ಅಂಕಣಗಳುಪ್ರಮುಖ ಸುದ್ದಿವಾರ್ತೆ

ನಿರ್ವಹಣಾ ಸಾಮರ್ಥ್ಯದ ಅಗತ್ಯತೆಗಳು

 
ಶಿಕ್ಷಣ ಚಿಂತನೆ: ಅರವಿಂದ ಚೊಕ್ಕಾಡಿ
ಮುಂದುವರಿದು ಭಾಗ
4) ನಿರ್ವಹಣಾ ಸಹಕಾರ:
ನಿರ್ವಹಣೆಯ ಯಶಸ್ಸು ಸೂಕ್ತ ಸಹಕಾರದ ಒದಗಿಸುವಿಕೆಯನ್ನೂ ಒಳಗೊಮಡಿದೆ. ಹಿಮದೆ ತೆಗೆದುಕೊಂಡ ಉದಾಹರಣೆಯನ್ನೇ ಗಮನಿಸಿ. ವಿದ್ಯಾರ್ಥಿಗಳಿಗೆ ಶಿಕ್ಷಕರು ನೋಟ್ಸ್ ಮಾಡಲು ಸೂಚಿಸುತ್ತಾರೆ. ಎಲ್ಲ ವಿದ್ಯಾರ್ಥಿಗಳಿಗೂ ನೋಟ್ಸ್ ಮಾಡಲು ಗೊತ್ತಿರುವುದಿಲ್ಲ. ಆಗ ವಿದ್ಯಾರ್ಥಿಗಳ ಪೋಷಕರು ಅವರಿಗೆ ನೋಟ್ಸ್ ಮಾಡಲು ಸಹಾಯ ಮಾಡಬೇಕಾಗುತ್ತದೆ. ಪಾಲಕರಿಗೂ ನೋಟ್ಸ್ ಮಾಡಲು ಗೊತ್ತಿಲ್ಲದಿದ್ದರೆ ಶಿಕ್ಷಕರು ಸಹಾಯವನ್ನು ಮಾಡಬೇಕಾಗುತ್ತದೆ. ಯಾರೊಬ್ಬರೂ ಸಹಾಯವನ್ನು ಮಾಡದೆ ಹೋದರೆ ನೋಟ್ಸ್ ಮಾಡುವ ಕಾರ್ಯದ ದಕ್ಷತೆಯು ಕುಸಿಯುತ್ತದೆ. ದೋಷ ಪೂರಿತವಾದ ನೋಟ್ಸ್ ಸಿದ್ಧವಾಗುತ್ತದೆ. ಆದ್ದರಿಂಸ ನಿರ್ವಹಣೆಯ ಯಶಸ್ಸಿಗೆ ಸೂಕ್ತ ಸಹಕಾರ ಮತ್ತು ಸ್ಪಂದಿಸುವಿಕೆಯು ಅಗತ್ಯವಾಗಿದೆ.
 
 
 
5)ನಿರ್ವಹಣಾ ಪ್ರೋತ್ಸಾಹ:
ಪ್ರತಿಯೊಂದು ಕಾರ್ಯವನ್ನೂ ಮಾನ ಸಹಜ ನಿರೀಕ್ಷೆಗಳಾದ ಪ್ರೋತ್ಸಾಹಗಳು ಉತ್ತೇಜಿಸುತ್ತದೆ.. ತಾನು ಒಳ್ಳೆಯ ಕೆಲಸವನ್ನು ಮಾಡಿದಾಗ ಪುರಸ್ಕಾರ ಸಿಗಬೇಕು ಎಂಬ ಭಾವನೆಯಿ ಎಲ್ಲರಲ್ಲಿಯೂ ಇರುವುದು ಸಹಜ. ಅದೇ ರೀತಿ ಯಾವುದಾದರೊಂದು ಕಾರ್ಯದ ನಿರ್ವಹಣೆಯಲ್ಲಿ ತೊಡಗಿದವರಿಗೆ ಸೂಕ್ತ ಪ್ರೋತ್ಸಾಹ ಸಿಕ್ಕಿದರೆ ನಿರ್ವಹಣೆಯ ದಕ್ಷತೆಯು ಹೆಚ್ಚಾಗುತ್ತದೆ.
 
 
 
 
6)ನಿರ್ವಹಣಾ ಪೂರ್ವ ಪ್ರೋತ್ಸಾಹ:
‘ಇಂತಹ ಕೆಲಸವನ್ನು ಯಶಸ್ವಿಯಾಗಿ ಮುಗಿಸಿದೆ ಇಷ್ಟು ಹಣವನ್ನು ಕೊಡುತ್ತೇನೆ’ ಎನ್ನುವುದು ನಿರ್ವಹಣಾ ಪೂರ್ವ ಪ್ರೋತ್ಸಾಹವಾಗಿದೆ. ಕೆಲಸವನ್ನು ಪ್ರಾರಂಭ ಮಾಡುವುದಕ್ಕೇನೆ ಇಲ್ಲಿ ಪ್ರೋತ್ಸಾಹವು ದೊರೆಯುತ್ತದೆ.
 
 
7)ನಿರ್ವಹಣಾವಧಿ ಪ್ರೋತ್ಸಾಹ:
ನಿಗದಿಪಡಿಸಿದ ಕಾರ್ಯದಲ್ಲಿ ತೊಡಗಿಸಿಕೊಂಡ ನಂತರ ಅಂತಿಮ ಯಶಸ್ಸನ್ನು ಪಡೆಯುವ ಮೊದಲೇ ತೋರುವ ಸಣ್ಣಪುಟ್ಟ ಯಶಸ್ಸುಗಳಿಗೆ ಪ್ರೋತ್ಸಾಹ ನೀಡುವುದು ನಿರ್ವಹಣಾ ಅವಧಿಯ ಪ್ರೋತ್ಸಾಹವಾಗಿದೆ. ಈ ಪ್ರೋತ್ಸಾಹವು ನಿರ್ವಹಣಾ ದಕ್ಷತೆಯನ್ನು ಬಹಳಷ್ಟು ಹೆಚ್ಚಿಸುತ್ತದೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here