ನಿತ್ಯಾನಂದ ಕರಸ್ಪರ್ಶದಿಂದ ಮಗು ಗುಣಮುಖವಾಯಿತು!

0
1885


ನಿತ್ಯ ಅಂಕಣ: ೬೫- ತಾರಾನಾಥ್‌ ಮೇಸ್ತ,ಶಿರೂರು.
ಶ್ರೀವೆಂಕಟರಾವ್ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಪರಿಸರದ ನಿವಾಸಿ. ಅವರು ಆ ಕಾಲದ ಪ್ರತಿಷ್ಠಿತ ಮನೆತನದ ವ್ಯಕ್ತಿ. ಅವರ ಮಗಳ ಮಗುವೊಂದು ಆಮಶಂಕೆ ಕಾಯಿಲೆಯಿಂದ ಬಳಲುತಿತ್ತು. ಮಗುವಿಗೆ ಹಲವಾರು ವೈದ್ಯರುಗಳ ಔಷಧೋಪಾಚಾರಗಳು ನಡೆಯುತ್ತವೆ. ಆದರೆ ಮಗುವಿಗೆ ಬಾಧಿಸಿರುವ ವ್ಯಾಧಿ ಮಾತ್ರ ಗುಣಕಾಣುದಿಲ್ಲ. ಮಗು ಬದುಕುವುದು ಕಷ್ಟ ಎನ್ನುವ ಚಿಂತೆಯು ವೆಂಕಟರಾವ್ ಅವರ ಮನೆಯವರಿಗೆ ಕಾಡುತ್ತದೆ.
ಮಗುವಿನ ಆರೋಗ್ಯ ಸ್ಥಿತಿಕಂಡು ಬಹಳ ಬೇಸರದಲ್ಲಿದ್ದ ವೆಂಕಟರಾವ್ ಅವರು, ಒಂದು ದಿನ ರಾತ್ರಿಯ ಸಮಯದಲ್ಲಿ “ನಿತ್ಯಾನಂದ ಸ್ವಾಮಿಗಳು ಮಂಗಳೂರಿನಲ್ಲಿ ಮೊಕ್ಕಾಂ ಹೂಡಿದ್ದಾರೆ ಎಂಬ ವಿಷಯವನ್ನ ಕೇಳಿ ತಿಳಿದುಕೊಂಡಿದ್ದೇನೆ. ಕೊನೆಯ ಪ್ರಯತ್ನವಾಗಿ ಅವರ ಬಳಿಗೆ ಮಗುವನ್ನು ಕರೆದುಕೊಂಡು ಹೋದರೆ, ನಮ್ಮ ಮಗುವನ್ನು ಖಂಡಿತವಾಗಿ ರಕ್ಷಿಸಿಕೊಳ್ಳಲು ಸಾಧ್ಯವಿದೆ” ಹೀಗೆಂದು ಮನೆ ಮಂದಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ನಂತರ ಬಾಗಿಲಿನ ಚಿಲಕ ಭದ್ರಗೊಳಿಸಿ ತಮ್ಮ ಕೋಣೆಯಲ್ಲಿ ಮಲಗಿಕೊಂಡರು. ಮರು ದಿನ ಬೆಳಗ್ಗಿನ ಜಾವ ಬೇಗನೆ ಎದ್ದ ವೆಂಕಟರಾವ್ ಅವರು, ಬಾಗಿಲು ತೆರೆದು ಚಾವಡಿಗೆ ಬರುತ್ತಾರೆ. ಆಗ ಅವರು ಅಲ್ಲಿಯ ದೃಶ್ಯಕಂಡು ಅಚ್ಚರಿಗೆ ಒಳಗಾಗುತ್ತಾರೆ. ಅಲ್ಲಿಯ ಮರದ ಬೆಂಚಿನ ಮೇಲೆ, ಕಪ್ಪು ದೇಹದ ನಿತ್ಯಾನಂದರು ಕುಳಿತು ಕೊಂಡಿದ್ದರು..!! ಅವರಿಗೆ ನಂಬಲು ಅಸಾಧ್ಯವಾದ ದೃಶ್ಯ..! ಆದರೂ ನಂಬಲೇ ಬೇಕಾದ ಸತ್ಯವು ಅವರ ಕಣ್ಣಮುಂದೆ ಅನಾವರಣ ಆಗಿರುತ್ತದೆ. ರಾತ್ರಿಯ ಸಮಯಯಲ್ಲಿ ಭವ ರೋಗ ವೈದ್ಯ ನಿತ್ಯಾನಂದರನ್ನು, ತಮಗೆ ಎದುರಾದ ಸಂಕಷ್ಟದ ಪರಿಸ್ಥಿತಿಯಲ್ಲಿ ನೆನಪಿಸಿಕೊಂಡಿದ್ದರು. ತಾವು ಮಂಗಳೂರಿಗೆ ಅವರಿದ್ದಲ್ಲಿಗೆ ಹೋಗಲು ನಿಶ್ಚಯಿಸಿದ್ದೇವು. ಈಗ ಮುಂಜಾನೆ ಗುರುದೇವರು ನಮ್ಮ ಮನೆಯ ಚಾವಡಿಯಲ್ಲಿ ಇದ್ದಾರೆ..! ಏನಿದು..? ಆಶ್ಚರ್ಯ..! ಎಂದು ಅಚ್ಚರಿ ಪಡುವಂತರಾಗುತ್ತಾರೆ. ತಮ್ಮ ಮನೆಯಲ್ಲಿ ಗರುದೇವರ ದರ್ಶನ ಪಡೆದು ವೆಂಕಟರಾವ್ ಅವರು ಪರಮಾನಂದವನ್ನು ಪಡೆಯುವ ಭಾಗ್ಯವಂತರಾಗುತ್ತಾರೆ.

ವೈದ್ಯೋರೂಪಿ ಗುರುದೇವರ ಬಳಿಗೆ ವೆಂಕಟರಾವ್ ಅವರು ಮನೆಯೊಳಗಿಂದ ಸಣ್ಣ ಹುಡುಗನ ಎತ್ತಿಕೊಂಡು ವಿಧೇಯರಾಗಿ ನಿಲ್ಲುತ್ತಾರೆ. ವ್ಯಾಧಿ ಬಾಧೆಯಿಂದ ನಿತ್ರಾಣಗೊಂಡಿರುವ ಮಗುವನ್ನು ನಿತ್ಯಾನಂದರು ರಾವ್ ಅವರಿಂದ ತೆಗೆದುಕೊಂಡು, ತಮ್ಮ ತೊಡೆಯ ಮೇಲೆ ಕುಳಿಸಿಕೊಳ್ಳುತ್ತಾರೆ. ಮಗುವಿನ ತಲೆಯನ್ನು ನಯವಾಗಿ ಸಾಂತ್ವನ ಹೇಳುತ್ತಲೇ ಪ್ರೀತಿಯಿಂದ ಸವರುತ್ತಾರೆ. ನಿತ್ಯಾನಂದ ಕರಸ್ಪರ್ಶದ ಪ್ರಕ್ರಿಯೆಗಳನ್ನು ಮನೆ ಮಂದಿ ಎಲ್ಲರೂ ಕಣ್ಣಿಟ್ಟು ಕಾಣುತ್ತಿರುತ್ತಾರೆ. ಇದ್ದಕಿದ್ದಂತೆ ಮಗುವು ಗುರುದೇವರ ಮೈಮೇಲೆಯೆ ಗಬ್ಬು ವಾಸನೆಯುಕ್ತ ಭೇದಿಮಾಡುತ್ತದೆ. ಬಳಿಕ ಮಗುವಲ್ಲಿ ಚೇತರಿಕೆಯ ಲಕ್ಷಣಗಳು ಎದ್ದುಕಾಣುತ್ತದೆ. ಗುರುದೇವರ ಮೈಯನ್ನು ಮನೆ ಮಂದಿ ಶುಚಿಗೊಳಿಸುತ್ತಾರೆ.

ವೆಂಕಟರಾವ್ ಅವರಲ್ಲಿ ನಿತ್ಯಾನಂದರು ಮೂಲ್ಕಿ ಪರಸರದ ಜನತೆಗೆ ಅನ್ನಸಂತರ್ಪಣೆ ನಡೆಸುವ ಮೂಲಕ ಸಂತೃಪ್ತ ಮಾಡಿಸಬೇಕೆಂದು ಹರಸುತ್ತಾರೆ. ನಿತ್ಯಾನಂದರ ಕರಸ್ಪರ್ಶದ ಚಿಕಿತ್ಸೆಯ ಮೂಲಕ ಮಗು ಮುಂದೆ ಗುಣಪಡೆಯುತ್ತದೆ. ಅಂದಿನ ಆ ಸಣ್ಣ ಗಂಡು ಮಗುವೇ ಮುಂದೆ ರಮೇಶ್ ರಾವ್ ಹೆಸರಿನಿಂದ ಬೆಳೆದು ನಿಲ್ಲುತ್ತದೆ. ರಮೇಶ್ ರಾವ್ ಅವರು ಓರಿಯಂಟಲ್ ಫಯರ್ ಮತ್ತು ಜನರಲ್ ಇನ್ಸೂರೆನ್ಸ್ ಕಂಪನಿಯ ಮ್ಯಾನೇಜರ್ ಹುದ್ದೆ ನಿಭಾಯಿಸುತ್ತಾರೆ. ಗುರುದೇವರ ಅನನ್ಯ ಭಕ್ತರಾಗಿರುತ್ತಾರೆ.

LEAVE A REPLY

Please enter your comment!
Please enter your name here