ನಿಯಮ ಸಡಿಲಿಸಿದ RBI

0
519

ರಾಷ್ಟ್ರೀಯ ಪ್ರತಿನಿಧಿ ವರದಿ
ಭಾರತೀಯ ರಿಸರ್ವ್ ಬ್ಯಾಂಕ್ ವ್ಯಾಪಕ ಟೀಕೆ ಬಳಿಕ ಹಳೆ ನೋಟು ಡೆಪಾಸಿಟ್ ನಿಯಮಾವಳಿಯನ್ನು ವಾಪಸ್ ಪಡೆದಿದೆ. 5 ಸಾವಿರ ರೂ.ಗಿಂತ ಹೆಚ್ಚಿನ ಮೊತ್ತದ ಠೇವಣಿಗೆ ಮಿತಿ ವಿಚಾರದಲ್ಲಿ ಡಿಸೆಂಬರ್ 19ರಂದು ಹೊರಡಿಸಿದ್ದ ಸುತ್ತೋಲೆಯನ್ನು ಆರ್ ಬಿಐ ವಾಪಸ್ ಪಡೆದುಕೊಂಡಿದೆ.
 
 
ಆರ್ ಬಿಐ ನಿಯಮ ಸಡಿಲಿಸಿ ಎಂದು ಹೊಸ ಅಧಿಸೂಚನೆ ಹೊರಡಿಸಿದೆ.  ಡಿ.30ರೊಳಗೆ 5000ರೂ.ಗಿಂತ ಹೆಚ್ಚು ಹಳೆಯ ನೋಟು ಠೇವಣಿಗೆ ಒಂದೇ ಅವಕಾಶ ಎಂದಿದ್ದ ಆರ್ ಬಿಐ ಡಿ.30ರೊಳಗೆ  ಎಷ್ಟು ಬಾರಿಯಾದರೂ ಠೇವಣಿ ಇಡಲು ಮತ್ತೆ ಅವಕಾಶ ನೀಡಿದೆ. ಇದರಿಂದ ಹಣ ಡೆಪಾಸಿಟ್ ಮಾಡುವ ಗ್ರಾಹಕರಿಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ. ಡೆಪಾಸಿಟ್ ಮಾಡುವವರಿಗೆ ಬ್ಯಾಂಕ್ ಅಧಿಕಾರಿಗಳು ಪ್ರಶ್ನಿಸುವ ನಿಯಮವನ್ನೂ ಸಡಿಲಿಕೆ ಮಾಡಿದೆ.

LEAVE A REPLY

Please enter your comment!
Please enter your name here