ಅಂಕಣಗಳುಪ್ರಮುಖ ಸುದ್ದಿವಾರ್ತೆ

ನಿರ್ವಹಣಾ ಕೌಶಲವನ್ನು ಬೆಳೆಯಿಸಿಕೊಳ್ಳುವುದು

ಶಿಕ್ಷಣ ಚಿಂತನೆ: ಅರವಿಂದ ಚೊಕ್ಕಾಡಿ
ನಿರ್ವಹಣಾ ಕೌಶಲವನ್ನು ಬೆಳೆಯಿಸಿಕೊಳ್ಳಲು ಅನುಸರಿಸಬಹುದಾದ ಅನೇಕ ತಂತ್ರಗಳು ಹೀಗಿದೆ:
ಪಠ್ಯ ಅಧ್ಯಯನದ ಸನ್ನಿವೇಶ:
ಪಠ‍್ಯ ಅಧ್ಯಯನದ ಸನ್ನಿವೇಶದಲ್ಲಿ ನಾವು ಚೆನ್ನಾಗಿ ಅಧ್ಯಯನವನ್ನು ನಡೆಸುವ ಪಠ್ಯ ವಿಷಯಗಳು ಯಾವುವು ಎಂಬುದನ್ನು ಗುರುತಿಸಿಕೊಳ್ಳಬೇಕು. ಕೆಲವರು ಗಣಿತವನ್ನು ಚೆನ್ನಾಗಿ ಕಲಿಯಬಲ್ಲರು. ಇನ್ನು ಕೆಲವರು ಸಮಾಜ ವಿಜ್ಞಾನವನ್ನು ಚೆನ್ನಾಗಿ ಕಲಿಯಬಲ್ಲರು. ಆಗ ನಾವು ಯಾವುದನ್ನು ಚೆನ್ನಾಗಿ ಕಲಿಯಲಾರೆನೋ ಆ ವಿಷಯದಲ್ಲಿ ಚೆನ್ನಾಗಿ ತೊಡಗಿಸಿಕೊಳ್ಳಲು ಅಭ್ಯಾಸವನ್ನು ಮಾಡಬೇಕು. ಹೀಗೆ ತೊಡಗಿಕೊಳ್ಳುವಾಗ ಚೆನ್ನಾಗಿ ಕಲಿಕೆಯನ್ನು ನಡೆಸುವ ವಿಷಯವನ್ನು ಚೆನ್ನಾಗಿ ನಿರ್ವಹಿಸಲು ನಮಗೆ ಸಹಾಯಕವಾಗುವ ಸಾಮರ್ಥ್ಯಗಳು ಯಾವುವು ಎಂಬುದನ್ನು ಗುರುತಿಸಿಕೊಳ್ಳಬೇಕು. ಆ ಸಾಮರ್ಥ್ಯವನ್ನು ಚೆನ್ನಾಗಿ ಕಲಿಯಲು ಆಗದೆ ಇರುವ ವಿಷಯಕ್ಕೆ ಅನ್ವಯ ಮಾಡಿಕೊಳ್ಳಬೇಕು. ಹೀಗೆ ಅನ್ವಯಿಸಿಕೊಂಡಾಗ ಚೆನ್ನಾಗಿ ಕಲಿಯಲಾರದ ವಿಷಯಗಳನ್ನೂ ಚೆನ್ನಾಗಿ ಕಲಿಯಲು ಸಾಧ್ಯವಾಗುತ್ತದೆ. ಮತ್ತು ನಿರ್ವಹಣಾ ಸಾಮರ್ಥ್ಯವೂ ಗಳಿಕೆಯಾಗುತ್ತದೆ.
 
ಕಲಿಕಾ ತಂತ್ರಗಳ ಸಮರ್ಪಕ ಬಳಕೆ:
ಕಲಿಕೆಯನ್ನು ಸಮರ್ಪಕವಾಗಿ ನಡೆಸಲು ಸಹಾಯಕವಾಗುವ ಅನೇಕ ಕಲಿಕಾ ತಂತ್ರಗಳು ಇವೆ. ಕಂಠ ಪಾಠ ವಿಧಾನ, ಸರಣಿ ಕಲಿಕೆ, ಪ್ರಶ್ನೋತ್ತರ ಕಲಿಕೆ, ಸಂಕೇತ ಪದ… ಹೀಗೆ ಅನೇಕ ರೀತಿಯ ಕಲಿತಾ ತಂತ್ರಗಳು ಇವೆ. ಇವುಗಳಲ್ಲಿ ನಿಮಗೆ ಯಾವುದನ್ನು ಬಳಸಿಕೊಂಡರೆ ಚೆನ್ನಾಗಿ ಕಲಿಕೆ ಸಾಧ್ಯವಾಗುತ್ತದೆ ಎಂದು ಗುರುತಿಸಿಕೊಳ್ಳಬೇಕು. ಕೆಲವು ತಂತ್ರಗಳ ಮೂಲಕ ಸಾಧ್ಯವಾಗುತ್ತದೆ. ಇರುವುದು ಇನ್ನು ಕೆಲವು ತಂತ್ರಗಳಲ್ಲಿ ಮೂಲಕ ಸಾಧ್ಯವಾಗದೆ ಇರುವುದು ಇನ್ನು ಕೆಲವು ತಂತ್ರಗಳಲ್ಲಿ ಯಶಸ್ವಿಯಾಗುತ್ತದೆ. ಈ ರೀತಿ ಕಾರ್ಯದ ನಿರ್ವಹಣೆಗೆ ಸೂಕ್ತವಾದ ತಮತ್ರಗಳನ್ನು ಬಳಸುವ ಮತ್ತು ಅಳವಡಿಸಿಕೊಳ್ಳುವ ಸಾಮರ್ಥ್ಯವೂ ಬೆಳೆಯುತ್ತದೆ.
 
 
ಕ್ರೀಡಾ ಚಟುವಟಿಕೆಗಳು:
ಕ್ರೀಡೆ ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಇಷ್ಟಗಳಲ್ಲಿ ವ್ಯತ್ಯಾಸವಿರುತ್ತದೆ. ಕ್ರಿಕೆಟ್ ಒಂದು ಸಮೂಹ ಸನ್ನಿಯಾಗಿ ಬಾಧಿಸುತ್ತಿರುವುದರಿಂದ ಎಲ್ಲರೂ ಕ್ರಿಕೆಟನ್ನು ಇಷ್ಟಪಡುತ್ತಾರೆ ಎಂದು ಅನಿಸಬಹುದು. ಆದರೆ ಈ ರೀತಿ ಇಷ್ಟಪಡಲು ಅನೇಕ ಸಂದರ್ಭಗಳಲ್ಲಿ ಆ ಆಟವನ್ನು ಆಡುವುದಕ್ಕೆ ನಮಗಿರುವ ನಿರ್ವಹಣಾ ಸಾಮರ್ಥ್ಯವು ಕಾರಣವಾಗಿರುವುದಿಲ್ಲ. ಅಥವಾ ನಮ್ಮ ಆತ್ಮವಿಶ್ವಾಸವೂ ಅದಕ್ಕೆ ಕಾರಣವಾಗಿರುವುದಿಲ್ಲ. ಬದಲು ಕ್ರಿಕೆಟ್ ಗೆ ಬಂದು ಬಿಟ್ಟಿರುವ ಪ್ರತಿಷ್ಠೆಯು ಕಾರಣವಾಗಿರುತ್ತದೆ. ನಾವು ನಮ್ಮ ಆಸಕ್ತಿಯನ್ನು ಸರಿಯಾಗಿ ಗುರುತಿಸಬಲ್ಲವರಾದರೆ ನಾವು ‘ಹಾಕಿ’ ಆಟಗಾರರಾಗಿಯೂ ಮುಂದುವರಿಯಲು ಸಾಧ್ಯವಿಲ್ಲ. ಒಂದು ಕ್ರೀಡೆಯಲ್ಲಿ ಕೆಲವು ಕೌಶಲ್ಯಗಳಿದ್ದರೆ ಆ ಕೌಶಲ್ಯವನ್ನು ಬೇರೊಂದು ಕ್ರೀಡೆಗೆ ವರ್ಗಾಯಿಸಬಹುದು. ಆ ಮೂಲಕ ನಿರ್ವಹಣಾ ದಕ್ಷತೆಯನ್ನು ಹೆಚ್ಚಿಸಬಹುದು.
 
 
ತೊಡಗಿಕೊಳ್ಳುವಿಕೆ:
ಚಟುವಟಿಕೆ ಯಾವುದಾದರೂ ಪರವಾಗಿಲ್ಲ. ನಮ್ಮನ್ನು ನಾವು ಯಾವುದಾದರೊಂಡು ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾ ಹೋಗಬೇಕು. ಆದರೆ ಕೇವಲ ಒಂದೇ ಕಾರ್ಯಕ್ಕೆ ತೊಡಗಿಸಿಕೊಳ್ಳುವುದಕ್ಕೆ ಸೀಮಿತರಾಗಬಾರದು. ಕಲಿಕಾ ವಿಷಯಗಳಲ್ಲೂ ಅನೇಕ ರೀತಿಯ ಚಟುವಟಿಕೆಗಳು ಇರುತ್ತದೆ. ಕಲಿಕೆಯ ಹೊರಗೆಯೂ ಅನೇಕ ರೀತಿಯ ಚಟುವಟಿಕೆಗಳಿರುತ್ತದೆ. ಹೆಚ್ಚು ಹೆಚ್ಚು ಕೆಲಸ ಕಾರ್ಯದಲ್ಲಿ ಮತ್ತು ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುತ್ತಾ ಹೋದ ಹಾಗೆ ಕಾರ್ಯನಿರ್ವಹಣೆಯ ಹಲವು ರೂಪದ ಅನುಭವಗಳು ಉಂಟಾಗುತ್ತದೆ. ಈ ಅನುಭವಗಳ ಮೂಲಕ ಕಾರ್ಯನಿರ್ವಹಣೆಯ ಸಾಮರ್ಥ್ಯವು ಹೆಚ್ಚಾಗುತ್ತದೆ.
 
ತಾರ್ಕಿಕ ಚಿಂತನಾ ಸಾಮರ್ಥ್ಯ:
ಪ್ರಶ್ನಿಸುವ ಮನೋಭಾವವೇ ಚಿಂತನೆಯ ಜೀವಾಳ. ಆದರೆ ಪ್ರಶ್ನಿಸುವ ಮನೋಭಾವ ಎನ್ನುವುದನ್ನು ಸರಿಯಾದ ಅರ್ಥದಲ್ಲಿ ಅನುಸರಿಸಬೇಕು. ಪ್ರಶ್ನಿಸುವುದು ಎಂದರೆ ಆಕ್ಷೇಪಿಸುವುದಿಲ್ಲ. ಕಲಿಯುವ ಕುತೂಹಲದಿಂದ ಪ್ರಶ್ನಿಸಬೇಕು. ಪ್ರಶ್ನಿಸುವುದರಿಂದ ಪ್ರಶ್ನೆಗೆ ಒಳಪಡುವವರಿಗೆ ಅಹಿತಕರ ಅನುಭವವಾಗಬಾರದು. ಈ ರೀತಿಯ ಪ್ರಶ್ನಿಸುವ ಮನೋಭಾವದಿಂದ ತಾರ್ಕಿಕ ಚಿಂತನಾ ಸಾಮರ್ಥ್ಯವು ಹೆಚ್ಚಾಗುತ್ತದೆ. ಆ ಮೂಲಕ ನಿರ್ವಹಣೆಯ ಸಾಮರ್ಥ್ಯವು ಜಾಸ್ತಿಯಾಗುತ್ತದೆ.
 
 
 
ತರ್ಕಶಕ್ತಿಯನ್ನು ವೃದ್ಧಿಸುವಂತಹ ಅನೇಕ ರೀತಿಯ ಆಟಗಳು ಇವೆ. ಚೆಸ್, ಚೆನ್ನೆಮಣೆ, ಕವಡೆ, ಹುಲಿಕರು ಆಟ, ಕಳ್ಳ-ಪೊಲೀಸ್ ಆಟಗಳಂತಹ ಆಟಗಳು ತರ್ಕಶಕ್ತಿಯ ವೃದ್ಧಿಗೆ ಸಹಾಯ ಮಾಡುತ್ತದೆ. ಅಲ್ಲದೆ ದೈನಂದಿನ ಜೀವನದಲ್ಲಿ ಅನೇಕ ಸಮಸ್ಯಾ ಪ್ರಶ್ನೆಗಳು ಸ್ವಾರಸ್ಯಕರ ರೂಪದಲ್ಲಿ ಬಳಕೆಯಾಗುತ್ತದೆ. ಈ ರೀತಿಯ ಸಮಸ್ಯಾತ್ಮಕ ಪ್ರಶ್ನೆಗಳನ್ನು ಅಭ್ಯಾಸ ಮಾಡಬೇಕು. ಆ ಮೂಲಕ ತಾರ್ಕಿಕ ಸಾಮರ್ಥ್ಯದ ವೃದ್ಧಿಯಾಗುತ್ತದೆ.
 
 
ಬಹುಆಯ್ಕೆ ಮಾದರಿಯ ಪ್ರಶ್ನೆಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅಂತಹ ಪ್ರಶ್ನೆಪತ್ರಿಕೆಗಳನ್ನು ಸಂಗ್ರಹಿಸಿ ಅಭ್ಯಾಸ ನಡೆಸಬೇಕು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ‘ಸಾಮಾನ್ಯ ಮಾನಸಿಕ ಸಾಮರ್ಥ್ಯ’ ಎಂಬ ವಿಷಯ ಇರುತ್ತದೆ. ಸಾಮನ್ಯ ಮಾನಸಿಕ ಸಾಮರ್ಥ್ಯದ ಪತ್ರಿಕೆಯನ್ನು ಅಭ್ಯಾಸ ಮಾಡಬೇಕು. ಸೃಜನಶೀಲ ಚಟುವಟಿಕೆಗಳನ್ನು ನಿರ್ವಹಿಸಬೇಕು. ಇವೆಲ್ಲವೂ ತಾರ್ಕಿಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುತ್ತದೆ. ತರ್ಕಬದ್ಧವಾಗಿ ಚಿಂತಿಸುವ ಸಾಮರ್ಥ್ಯವು ಹೆಚ್ಚಾದಾಗ ಯಾವುದೇ ನಿರ್ವಹಣೆಯನ್ನು ಸಾಕಷ್ಟು ಯೋಚಿಸಿ ಮಾಡುವ ಪ್ರವೃತ್ತಿಯು ಬೆಳಯುತ್ತದೆ. ಆದರಿಂದ ನಿರ್ವಹಣಾ ದಕ್ಷತೆಯು ಜಾಸ್ತಿಯಾಗುತ್ತದೆ.
 
 
 
ವ್ಯಕ್ತಿಯ ವ್ಯಕ್ತಿತ್ವದ ವಿಕಾಸವು ಒಂದು ಅಥವಾ ಕೆಲವು ಅಂಶಗಳನ್ನು ಆಧರಿಸಿ ನಡೆಯುವುದಿಲ್ಲ. ಅದು ಒಟ್ಟಾರೆ ಜೀವನದ ಎಲ್ಲ ಮಗ್ಗುಲುಗಳಲ್ಲಿಯೂ ವ್ಯಕ್ತಿಯು ತೊಡಗಿಕೊಳ್ಳುವುದರಿಂದ ನಡೆಯುತ್ತದೆ. ಮತ್ತು ಆ ರೀತಿಯ ತೊಡಗಿಸಿಕೊಳ್ಳುವಿಕೆಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದುಉ ಕೂಡ ವ್ಯಕ್ತಿತ್ವ ನಿರ್ಮಾಣವು ಯಾವುದೋ ಒಂದು ವಸ್ತುವನ್ನು ಸಿದ್ಧಪಡಿಸಿಕೊಟ್ಟಂತೆ ಕೊಡುವುದಾಗಿರುವುದಿಲ್ಲ. ವ್ಯಕ್ತಿತ್ವ ವಿಕಾಸದ ಆಕಾಂಕ್ಷೆಯಿಂದ ನಮ್ಮನ್ನು ನಾವೇ ಅನೇಕ ಕೌಶಲಗಳಿಗೆ ಒಡ್ಡಿಕೊಂಡು ಗಳಿಸಿಕೊಳ್ಳುವ ಅನುಭವಗಳಿಂದ ವ್ಯಕ್ತಿತ್ವ ನಿರ್ಮಾಣವಾಗುತ್ತದೆ.
 
 
ವ್ಯಕ್ತಿತ್ವ ನಿರ್ಮಾಣವು ಎಲ್ಲೋ ನಡೆಯುವ ಕ್ರಿಯೆಯಲ್ಲ. ನಮ್ಮ ಸುತ್ತಮುತ್ತಲಿನ ಬದುಕಿನಲ್ಲೇ ನಡೆಯುವ ಕ್ರಿಯೆಯಾಗಿದೆ. ನಮ್ಮ ಬದುಕನ್ನು, ಬದುಕಿನಲ್ಲಿ ಕಾಣಿಸುವ, ಒಡನಾಡುವ ಎಲ್ಲವನ್ನೂ ಪ್ರೀತಿಸುವ ಗುಣವನ್ನು ಬೆಳೆಯಿಸಿಕೊಳ್ಳಬೇಕು. ಕಾಳಜಿ ಮತ್ತು ಬದ್ಧತೆಯ ನಡವಳಿಕೆಗಳನ್ನು ತಂದುಕೊಳ್ಳಬೇಕು. ನಮ್ಮ ಒಳಗಿನ ವ್ಯಕ್ತಿತ್ವವನ್ನು ಬೇರೆಯವರು ಹೇಗಾದರೂ ಗುರುತಿಸಲಿ; ನಾವು ಮಾತ್ರ ಸರಿಯಾಗಿಯೇ ಗುರುತಿಸಿಕೊಳ್ಳಬೇಕು. ನಮ್ಮನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳದೆ ಬದುಕನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಬದುಕನ್ನು ಅರ್ಥಮಾಡಿಕೊಳ್ಳುವುದು ವ್ಯಕ್ತಿತ್ವ ನಿರ್ಮಾಣಕ್ಕೆ ಮೂಲಮಂತ್ರವಾಗಿದೆ.
 
ಅರವಿಂದ ಚೊಕ್ಕಾಡಿ
[email protected]

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here