ನಿಧನ

0
499

ನಮ್ಮ ಪ್ರತಿನಿಧಿ ವರದಿ
ಕಾರು ಚಾಲಕರಾಗಿದ್ದ ಬಂಟ್ವಾಳ ಅಲ್ಲಿಪಾದೆಯ ಮರಾದೊಟ್ಟು ನಿವಾಸಿ ಶಂಕರ ಮೂಲ್ಯ (65) ಅಲ್ಪಕಾಲದ ಅಸೌಖ್ಯದಿಂದ ಸೆ15ರ ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಪತ್ನಿ , ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
 
 
ಎಳೆಯ ವಯಸ್ಸಿನಲ್ಲೇ ಮೆಕ್ಯಾನಿಕ್ ವೃತ್ತಿ ಆರಂಭಿಸಿ ಮನೆತನದ ಕೃಷಿ, ತೋಟಗಾರಿಕೆಯ ಕೆಲಸದ ಜತೆಗೆ ಬಾಡಿಗೆ ಕಾರು ಚಾಲಕರಾಗಿ ದುಡಿದಿದ್ದರು. ಎಪ್ಪತ್ತರ ದಶಕದಲ್ಲಿ ಬಿ.ಸಿ.ರೋಡ್- ಮುಂಬೈ ನಡುವೆ ಪ್ರಧಾನವೆನಿಸಿದ್ದ ಬಾಡಿಗೆ ಕಾರು ಚಾಲಕರಾಗಿ, ಹಲವರಿಗೆ ವಾಹನ ಚಾಲನಾ ತರಬೇತುದಾರರಾಗಿ ಗುರುತಿಸಿಕೊಂಡಿದ್ದರು. ಗುತ್ತಿಗೆ ಆಧಾರದಲ್ಲಿ ಕೆನರಾ ಇಂಜಿನಿಯರಿಂಗ್ ಕಾಲೇಜಿನ ಕಾರು ಚಾಲಕರಾಗಿಯೂ ಅವರು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು.
ತನ್ನ ಸರಳತೆ, ಸಜ್ಜನಿಕೆ ಸ್ನೇಹಶೀಲ ವ್ಯಕ್ತಿತ್ವದವರಾಗಿ ‘ಡ್ರೈವರ್ ಶಂಕರಣ್ಣೆ’ ಎಂದು ಅವರು ಗುರುತಿಸಿಕೊಂಡಿದ್ದರು.

LEAVE A REPLY

Please enter your comment!
Please enter your name here