ನಿಯಂತ್ರಣದ ಹಂತದಲ್ಲಿ ಕಾಡ್ಗಿಚ್ಚು

0
204
ಅರಣ್ಯಸುಡುತ್ತಿರುವ ಬೆಂಕಿ ಕೆನ್ನಾಲಗೆ

ವಿಶೇಷ ಪ್ರತಿನಿಧಿ ವರದಿ
ಉತ್ತರಾಖಂಡ್ನಲ್ಲಿ ಕಂಡುಬಂದ ಭೀಕರ ಕಾಡ್ಗಿಚ್ಚು ತನ್ನ ಜ್ವಾಲೆಯನ್ನು ಕಡಿಮೆಮಾಡಿದೆ. ಶೇ. 70ರಷ್ಟು ನಿಯಂತ್ರಿಸಲಾಗಿದೆ ಎಂದು  ಎನ್ ಡಿ ಆರ್ ಎಫ್ ತಿಳಿಸಿದೆ. ಇದರ ಬೆನ್ನಲ್ಲೇ ಉತ್ತರಾಖಂಡ್ನಲ್ಲಿ ಭಾರೀ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮಳೆ ಸುರಿದರೆ ಬಹುತೇಕ ಕಾಡ್ಗಿಚ್ಚು ಶಮನಗೊಳ್ಳಲಿದೆ. ಕಾಡ್ಗಿಚ್ಚಿನಿಂದಾಗಿ ಅಪಾರ ಪ್ರಮಾಣದ ಸಸ್ಯಸಂಪತ್ತು ಪ್ರಾಣಿ ಸಂಪತ್ತು ನಾಶವಾಗಿದೆ. ಕಾಡ್ಗಿಚ್ಚಿಗೆ ಈ ತನಕ 7ಮಂದಿ ಬಲಿಯಾಗಿದ್ದು 2,269 ಹೆಕ್ಟೇರ್ ಅರಣ್ಯ ಪ್ರದೇಶ ನಾಶವಾಗಿದೆ.
ಕಿಚ್ಚುನಂದಿಸಲು ಶ್ರಮ
ಸಾವಿರಾರು ಸಿಬ್ಬಂದಿಗಳು ನಿರಂತರವಾಗಿ ಕಾಡ್ಗಿಚ್ಚು ನಂದಿಸಲು ಅವಿರತ ಶ್ರಮವಹಿಸುತ್ತಿದ್ದಾರೆ.  ಇಡೀ ರಾಜ್ಯದಲ್ಲಿ 11 ಕಡೆ ಮಾತ್ರ ಬೆಂಕಿಯ ಕೆನ್ನಾಲಿಗೆಹತೋಟಿಗೆ ಬಂದಿಲ್ಲ. ಹವಾಮಾನ ಇಲಾಖೆ ನೀಡಿದ  ಮುನ್ಸೂಚನೆಯಂತೆ ಮಂಗಳವಾರ ಭಾರೀ ಮಳೆಯೇನಾದರೂ ಬಂದಲ್ಲಿ ಕಾಡ್ಗಿಚ್ಚು ಪೂರ್ಣ ಶಮನವಾಗಲಿದೆ. ಅಲ್ಲದೆ ಪರಿಸ್ಥಿತಿ ಸಂಪೂರ್ಣ ನಿಯಂತ್ರಣವಾಗಲಿದೆ.
 

LEAVE A REPLY

Please enter your comment!
Please enter your name here