ನಿಮಗೆ ಜ್ವರ ಇದ್ಯಾ? ಈ ಸಲಹೆ ಖಂಡಿತಾ ಪಾಲಿಸಿ…

0
5445
ಸಾಂಧರ್ಬಿಕ ಚಿತ್ರ

ಡಾ.ಪತಂಜಲಿ

ನಮಸ್ಕಾರ, ಜ್ವರ ಬಂದರೆ ಸ್ವಂತಕ್ಕೆ ಮಾತ್ರೆ ತಿಂದು ಆರೋಗ್ಯ ಹಾಳುಮಾಡಿಕೊಳ್ಳುತ್ತಿರುವವರಿಗೆ ನನ್ನದೊಂದು ಪುಟ್ಟ ವಿನಂತಿ, ಪ್ಯರಾಸಿಟಮಾಲ್ ಮಾತ್ರೆ 650 mg ದಿನಕ್ಕೆ ಎರಡು, ಮೂರು ಬಾರಿ ಸೇವಿಸುವುದು ಅತ್ಯಂತ ಅಪಾಯಕಾರಿ, 1) ವೈರಸ್ ಸೋಂಕಿನಿಂದ ಅವುಗಳ ಸಂಖ್ಯಾ ವೃದ್ಧಿ ಯನ್ನು ತಡೆಯಲು ದೇಹದ ಉಷ್ಣತೆ ಹೆಚ್ಚುತ್ತದೆ, ಜ್ವರ ನಿಯಂತ್ರಿಸಲು ಪ್ಯರಾಸಿಟಮಾಲ್ ಮಾತ್ರೆಗಳನ್ನು ಅಧಿಕ ಪ್ರಮಾಣದಲ್ಲಿ ನುಂಗುವುದರಿಂದ ತಾತ್ಕಾಲಿಕವಾಗಿ ದೇಹದ ಉಷ್ಣತೆ ಕಡಿಮೆಯಾಗಿ ವೈರಸ್ ಗಳ ಸಂಖ್ಯೆ ಹೆಚ್ಚಲು ಕಾರಣವಾಗುತ್ತದೆ, ಜೊತೆಗೆ ಸುಸ್ತು ಮತ್ತು ನಿರ್ಜಲೀಯತೆ ಸಹಾ ಉಂಟಾಗುತ್ತದೆ. ಇದರಿಂದ ರೋಗನಿರೋಧಕ ಶಕ್ತಿ ಸಹಾ ಕುಂಠಿತ ವಾಗುತ್ತದೆ.

2) ಜ್ವರ ನಿಯಂತ್ರಕ ಮಾತ್ರೆ ನುಂಗುವುದರಿಂದ ದೇಹದ ಲ್ಲಿ ನಿರ್ಜಲೀಯತೆಯೊಂದಿಗೆ ಶ್ವಾಸಕೋಶ ಸಹಾ ಒಣಗಿದಂತೆ ಆಗುವುದರಿಂದ ಒಣ ಕೆಮ್ಮು ಮತ್ತು ಉಬ್ಬಸ ಉಂಟಾಗುತ್ತದೆ, ವೈರಸ್ ಸಹಾ ಶ್ವಾಸಕೋಶ ವನ್ನು ಹಾನಿ ಮಾಡುವುದರಿಂದ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತದೆ.

Advertisement

3) ಹೆಚ್ಚಿನ ಪ್ರಮಾಣದಲ್ಲಿ ಪ್ಯರಾಸಿಟಮಾಲ್ ಮಾತ್ರೆ ನುಂಗುವುದರಿಂದ ನಿರ್ಜಲೀಯತೆ ಉಂಟು ಮಾಡುವದರಿಂದ ಮೂತ್ರ ಕೋಶಗಳು ಮತ್ತು ಲಿವರ್ ಗಳಿಗೆ ಸ್ವಲ್ಪ ಮಟ್ಟಿಗೆ ಹಾನಿಯಾಗಿರುತ್ತದೆ, ರೋಗ ಉಲ್ಬಣಾವಸ್ಥೆಗೆ ಹೋದಾಗ, ಇನ್ನೂ ಅನೇಕ ಬಗೆಯ ಔಷಧಗಳನ್ನು ಬಳಸಬೇಕಾಗುತ್ತದೆ, ಈಗಾಗಲೇ ಸ್ವಲ್ಪ ಮಟ್ಟಿಗೆ ಹಾನಿಯಾಗಿರುವುದರಿಂದ ಬಹಳ ಬೇಗ ಬಹು ಅಂಗಾಂಗ ವೈಫಲ್ಯ ಉಂಟಾಗಿ ಸಾವು ಸಂಭವಿಸುತ್ತದೆ.

4) ಜ್ವರಕ್ಕೆ ಈ ಕೆಳಗಿನ ಸಾಮಾನ್ಯ ಪ್ರಯೋಗಗಳನ್ನು ನಡೆಸಿ, ಒಂದು ಬಕೇಟ್ ಬಿಸಿ ನೀರಿನಲ್ಲಿ ಮೊಣಕಾಲು ವರೆಗೆ ಕಾಲುಗಳನ್ನು ಇಳಿಬಿಟ್ಟು ಮೈ ಮೇಲೆ ಬೆಡ್ ಶೀಟ್ ಹೊದ್ದು ಕುಳಿತುಕೊಳ್ಳಿ, ಜೊತೆಗೆ 200 ಮಿಲಿ ಯಷ್ಟು ಬಿಸಿ ನೀರು ಕುಡಿಯಿರಿ, ಆದರೂ ಜ್ವರ ಏರುತ್ತಿದ್ದಲ್ಲಿ ಪ್ಯಾರಾಸಿಟಮಾಲ್ 500mg ಮಾತ್ರೆ ಸೇವಿಸಿ,99F, 100F , ಡಿಗ್ರಿ ಜ್ವರ ಬರುತ್ತಿದ್ದಂತೆ ಅತಿಯಾಗಿ ಗಾಬರಿ ಮಾಡಿಕೊಳ್ಳಬೇಡಿ, ನಿಮ್ಮ ವೈದ್ಯರಿಗೆ ತಿಳಿಸಿ ಸಲಹೆ ಪಡೆದುಕೊಳ್ಳಿ, ನಿಮ್ಮಷ್ಟಕ್ಕೆ ಮಾತ್ರೆ ಸೇವಿಸಿ ದಿನ ಕಳೆಯದಿರಿ, ರೋಗಕ್ಕೆ ತಕ್ಕಂತೆ ಚಿಕಿತ್ಸೆಯನ್ನು ಸರಿಯಾದ ಸಮಯಕ್ಕೆ ಪಡೆಯುವುದು ಅತ್ಯಗತ್ಯ, ಇದೊಂದು ಚಿಕ್ಕ ಸಲಹೆ.

ಡಾ.ಪತಂಜಲಿ, ವೈದ್ಯಾಧಿಕಾರಿ, ಪುರಪ್ಪೆಮನೆ, ಹೊಸನಗರ

LEAVE A REPLY

Please enter your comment!
Please enter your name here