ನಿಧನ

0
415

ವರದಿ: ಸುನೀಲ್ ಬೇಕಲ್
ಉಜಿರೆಯಲ್ಲಿರುವ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ನಿವೃತ್ತ ಕಛೇರಿ ಅಧೀಕ್ಷಕ ಟಿ. ಆರ್. ನಾವಡ (85) (ಟಿ. ರಾಮಚಂದ್ರ ನಾವಡ) ಅಲ್ಪ ಕಾಲದ ಅನಾರೋಗ್ಯದ ಬಳಿಕ ಉಡುಪಿಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು.
 
 
ತೆಂಕನಿಡಿಯೂರು ಗ್ರಾಮದ ಗರಡಿ ಮಜಲು ನಿವಾಸಿಯಾದ ಅವರು ಉಜಿರೆಯಲ್ಲಿ ಎಸ್.ಡಿ.ಎಂ. ಪ್ರೌಢಶಾಲೆಯಲ್ಲಿ (ಅಂದಿನ ಡಿ.ಕೆ.ವಿ. ಹೈಸ್ಕೂಲು) ಕೆಲವು ವರ್ಷಗಳಲ್ಲಿ ಪದವೀಧರ ಸಹಾಯಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದರು.
1966ರಲ್ಲಿ ಕಾಲೇಜು ಆರಂಭವಾದಾಗ ಕಛೇರಿ ಪ್ರಬಂಧಕರಾಗಿ ಸೇರಿದ ಅವರು ಕಛೇರಿ ಅಧೀಕ್ಷಕರಾಗಿ ಮೂವತ್ತು ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದರು.
 
 
ನೇರ ನಡೆ-ನುಡಿಯ ಶಿಸ್ತಿನ ಸಿಪಾಯಿಯಾಗಿದ್ದ ಅವರು, ಪರೋಪಕಾರಿಯಾಗಿದ್ದು, ಸಂಕಷ್ಟದಲ್ಲಿರುವವರ ನೋವಿಗೆ ತಕ್ಷಣ ಸ್ಪಂದಿಸಿ ಸಹಾಯ ಮಾಡುವ ಉದಾರ ಹೃದಯ ಶ್ರೀಮಂತಿಕೆ ಹೊಂದಿದ್ದರು. ದೃಢ ಸಂಕಲ್ಪ, ಪ್ರಬಲ ಇಚ್ಛಾಶಕ್ತಿ, ಆತ್ಮವಿಶ್ವಾಸ, ಬದ್ಧತೆ ಕರ್ತವ್ಯ ಪ್ರಜ್ಞೆ, ದೂರಾಲೋಚನೆ, ಅಂದವಾದ ಕೈ ಬರಹ, ಒಂದೇ ಕೈಯಿಂದ ಬೆರಳಚ್ಚು ಯಂತ್ರದಲ್ಲಿ ಟೈಪ್ ಮಾಡುವುದು ಅವರ ವಿಶೇಷ ಗುಣಗಳು. ಅವರು ಅವಿವಾಹಿತರಾಗಿದ್ದರು.
 
 
ಯಕ್ಷಗಾನ, ಸಾಹಿತ್ಯ, ಕ್ರಿಕೆಟ್, ಬ್ಯಾಡ್ಮಿಂಟನ್, ಶಟ್ಲ್ಕಾಕ್ ಆಡುವುದು, ವಾತರ್ಾಪತ್ರಿಕೆಗಳನ್ನು ಓದುವುದು ಅವರ ಮೆಚ್ಚಿನ ಹವ್ಯಾಸಗಳು. ಇಂಗ್ಲೀಷ್ ಭಾಷೆಯಲ್ಲಿ ಅಪಾರ ಪಾಂಡಿತ್ಯ ಮತ್ತು ಪ್ರಭುತ್ವ ಹೊಂದಿದ ಅವರು ಪತ್ರ ವ್ಯವಹಾರದ ಶೈಲಿ ಮತ್ತು ವಿನ್ಯಾಸದಲ್ಲಿ ಪರಿಣತರಾಗಿದ್ದರು.

LEAVE A REPLY

Please enter your comment!
Please enter your name here