ನಿಧನ: ಪೂವಪ್ಪ ನಲ್ಕೆ ಕಲ್ಲಬೆಟ್ಟು

0
368

 
ವರದಿ: ಗಣೇಶ್ ಕಾಮತ್
ಮೃತರು ಪತ್ರಕರ್ತೆ ಪ್ರೇಮಶ್ರೀ ಕಲ್ಲಬೆಟ್ಟು ಅವರ ತಂದೆ
ಮೂಡುಬಿದಿರೆ ಕಲ್ಲಬೆಟ್ಟು ಕಂದಟ್ಟು ಮನೆಯ ಪೂವಪ್ಪ ನಲ್ಕೆ (58) ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ರಾತ್ರಿ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಪತ್ರಕರ್ತೆ ಪ್ರೇಮಶ್ರೀ ಕಲ್ಲಬೆಟ್ಟು ಸಹಿತ ಮೂವರು ಪುತ್ರಿಯರು ,ಇಬ್ಬರು ಪುತ್ರರನ್ನು ಹಾಗೂ ಪತ್ನಿಯನ್ನು ಅಗಲಿದ್ದಾರೆ.
 
 
ದೈವ ನರ್ತಕರಾಗಿ ಕಳೆದ ಎಡರೂವರೆ ದಶಕಗಳ ಕಾಲ ಈ ಭಾಗದಲ್ಲಿ ಗುರುತಿಸಿಕೊಂಡಿದ್ದ ಅವರು ಗುಳಿಗ, ಪಂಜುರ್ಲಿ ದೈವದ ನರ್ತಕರಾಗಿ ಖ್ಯಾತರಾಗಿದ್ದರು. ಪೂವಪ್ಪ ನಲ್ಕೆಯವರ ನಿಧನಕ್ಕೆ ಮೂಡುಬಿದಿರೆ ಪ್ರೆಸ್ ಕ್ಲಬ್ ಸರ್ವ ಸದಸ್ಯರ ಪರವಾಗಿ ಅಧ್ಯಕ್ಷ ಧನಂಜಯ ಮೂಡುಬಿದಿರೆ ಸಹಿತ ಪ್ರಮುಖರುಸಂತಾಪ ವ್ಯಕ್ತ ಪಡಿಸಿದ್ದಾರೆ.

LEAVE A REPLY

Please enter your comment!
Please enter your name here