ನೀರಿನ ಅಭಾವದ ನಡುವೆ ಕೆಟ್ಟ ನೀರನ್ನು ಕುಡಿಯುವ ಕರ್ಮ

0
358

ಮಂಗಳೂರು ಪ್ರತಿನಿಧಿ ವರದಿ
ಹರಿನಾಥ್ ಮೇಯರ್ ಆಗಿದ್ದಾಗ ಮೇ ಕೊನೆಯ ತನಕ ಮಂಗಳೂರಿಗೆ ನೀರಿನಕೊರತೆ ಆಗುವುದಿಲ್ಲ ಎಂದು ಭರವಸೆ ನೀಡಿದ್ದರು. ಕವಿತಾ ಸನಿಲ್ 48 ಗಂಟೆ ನೀರುಕೊಟ್ಟರೆ 36 ಗಂಟೆ ನೀರು ಇಲ್ಲ ಎನ್ನುತ್ತಿದ್ದಾರೆ. ಹಾಗಾದರೆ ಆವತ್ತು ಹರಿನಾಥ್ ಹೇಳಿದ್ದು ಸುಳ್ಳಾ ಅಥವಾ ಈಗ ಕವಿತಾ ಸನಿಲ್ ಹೇಳುತ್ತಿರುವುದು ಸುಳ್ಳಾ ಎನ್ನುವುದನ್ನು ಜನರ ಮುಂದೆ ಸಾಬೀತು ಪಡಿಸಬೇಕು ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸಕಾಮತ್ ಹೇಳಿದ್ದಾರೆ.
 
 
ಒಂದೆಡೆ ಬಂಟ್ವಾಳ ಪುರಸಭೆಯ ತ್ಯಾಜ್ಯ ಡ್ರೈನೇಜ್ ವ್ಯವಸ್ಥೆ ಇಲ್ಲದೆ ರಾಜ ಕಾಲುವೆಗಳ ಮೂಲಕ ತುಂಬೆ ಬಳಿ ನೇತ್ರಾವತಿ ನದಿಯನ್ನು ಸೇರುತ್ತಿದೆ. ಶುದ್ಧಿಕರಣ ಮಾಡುತ್ತೆವೆ ಎಂದು ಪಾಲಿಕೆ ಹೇಳಿಕೊಂಡರೂ ಮನೆಯ ಪೈಪಿನಲ್ಲಿ ಬರುವ ನೀರನ್ನು ನೀವು ಪ್ರಯೋಗಶಾಲೆಯಲ್ಲಿ ಪರೀಕ್ಷೆಗೆ ಒಳಪಡಿಸಿದರೆ ಆರೋಗ್ಯಕ್ಕೆ ಮಾರಕವಾದ ಕ್ರಿಮಿಕೀಟಾಣುಗಳು ಅದರಲ್ಲಿ ಇರುವುದು ಪತ್ತೆಯಾಗಿವೆ.
 
 
 
ಈ ಕುರಿತು ಬಿಜೆಪಿ ನಿಯೋಗ ಜನರ ಮುಂದೆ ವಾಸ್ತವ ಇಟ್ಟಾಗ ಜಂಟಿ ಸಮೀಕ್ಷೆ ಮಾಡೋಣ ಎಂದಿದ್ದ ಕಾಂಗ್ರೆಸ್ ಈಗ ಅದರಿಂದ ನುಣುಚಿಕೊಂಡಿರುವುದು ಸ್ಪಷ್ಟ. ಕೊಳಕು ನೀರಿನ ಸೇವನೆಯಿಂದ ನಿಮ್ಮದೇಹದ ಒಳಗೆ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಕಾಯಿಲೆಗಳ ಗೂಡಾದರೆ ಅದಕ್ಕೆ ಕಾಂಗ್ರೆಸ್ ಪಕ್ಷ ಹೊಣೆ ತೆಗೆದುಕೊಳ್ಳುತ್ತದಾ ಎಂದು ವೇದವ್ಯಾಸಕಾಮತ್ ಪ್ರಶ್ನಿಸಿದ್ದಾರೆ.
 
 
ಈಗಾಗಲೇ ಮೂರು ದಿನಗಳಿಗೊಮ್ಮೆ ನೀರು ಜನರಿಗೆ ಸಿಗುತ್ತಿದ್ದರೆ ಆ ನೀರು ಕೂಡ ಶುದ್ಧವಾಗಿಲ್ಲದಿರುವುದರಿಂದ ಜನ ಮನಪಾ ಆಡಳಿತವನ್ನು ಶಪಿಸುವಂತೆ ಆಗಿದೆ.ಈ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪಾಲಿಕೆಗೆ ತಕ್ಕಪಾಠ ಹೇಳಿಕೊಡಲು ನಾಗರಿಕರು ಸಿದ್ಧರಾಗಿದ್ದಾರೆ.ಜನರ ಸಂಕಷ್ಟಕ್ಕೆ ಧ್ವನಿಯಾಗಿ ಬಿಜೆಪಿ ಕಾರ್ಯನಿರ್ವಹಿಸುತ್ತದೆ ಎಂದು ವೇದವ್ಯಾಸಕಾಮತ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here