಅದರಿಂದಾಗಿ ಭಾರತ ಸೇರಿದಂತೆ ಎಶಿಯಾ ಖಂಡಕ್ಕೆ ಮಳೆ ಕೊರತೆ ಆಗಿದೆ. ಈ ವರ್ಷ ಅದರ ವಿರುದ್ಧ ಪರಿಣಾಮವಾದ ಲಾ-ನೀನಾ ಪರಿಸ್ಥಿತಿ ಉಂಟಾಗಲಿದೆಯಂತೆ. ಅದರಿಂದ ಧಾರಳ ಮಳೆ ಬರಬಹುದೆನ್ನುತ್ತಾರೆ. ಈಗಾಗಲೇ ಬಂಗಾಳ ಕೊಲ್ಲಿಯಲ್ಲಿನ ವಾಯಿ ಭಾರ ಕುಸಿತದ ಪರಿಣಾಮ ಕರಾವಳಿ, ಮಲೆನಾಡಿನ ಕೆಲವು ಕಡೆ ಅಲ್ಪ ಸ್ವಲ್ಪ ಮಳೆಯಾಗಿ ಒಮ್ಮೆ ತಂಪಾಗಿದೆ. ಇದರ ಪರಿಣಾಮ ಮೇ 20 ಕ್ಕೆ ಮುಗಿದಿದೆ. ಇನ್ನು ಜೂನ್ ಎರಡನೇ ವಾರವೇ ಮಳೆಬರುವ ನಿರೀಕ್ಷೆ.
 
 
ಈ ವರ್ಷ ಈ ತರವಾದ ನೀರಿನ ಕ್ಷಾಮ ತಲೆದೋರಲು ತಜ್ಞರು ಹೇಳುವಂತೆ ವಾತಾವರಣದ ಏರು ಪೇರು ಒಂದು ಕಾರಣ ಇರಬಹುದು. ಅದರ ಜೊತೆಗೆ ಬೇರೆ ಬೇರೆ ಕಾರಣಗಳೂ ಇಲ್ಲದಿಲ್ಲ. ಮುಖ್ಯವಾಗಿ ಈಗ ನಾವು ನೆಲದಿಂದ ತೆಗೆದು ಬಳಕೆ ಮಾಡುವ ನೀರು ಜಾಸ್ತಿಯಾಗಿದೆ. ನೆಲಕ್ಕೆ ಇಂಗಲ್ಪುಡುವ ನೀರು ಕಡಿಮೆಯಾಗಿದೆ. ಕೃಷಿ ವಿಸ್ತರಣೆ, ಉದ್ಯಮಗಳು ಎಲ್ಲದಕ್ಕೂ ನೀರಿನ ಮೂಲ ನೆಲವೇ ಆಗಿದ್ದು ಎಲ್ಲರೂ ಬಳಕೆ ಮಾಡುತ್ತಾ ನೆಲದ ನೀರಿನ ಪಾತ್ರೆ ಖಾಲಿಯಾಗಲಾರಂಭಿಸಿದೆ. Over exploitation ಎಂದು ಕರೆಯುವ ಸನ್ನಿವೇಶ ಉಂಟಾಗಿದೆ. ವರ್ಷದಿಂದ ವರ್ಷಕ್ಕೆ ಎಲ್ಲಾ ಕ್ಷೇತ್ರಗಳಲ್ಲೂ ನೀರಿನ ಬಳಕೆ ಜಾಸ್ತಿಯಾಗುತ್ತಿದೆ. ನೀರು ತುಂಬುವ ಪಾತ್ರೆ ಮಾತ್ರ ಅದರ ಇತಿ ಮಿತಿಯಲ್ಲೇ ಇದೆ. ಸಾಗರದ ನೀರು ಭೂಮಿಗೆ ಇಂಗಿದ ಕಾರಣ ಇಷ್ಟಾದರೂ ಇದೆಯೇನೋ ಅನ್ನಿಸುತ್ತದೆ. ಕೇವಲ ಮಳೆ, ಹೊಳೆ ಹಳ್ಳ , ಇಂಗು ಗುಂಡಿಗಳಳಿಂದ ಇಂಗಲ್ಪಟ್ಟ ನೀರು ನಮ್ಮ ಬಳಕೆ ಪ್ರಮಾಣಕ್ಕೆ ಹೋಲಿಸಿದರೆ ಏನೇನೂ ಸಾಲದು.
 
 
 
ನೀರಿನ ಬಳಕೆಗೆ ಮಿತಿ ಬೇಕು. ಎಲ್ಲಕೂ ಮುಖ್ಯವಾಗಿ ನೀರಿನ ಬಳಕೆಗೆ ಕೆಲವು ನಿಭಂಧನೆಗಳು ಅಗತ್ಯ. ಕರಾವಳಿ ಪ್ರದೇಶಗಳಲ್ಲಿ ಒಂದು ಚದರ ಮೀಟರ್ ವಿಸ್ತೀರ್ಣದಲ್ಲಿ 4000 ಲೀ ನೀರು ಸಂಗ್ರಹವಾಗುತ್ತದೆ. ಅಂದರೆ ಒಂದು ಎಕ್ರೆ ಸ್ಥಳದಲ್ಲಿ 1,60,00,000 ಲೀ ನೀರು ಮಳೆ ರೂಪದಲ್ಲಿ ಸಂಗ್ರಹವಾಗುತ್ತದೆ. ಇಷ್ಟು ನೀರನ್ನೂ ನಾವು ಹೊಳೆ ಹಳ್ಳದ ಮೂಲಕ ಸಮುದ್ರಕ್ಕೆ ಬಿಡುತ್ತಿದ್ದೇವೆ. ಅದನ್ನು ಉಪಯೋಗ ಮಾಡಿಕೊಳ್ಳಬಹುದು. ಸಾಮಾನ್ಯ ಜನ ಇದನ್ನು ಸಂಗ್ರಹಿಸಿ ಬಳಕೆ ಮಾಡಿಕೊಳ್ಳುವುದು ದೊಡ್ಡ ಖರ್ಚಿನದ್ದು. ಇದನ್ನು ಬಂಡವಾಳ ಹೊಂದಿರುವ ಉದ್ದಿಮೆಗಳು, ಸಾರ್ವಜನಿಕ ಆಡಳಿತ ವ್ಯವಸ್ಥೆಗಳು ಮಾಡಿಕೊಳ್ಳಬಹುದು. ಇವರು ಈಗ ಹೊಳೆ ನೀರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ.
 
 
 
ಇವರ ಬೇಡಿಕೆಗೆ ಸಾಲುವಷ್ಟು ನೀರಿಲ್ಲದಾಗ ಕೃಷಿಕರು ಹೊಳೆ ನೀರು ಬಳಕೆ ಮಾಡಬಾರದು ಎಂದು ಅಪ್ಪಣೆ ಕೊಡುತ್ತಾರೆ. ಇದು ಸರಿಯಲ್ಲ. ಬಂಡಬಾಳದ ಕೊರತೆ ಇರುವ ಕೃಷಿಕರು ಹೊಳೆ ಹಳ್ಳದ ನೀರನ್ನು ಬಳಕೆ ಮಾಡೀಕೊಂಡು, ಬಂಡವಾಳ ಇರುವವರು ಮಳೆ ನೀರನ್ನು ಸಂಗ್ರಹಿಸಿ ಅದನ್ನು ಬಳಕೆ ಮಾಡಿಕೊಳ್ಳಬಹುದಲ್ಲವೇ? ಮಳೆ ನೀರನ್ನು ಶುದ್ಧ ಮಾಡುವ ತಂತ್ರಜ್ಞಾನ ಇದೆ. ಅದನ್ನು ಅಳವಡಿಸಿಕೊಳ್ಳಬಹುದು. ಉದಾಹರಣೆಗೆ ಹೇಳಬೇಕಾದರೆ ಎಂ ಆರ್ ಪಿ ಎಲ್ ನಂತಹ ಒಂದು ಉದ್ದಿಮೆಗೆ 1000 ಎಕ್ರೆಯಷ್ಟು ಸ್ಥಳ ಇದೆ. ಇವರು 1-2 ಎಕ್ರೆ ಮಳೆ ನೀರಿನ ಸಂಗ್ರಹಕ್ಕೆ ಉಪಯೋಗಿಸಿಕೊಂಡರೆ, ಅದರಿಂದ ಬೇರೆ ಮೂಲದ ಅಷ್ಟೇ ಪ್ರಮಾಣದ ನೀರು ಉಳಿತಾಯವಾಗುತ್ತದೆ. ಇದನ್ನು ಮಾಡಿಕೊಳ್ಳುವಂತೆ ಅವರಿಗೆ ನಿರ್ಭಂಧ ಹೇರಬೇಕು.
 
 
 
ಕೃಷಿಕರಿಗೆ ಈ ವರ್ಷದ ಬರಗಾಲ ಒಂದು ಪಾಠವಾಗಿರಲಿ. ಮುಮ್ದೆ ಹೆಚ್ಚು ನೀರು ಅಪೇಕ್ಷಿಸುವ ಬೆಳೆಗಳನ್ನು ಬೆಳೆಸುವುದು ಕಡಿಮೆ ಮಾಡಿ. ಕಡಿಮೆ ನೀರು, ನೀರಿನ ಮಿತ ಬಳಕೆಗೆ ಗಮನ ಕೊಡಿ.ಕಡಿಮೆ ನೀರಿನಿಂದ ಅಧಿಕ ಉತ್ಪಾದನೆ ಪಡೆಯಬಹುದಾದ ತಂತ್ರಜ್ಞಾನ ಅಳವಡಿಸಿಕೊಳ್ಳಿ.
ಸಾರ್ವಜನಿಕ ಸ್ಥಳಗಳನ್ನು ಕಾಡು ಬೆಳೆಸಲು, ನೀರು ಇಂಗಿಸಲು ಬಳಕೆ ಮಾಡಿಕೊಳ್ಳಬೇಕು. ಮಳೆಗಾಲದ ನೀರನ್ನು ದಾಸ್ತಾನು ಮಾಡಲು ವ್ಯವಸ್ಥೆ ಬೇಕು. ಕೊಳವೆ ಬಾವಿ ನೀರು ಬಳಸಿ ನೀರಾವರಿ ಮಾಡುವರಿಗೆ ಮಿತವ್ಯಯದ ನೀರಾವರಿ ಕಡ್ಡಾಯಗೊಳಿಸಬೇಕು. ಕೆರೆ ನೀರಾವರಿಗೆ ಪ್ರೋತ್ಸಾಹ ಕೊಡಬೇಕು. ಹೊಳೆಗಳಿಂದ ನೀರೆತ್ತುವವರು ಕಟ್ಟ ಹಕಿ ನೀರು ತೆಗೆಯಬೇಕೆಂಬ ಶರತ್ತು ವಿಧಿಸಬೇಕು. ಈಗಾಗಲೇ ನಮ್ಮ ಸರಕಾರಗಳು ನೀರಿಗಾಗಿ ಹಲವಾರು ಯೋಜನೆಗಳನ್ನು ಕಒಗೊಂಡು ಸಾಕ್ಷ್ಟು ಹಣ ವಿನಿಯೋಗವನ್ನೂ ಮಡಿವೆ. ಆದರೆ ಅದು ನಂತರದ ನಿರ್ವಹಣೆಯಲ್ಲಿ ವಿಫಲವಾಗಿದೆ. ಸಾರ್ವಜನಿಕ ವ್ಯವಸ್ಥೆಯಲ್ಲಿ ಹಾಗೆ ಆಗುವುದು ಸಹಜ. ಅದಕ್ಕಾಗಿ ಎಲ್ಲವನ್ನೂ ರಾಜಕೀಯ ರಹಿತವಾಗಿ ಸ್ಥಳೀಯ ಫಲಾನುಭವಿಗಳ ಸೊಸೈಟೀ ಮಾಡಿ ನಿರ್ವಹಣೆಗೆ ಕೊಡಬೇಕು.
ತಕ್ಷಣ ನಾವು ನೀರಿನ ಮಿತವ್ಯಯ, ಪರಿಸರ ತಣ್ಣಗಾಗಿಸುವ ಮರಮಟ್ಟು ಬೆಎಸದೇ ಇದ್ದರೆ ಇನ್ನು ಬರುವ ಬರಗಾಲಗಳು ಇದಕ್ಕಿಂತ ಕಠಿಣವಾಗಲಿದೆ. ಮನೆಯಿಂದ ಹೊರಗೆ ಬರುವುದೇ ಕಷ್ಟವಾದರೂ ಅಚ್ಚರಿ ಇಲ್ಲ.
 
ರಾಧಾಕೃಷ್ಣ ಹೊಳ್ಳ
[email protected]

LEAVE A REPLY

Please enter your comment!
Please enter your name here