ನಿನ್ನ ಮರೆವ ಹೊನ್ನನೊಲ್ಲೆನೋ ಶಂಕರ!

0
490

ಮಸೂರ ಅಂಕಣ: ಆರ್ ಎಂ ಶರ್ಮ
ಹೊನ್ನು-ಹಣ-ರೊಕ್ಕ-ಕಾಂಚಾಣ-ದುಡ್ಡು-ಪೈಸ-“ಮನಿ”-ಹೇಗೂ ಹೇಳಿ ಅದು ಸಂಪತ್ತು ಮತ್ತೇನಲ್ಲ-ಮತ್ತೇನಿಲ್ಲ!
ಇರಲಿ ಹೊನ್ನಿನ ಬಗೆಗೆ ಹೆಚ್ಚು ವ್ಯಾಖ್ಯಾನ ಮಾಡದೇ-ಮಾಡಬೇಕಾಗಿರುವುದಕ್ಕೆ ನಾವು ಅಣಿಯಾಗುತ್ತೇವೆ.
ನಾವು ಮಂಗಳುರು ಆಕಾಶವಾಣಿಯಲ್ಲಿ ಅಪರಾಹ್ನದ ಕಾಯ೯ಕ್ರಮವನ್ನು ಕೇಳುತ್ತಿದ್ದಾಗೆ ತಾರಿಕು ೦೫/೦೭/೨೦೧೬ ರಂದು ಘಂಟೆ ೧೩೦೦ ಯಿಂದ ೧೩೧೦- ೧೦ ನಿಮಿಷಗಳ ಪ್ರಸ್ತುತಿಯಲ್ಲ್ ಒಂದು ಭಕ್ತಿ ರಚನೆಯಲ್ಲಿ ಕೇಳಿಸಿಕೊಂಡ ಸಂಗತಿ- ಮೇಲೆ ಹೇಳಿದ ತಲೆಬರಹದ ಸಾಲು-ಅದನ್ನು ಹಾಡಿದವರು-ಶ್ರೀಮತಿ ಕಸ್ತೂರಿ ಶಂಕರ್-ರಚನಾಕಾರರು ಆಗ ನಮಗೆ ತಿಳಿಯಲಿಲ್ಲ-ಕಾರಣ ಆಗಲೇ ಅದರ ಉದ್ಘೋಷಣೆ ಆಗಿಹೋಗಿತ್ತು!ಅದರ ರಚನಾಕಾರರು-ಶ್ರೀಮತಿ ಉಮಾ ಶಿವಾನಂದ ಎಮ್ತ
ಮತ್ತೆ ಅದೇ ಹಾಡು ತರಿಕು ೦೩/೦೮/೨೦೧೬ ರಂದು ಆಕಾಶವಾಣಿಯಲ್ಲ್ ಪ್ರಸಾರಗೊಂಡಾಗ ತಿಳಿಯಿತು.
ಇಲ್ಲಿ ಚಚೆ೯ಯ ವಸ್ತು ಪರಶಿವನನ್ನು ಮರೆಯುವ-ಮರೆಯಿಸುವ ಸಂಪತ್ತು ತನಗೆ ಬೇಡ ಎಂತ ಭಕ್ತನ/ಭಕ್ತಳ ಅರಿಕೆ.
ಇದರಲ್ಲಿ ವೈರಾಗ್ಯವಿದೆಯೇ-ಮನೋನಿಗ್ರಹವಿದೆಯೇ ಎಂದರೆ-ಇದೊಂದು ಟೊಳ್ಳಿನ ಮಾತು ಅಷ್ಟೇ ಸತ್ಯಾತ್ ಸತ್ಯ! ಕಾರಣ -ಆಯ೯ವಾಕ್ ಹೇಳುತ್ತದೆ
“ಸವೇ೯ ಗುಣಾಃ ಕಾಂಚಾಣಂ ಆಶ್ರಯಂತಿ!”
ಇರಲಿ-ಶ್ರ್‍ಇ ಶಂಕರ ಭಗವತ್ಪಾದರು-ಬಹಳ ಬಡತನದ ಬೇಗೆಯಿಂದ ಬಳಲುತ್ತಿದ್ದ ವಯಸ್ಸಾದ ಹೆಂಗಸಿಗೆ-
“ಚಿನ್ನದ ನೆಲ್ಲಿಕಾಯಿ ಕರುಣಿಸಿ ಸಹಾಯ ಮಾಡಿದರು ಎಂಬ ಮಾತಿದೆ!”
ಇಲ್ಲಿ ಸ್ವಾರಸ್ಯ-ರೋಚಕ-ವಿಮಶಾ೯ತ್ಮಕ ಸಂಗತಿ-ವಯಸ್ಸಾದ ಸ್ತ್ರೀ-ಬಡತನದ ಬೇಗೆ-ಬದುಕಲು-ನಿರಾಳವಾಗಿ ಬದುಕಲು-ಹೊನ್ನು-ಚಿನ್ನದ “ಆಮಲಕ” ದ ಒದಗಣೆ!
ಪರಿವ್ರಾಜಕ ಶ್ರೇಷ್ಟರು-ಅಧ್ಯಾತ್ಮದ ಬಲ-ಬೆಲೆ-ನೆಲೆ ತಿಳಿದಿದ್ದ ಸಂತರು ಐಹಿಕ ವಾಂಛೆಗೆ ಮಯಾ೯ದೆಕೊಟ್ಟು ತೀಮಾ೯ನಿಸಿದರು ಎಂಬುದು-ಹೊನ್ನಿನ ವರಕ್ಕೆ ಹಿಡಿದ ಕನ್ನಡಿ.
ಇದನ್ನು ಅಲ್ಲಗಳೆಯುವರು ಹೇಗೆ ಸಮಥಿ೯ಸಿಕೊಂಡಾರು-ಹೊನ್ನಿನ ಗುಣವನ್ನು-ವೈರಾಗ್ಯ ಭೂಪತಿಯ ತಪ್ಪು ತೀಮಾ೯ನವಲ್ಲ ಎಂತ?
ಇರಲಿ ನಮ್ಮ ದೈನಿಕ ದೇವ ಪ್ರಾಥ೯ನೆ-ಅನುಷ್ಟಾನ-ಪಾರಾಯಣ ಇತ್ಯಾದಿ ಸಂಗತಿಗಳಲ್ಲಿ-
೧.ಭಗವದ್ಗೀತೆ-ಇಲ್ಲಿ ಹೊನ್ನಿನ ಚಿಂತನೆ,
೨.ಶ್ರೀ ಲಕ್ಶ್ಮೀನಾರಾಯಣ ಹೃದಯ-ಇಲ್ಲಿ ಹಣದ ಚಿಂತನೆ,
೩. ಶ್ರೀ ವಿಷ್ಣು ಸಹಸ್ರನಾಮ ಇಲ್ಲಿ ಹಣದ ಚಿಂತನೆ,
ಇವನ್ನು ನಾವು ಅತ್ಯಗತ್ಯವಾಗಿ-ಇತ್ಯಾತ್ಮಕವಾಗಿ ಇಲ್ಲಿ ಹೇಳಲೇಬೇಕಿದೆ-ಕಾರ್‍ಅಣ ಭಗವತ್ -ಅಧ್ಯಾತ್ಮದಲ್ಲಿ-ಹಣ-ಆಇಹಿಕವೇ-ಆಮುಶ್ಮಿಕವೇ -ಮತ್ತೇಕೆ ಅದರ ಜಿಜ್ನಾಸೆ-ಎಂತ!
ಬನ್ನಿ ಮಂತ್ರಭಾಗ/ಪಠ್ಯದ-ದೇವವಾಕ್ ಇವನ್ನು ಈಗ ಕೇಳಿಸಿಕೊಳ್ಳೋಣ-ತತ್ಪಸ್ಚಾತ್ ವಿಮಶಿ೯ಸೋಣ.
“ಚತುವಿ೯ಧಾಃ ಭಜಂತೇ ಮಾಂ ಜನಾಃ———————
————-ಅರ್ಥಾ೯ರ್ಥಿ————— ಭರತಷ೯ಭ!”- ಇದರ ತಾತ್ಪಯ೯-
ನಾಲ್ಕು ಬಗೆಯ ಫಲಾಪೇಕ್ಷಿಗಳು ನನ್ನನ್ನು ಭಜಿಸುತ್ತಾರೆ ಇಷ್ಟಾಥ೯ ಸಿದ್ಧಿಗೆ-ಅದರಲ್ಲಿ “ಅಥಾ೯ಥಿ೯” ಯೂ ಒಂದು ಗುಂಪು/ವಗ೯!
“ರಮಾಕಟಾಕ್ಷಾತ್ ಭವೇತ್ ಸಹಸ್ರಾಕ್ಷಶತಾಧಿಕಶ್ರೀಃ”-ಅಥಾ೯ತ್-ಮಹಾತಾಯಿ ಲಕ್ಶ್ಮೀ ಕೃಪೆಯಿಂದ ಪ್ರಾಥಿ೯ಸುವ ಜನ-ಪುರುಷ/ಸ್ತ್ರೀ-ಸಾವಿರಕಣ್ಣಿನ ದೈವ ದೇವೇಂದ್ರನಿಗಿಂತಲೂ ಹೆಚ್ಚು ಶ್ರೀಮಂತನಗುತ್ತಾನೆ/ತ್ತಾಳೆ!
“ಅಥಾ೯ಥಿ೯ ಚಾಥ೯ಮಾಪ್ನುಯಾತ್!”-
ಎಂದರೆ ಹಣಬಯಕೆಗೆ-ಪ್ರಾಥಿ೯ಸಿದವರಿಗೆ ಅದರ ಪ್ರಾಪ್ತಿ-ಭಗವ್ದನುಗ್ರಹ ಎಂತ ಸ್ಪಷ್ಟವಾಗಿ!
ಇನ್ನು ಲೋಕಾಭಿರಾಮವಾಗಿ ಪ್ರಚಲಿತ ದೇವ ವಾಕ್ ಗಳನ್ನು ಗಮನಿಸೋಣ-
“ಕಾಂಚಾಣಂ ಕಾಯ೯ಸಿದ್ಧಿಃ!”
ಉದ್ಯೋಗಪುರುಷಸಿಂಹಂ ಉಪೈತಿ ಲಕ್ಶ್ಮೀ!”
ಮಹಾಲಕ್ಶ್ಮೀ ಅಷ್ಟಕಂ ನಲ್ಲಿ-“ದ್ವಿಕಾಲಂ ಪಠೇನ್ನಿತ್ಯಮ್ ಧನಧಾನ್ಯ ಸಮನ್ವಿತಂ!”
“ಸವ೯ಸಿದ್ಧಿಂ ಅವಾಪ್ನೋತಿ ರಾಜ್ಯಂ ಪ್ರಾಪ್ನೋತಿ ಸವ೯ದಾ!”
ಇಲ್ಲೆಲ್ಲಾ ಇರುವುದು ಮಹಾಲಕ್ಶ್ಮಿಯ ವರಪ್ರಸಾದವೇ ವಿನಹ ಮತ್ತೇನಿಲ್ಲ!
ಇನ್ನೂ ಮುಂದೆ ಹೋಗೋಣ ಸ್ವಯಂ-ಲಕ್ಶ್ಮೀ-ಸವ೯ಸಂಪತ್ತಿನ ಒಡತಿ-ಪತಿಸೇವೆಯನ್ನು ಚ್ಯುತಿ ಇಲ್ಲದಂತೆ ಮಾಡುತ್ತಾಳೆ ಎಂಬುದಕ್ಕೆ ಸಾಕ್ಷಿ-
“ಏನು ಧನ್ಯಳೋ ಲಕುಮಿ ಎಷ್ಟು ಮಾನ್ಯಳೋ-
ಸಾನುರಾಗದಿ ಹರಿಯ ಸೇವೆ ತಾನೆ ಮಾಳ್ಪಳೋ-
ಕೋಟಿಕೋಟಿ ಭೃತ್ಯರಿರಲು ಹರಿಯಸೇಸ್ವೆ ತಾನೇ ಮಾಳ್ಪಳೋ!”
ಇಲ್ಲಿಲ್ಲವೇ-ಗತಿ-ಮತಿ-ರೀತಿ-ನೀತಿ?
ಕಾರಣ “ಪತಿಯೇ ಪರದೈವ-ಪತಿಯೇ ಪರಮೇಶ್ವರ ಎಂಬ ಸನಾತನ ನಂಬಿಕೆ!”
ಮತ್ತೇಕೆ ಸಲ್ಲದ ಭೀತಿ-ಶಂಕರನನ್ನು ಮರೆಸುವ ಹೊನ್ನಿನ ಹುಣ್ಣು?
ಇಲ್ಲಿ ನೋಡಿ-“ಭಾಗ್ಯಾದ ಲಕ್ಶ್ಮೀ ಬಾರಮ್ಮಾ ನಮ್ಮಮ್ಮ ಸೌಭಾಗ್ಯದ ಲಕ್ಶ್ಮೀ ಬಾರಮ್ಮಾ—–
ಸಕ್ಕರೆ ತುಪ್ಪದ ಕಾಲುವೆ ಹರಿಸಿ-ಶುಕ್ರವಾರದ ಪೂಜೆಯ ವೇಳೆಗೆ——–”
ಲಕ್ಶ್ಮಿಯನ್ನು ಪ್ರಾಥಿ೯ಸುವುದು-ಪ್ರಾಪ್ತಿಗಲ್ಲದೇ ಮತ್ತೇನಕ್ಕೆ?
ಪ್ರಾಪ್ತಿ-ತೃಪ್ತಿ-ನಿರಾಳ ಅದೇ ಪರಸ್ಪರ-ಮತ್ತೇಕೆ ಸಲ್ಲದ ಅಪಸ್ವರ?
ಇದನ್ನೆಲ್ಲಾ ಕಂಡ ಪುರಂದರದಾಸರು-ಕೆಂಡವಾಗಿ-ಖಂಡತುಂಡವಾಗಿ ಉದ್ಗಾರವೆತ್ತಿದ ಸಾಲು-
“ಉದರ ವೈರಾಗ್ಯವಿದು ಪದುಮನಾಭನಲಿ ಲೇಶಭಕುತಿಯೂ ಇರದ —–”
ಎಂತ ಢೋಂಗಿಗಳನ್ನು ಗೇಲಿಮಾಡಿದರು!
ಗೀತಾಚಾಯ೯ನ ಪ್ರಕಾರ ಮನಸ್ಸು ಚಂಚಲ-ಅದನ್ನು
ಸತತ ಪ್ರಯತ್ನದಿಂದ ಹತೋಟಿಯಲ್ಲಿ ಇಡಲು ಸಾಧ್ಯ!
ಹತೋಟಿಯಲ್ಲಿದ್ದರೆ ಮರೆಯುವ-ಮರೆಯಿಸುವ ಆಭಾಸವೆಲ್ಲಿ-ಏಕೆ-ಹೇಗೆ?
ಇಂದ್ರಿಯ ನಿಗ್ರಹವಿದ್ದರೆ ಹೊನ್ನು ಹುಣ್ಣಾಗದೇ-ಹಣ್ಣಾಗಿ ಮಣ್ಣಾಗುವ ವರೆಗೆ ಶಂಕರನನ್ನು ನೆನೆಯಲು ಕಷ್ಟವಿಲ್ಲ ಅಂತಲ್ಲವೇ ನಿಧಾ೯ರ?
ಹತೋಟಿಯಿಲ್ಲದವರು ಬರೀ ಹೇಳುವುದು ಲೊಳಲೊಟ್ಟೆ ಅಷ್ಟೇ ಮತ್ತೇನಿಲ್ಲ ಸತ್ಯವಾಗಿಯೂ!
ಈಗ ಓದುಗ ಮಹನೀಯರು ಪ್ರವೇಶಿಸಲಿ-
ಓದುಗ ಮಹನೀಯರು ಚಚಿ೯ಸಲಿ-ಮಂಥಿಸಲಿ-ಚಿಂತಿಸಲಿ-ಆಗೆಲ್ಲಾ ಸಲೀಸು-ಇನ್ನೆಲ್ಲಿ ಹೊಲಸು ಆಗ ಅಲ್ಲವೇ?
ಮಹನೀಯರಿಗೆ ಅವಕಾಶಮಾಡಿಕೊಟ್ಟು ನಾವು ನೇಪಥ್ಯಕ್ಕೆ ಸಧ್ಯಃ ಸರಿಯುತ್ತೇವೆ-ಕಾರಣ ಈಗದೇ ಪಥ್ಯ ಸತ್ಯವಾಗಿಯೂ!
ಆರ್.ಎಂ.ಶರ್ಮ
[email protected]

LEAVE A REPLY

Please enter your comment!
Please enter your name here