ನಿಧನ

0
531

ಮಂಗಳೂರು ಪ್ರತಿನಿಧಿ ವರದಿ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತರಾದ ರಮೇಶ್ ಪ್ರಭು (83) ಇಂದು ಮುಂಜಾನೆ ತಮ್ಮ ಸ್ವಗೃಹದಲ್ಲಿ ದೈವಾದೀನರಾಗಿದ್ದಾರೆ..
 
 
 
ಶ್ರೀಯುತರು ಜನಸಂಘ ಕಾಲದಿಂದಲೂ ಸಕ್ರೀಯರಾಗಿದ್ದು ಎರಡು ಬಾರಿ ಹೊಯಿಗೆಬಜಾರ್ ಕ್ಷೇತ್ರದಿಂದ ಮಂಗಳೂರು ನಗರ ಸಭೆಗೆ ಸ್ಪರ್ಧಿಸಿದ್ದರು. ಇವರು ಜನಾನುರಾಗಿಯಾಗಿದ್ದು ಅನೇಕ ಕಾರ್ಯಕರ್ತರನ್ನು, ಪತ್ನಿ, ಪುತ್ರಿ ಹಾಗೂ ಇಬ್ಬರು ಗಂಡುಮಕ್ಕಳನ್ನು ಅಗಲಿದ್ದಾರೆ.
 
 
 
ರಮೇಶ್ ಪ್ರಭು ಅವರ ಅಗಲಿಕೆಗೆ ಸಂಸದರಾದ ನಳಿನ್ ಕುಮಾರ್ ಕಟೀಲ್, ಮಾಜಿ ಉಪಾಸಭಾಪತಿಯಾದ ಯನ್.ಯೋಗೀಶ್ ಭಟ್, ಮಾಜಿ ವಿಧಾನ ಪರಿಷತ್ ಸದಸ್ಯ ಕೆ. ಮೋನಪ್ಪ ಭಂಡಾರಿ, ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಅಧ್ಯಕ್ಷರಾದ ಡಿ.ವೇದವಾಸ ಕಾಮತ್, ಮ.ನ.ಪಾ ಸದಸ್ಯ ಪ್ರೇಮಾನಂದ ಶೆಟ್ಟಿ, ಎನ್.ಎಂ.ಪಿ.ಟಿಯ ಟ್ರಸ್ಟಿಗಳಾದ ನಿತಿನ್ ಕುಮಾರ್ ತಮ್ಮ ಸಂತಾಪವನ್ನು ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here