ನಿರ್ವಹಣಾ ಕೌಶಲವನ್ನು ಬೆಳೆಯಿಸಿಕೊಳ್ಳುವುದು

0
459

ಶಿಕ್ಷಣ ಚಿಂತನೆ: ಅರವಿಂದ ಚೊಕ್ಕಾಡಿ
ನಿರ್ವಹಣಾ ಕೌಶಲವನ್ನು ಬೆಳೆಯಿಸಿಕೊಳ್ಳಲು ಅನುಸರಿಸಬಹುದಾದ ಅನೇಕ ತಂತ್ರಗಳು ಹೀಗಿದೆ:
ಪಠ್ಯ ಅಧ್ಯಯನದ ಸನ್ನಿವೇಶ:
ಪಠ‍್ಯ ಅಧ್ಯಯನದ ಸನ್ನಿವೇಶದಲ್ಲಿ ನಾವು ಚೆನ್ನಾಗಿ ಅಧ್ಯಯನವನ್ನು ನಡೆಸುವ ಪಠ್ಯ ವಿಷಯಗಳು ಯಾವುವು ಎಂಬುದನ್ನು ಗುರುತಿಸಿಕೊಳ್ಳಬೇಕು. ಕೆಲವರು ಗಣಿತವನ್ನು ಚೆನ್ನಾಗಿ ಕಲಿಯಬಲ್ಲರು. ಇನ್ನು ಕೆಲವರು ಸಮಾಜ ವಿಜ್ಞಾನವನ್ನು ಚೆನ್ನಾಗಿ ಕಲಿಯಬಲ್ಲರು. ಆಗ ನಾವು ಯಾವುದನ್ನು ಚೆನ್ನಾಗಿ ಕಲಿಯಲಾರೆನೋ ಆ ವಿಷಯದಲ್ಲಿ ಚೆನ್ನಾಗಿ ತೊಡಗಿಸಿಕೊಳ್ಳಲು ಅಭ್ಯಾಸವನ್ನು ಮಾಡಬೇಕು. ಹೀಗೆ ತೊಡಗಿಕೊಳ್ಳುವಾಗ ಚೆನ್ನಾಗಿ ಕಲಿಕೆಯನ್ನು ನಡೆಸುವ ವಿಷಯವನ್ನು ಚೆನ್ನಾಗಿ ನಿರ್ವಹಿಸಲು ನಮಗೆ ಸಹಾಯಕವಾಗುವ ಸಾಮರ್ಥ್ಯಗಳು ಯಾವುವು ಎಂಬುದನ್ನು ಗುರುತಿಸಿಕೊಳ್ಳಬೇಕು. ಆ ಸಾಮರ್ಥ್ಯವನ್ನು ಚೆನ್ನಾಗಿ ಕಲಿಯಲು ಆಗದೆ ಇರುವ ವಿಷಯಕ್ಕೆ ಅನ್ವಯ ಮಾಡಿಕೊಳ್ಳಬೇಕು. ಹೀಗೆ ಅನ್ವಯಿಸಿಕೊಂಡಾಗ ಚೆನ್ನಾಗಿ ಕಲಿಯಲಾರದ ವಿಷಯಗಳನ್ನೂ ಚೆನ್ನಾಗಿ ಕಲಿಯಲು ಸಾಧ್ಯವಾಗುತ್ತದೆ. ಮತ್ತು ನಿರ್ವಹಣಾ ಸಾಮರ್ಥ್ಯವೂ ಗಳಿಕೆಯಾಗುತ್ತದೆ.
 
 
 
ಕಲಿಕಾ ತಂತ್ರಗಳ ಸಮರ್ಪಕ ಬಳಕೆ:
ಕಲಿಕೆಯನ್ನು ಸಮರ್ಪಕವಾಗಿ ನಡೆಸಲು ಸಹಾಯಕವಾಗುವ ಅನೇಕ ಕಲಿಕಾ ತಂತ್ರಗಳು ಇವೆ. ಕಂಠ ಪಾಠ ವಿಧಾನ, ಸರಣಿ ಕಲಿಕೆ, ಪ್ರಶ್ನೋತ್ತರ ಕಲಿಕೆ, ಸಂಕೇತ ಪದ… ಹೀಗೆ ಅನೇಕ ರೀತಿಯ ಕಲಿತಾ ತಂತ್ರಗಳು ಇವೆ. ಇವುಗಳಲ್ಲಿ ನಿಮಗೆ ಯಾವುದನ್ನು ಬಳಸಿಕೊಂಡರೆ ಚೆನ್ನಾಗಿ ಕಲಿಕೆ ಸಾಧ್ಯವಾಗುತ್ತದೆ ಎಂದು ಗುರುತಿಸಿಕೊಳ್ಳಬೇಕು. ಕೆಲವು ತಂತ್ರಗಳ ಮೂಲಕ ಸಾಧ್ಯವಾಗುತ್ತದೆ. ಇರುವುದು ಇನ್ನು ಕೆಲವು ತಂತ್ರಗಳಲ್ಲಿ ಮೂಲಕ ಸಾಧ್ಯವಾಗದೆ ಇರುವುದು ಇನ್ನು ಕೆಲವು ತಂತ್ರಗಳಲ್ಲಿ ಯಶಸ್ವಿಯಾಗುತ್ತದೆ. ಈ ರೀತಿ ಕಾರ್ಯದ ನಿರ್ವಹಣೆಗೆ ಸೂಕ್ತವಾದ ತಮತ್ರಗಳನ್ನು ಬಳಸುವ ಮತ್ತು ಅಳವಡಿಸಿಕೊಳ್ಳುವ ಸಾಮರ್ಥ್ಯವೂ ಬೆಳೆಯುತ್ತದೆ.
 
 
 
 
ಕ್ರೀಡಾ ಚಟುವಟಿಕೆಗಳು:
ಕ್ರೀಡೆ ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಇಷ್ಟಗಳಲ್ಲಿ ವ್ಯತ್ಯಾಸವಿರುತ್ತದೆ. ಕ್ರಿಕೆಟ್ ಒಂದು ಸಮೂಹ ಸನ್ನಿಯಾಗಿ ಬಾಧಿಸುತ್ತಿರುವುದರಿಂದ ಎಲ್ಲರೂ ಕ್ರಿಕೆಟನ್ನು ಇಷ್ಟಪಡುತ್ತಾರೆ ಎಂದು ಅನಿಸಬಹುದು. ಆದರೆ ಈ ರೀತಿ ಇಷ್ಟಪಡಲು ಅನೇಕ ಸಂದರ್ಭಗಳಲ್ಲಿ ಆ ಆಟವನ್ನು ಆಡುವುದಕ್ಕೆ ನಮಗಿರುವ ನಿರ್ವಹಣಾ ಸಾಮರ್ಥ್ಯವು ಕಾರಣವಾಗಿರುವುದಿಲ್ಲ. ಅಥವಾ ನಮ್ಮ ಆತ್ಮವಿಶ್ವಾಸವೂ ಅದಕ್ಕೆ ಕಾರಣವಾಗಿರುವುದಿಲ್ಲ. ಬದಲು ಕ್ರಿಕೆಟ್ ಗೆ ಬಂದು ಬಿಟ್ಟಿರುವ ಪ್ರತಿಷ್ಠೆಯು ಕಾರಣವಾಗಿರುತ್ತದೆ. ನಾವು ನಮ್ಮ ಆಸಕ್ತಿಯನ್ನು ಸರಿಯಾಗಿ ಗುರುತಿಸಬಲ್ಲವರಾದರೆ ನಾವು ‘ಹಾಕಿ’ ಆಟಗಾರರಾಗಿಯೂ ಮುಂದುವರಿಯಲು ಸಾಧ್ಯವಿಲ್ಲ. ಒಂದು ಕ್ರೀಡೆಯಲ್ಲಿ ಕೆಲವು ಕೌಶಲ್ಯಗಳಿದ್ದರೆ ಆ ಕೌಶಲ್ಯವನ್ನು ಬೇರೊಂದು ಕ್ರೀಡೆಗೆ ವರ್ಗಾಯಿಸಬಹುದು. ಆ ಮೂಲಕ ನಿರ್ವಹಣಾ ದಕ್ಷತೆಯನ್ನು ಹೆಚ್ಚಿಸಬಹುದು.
ಮುಂದುವರಿಯುವುದು..
ಅರವಿಂದ ಚೊಕ್ಕಾಡಿ
[email protected]

LEAVE A REPLY

Please enter your comment!
Please enter your name here