ನಿಡ್ಡೋಡಿ ಪ್ರಾಜೆಕ್ಟ್ – ರೈತರ ಮಾಹಿತಿ ಕಲೆ ಹಾಕಿದ ಸಮಿತಿ

0
11637

ಮೂಡುಬಿದಿರೆ :ನಿಡ್ಡೋಡಿಯ ಪ್ರಸ್ತಾವಿತ ಸೀ ಫುಡ್ ಪಾರ್ಕ್ ಪ್ರದೇಶಕ್ಕೆ ಡಿವೈಎಫ್ಐ, ರೈತ ಸಂಘದ ನಿಯೋಗ ಭೇಟಿ ನೀಡಿರುತ್ತಾರೆ .
 ಸ್ಥಳೀಯ ರೈತರು, ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಪ್ರಸ್ತಾವಿತ ಸೀ ಫುಡ್ ಪಾರ್ಕ್ ಯೋಜನೆಯ ನಿಡ್ಡೋಡಿ ಗ್ರಾಮಕ್ಕೆ  ಕರ್ನಾಟಕ ಪ್ರಾಂತ ರೈತ ಸಂಘ, ಡಿವೈಎಫ್ಐ ಮುಖಂಡರಾದ ಯಾದವ ಶೆಟ್ಟಿ, ಮುನೀರ್ ಕಾಟಿಪಳ್ಳ, ಶ್ರೀನಾಥ್ ಕುಲಾಲ್ ನೇತೃತ್ವದ ನಿಯೋಗ ಭೇಟಿ ನೀಡಿ ಸ್ಥಳೀಯ ರೈತರು ಹಾಗೂ ಗ್ರಾಮಸ್ಥರ ಜೊತೆಗೆ ಚರ್ಚೆ ನಡೆಸಿ ಮಾಹಿತಿ ಕಲೆ ಹಾಕಿತು.‌
ಮೂರು ಬೆಳೆಯ ಫಲವತ್ತಾದ ಐವತ್ತು ಎಕರೆ ಕೃಷಿ ಭೂಮಿಯಲ್ಲಿ  ಸ್ಥಾಪಿಸಿಲು ರಾಜ್ಯ ಸರಕಾರ ಉದ್ದೇಶಿಸಿರುವ ಸೀ ಫುಡ್ ಪಾರ್ಕ್ ಯೋಜನೆಯ ಕುರಿತು ಗ್ರಾಮಸ್ಥರಿಗೆ ಹಾಗೂ ಕೃಷಿ ಭೂಮಿಯ ಒಡೆತನ ಹೊಂದಿರುವ ರೈತರಿಗೆ ಯಾವುದೇ ಮಾಹಿತಿ ಒದಗಿಸದೆ ಅವರನ್ನು ಕತ್ತಲಲ್ಲಿ ಇಟ್ಟಿರುವುದು, ಘಟಕಕ್ಕೆ  ದಿನವೊಂದಕ್ಕೆ ಬೇಕಾಗುವ ಕನಿಷ್ಟ ಐದು ಲಕ್ಷ ಲೀಟರ್ ನೀರು ಗ್ರಾಮದ ಅಂತರ್ಜಲದಿಂದ ಪಡೆಯುವ, ಮೀನು ಶುದ್ದೀಕರಿಸಿದ ಘಟಕದ ತ್ಯಾಜ್ಯ ನೀರು ವಿಲೇವಾರಿಯ ಕುರಿತು ಅಸ್ಪಷ್ಟತೆ, ಮೀನು ಸಂಸ್ಕರಣೆ, ಸಾಗಾಟದ ಸಂದರ್ಭ ಉಂಟಾಗುವ ಮಾಲಿನ್ಯ, ಉದ್ಯೋಗ ಸೃಷ್ಟಿಸದ ರಫ್ತು ಆಧಾರಿತವಾದ,  ಒಟ್ಟು ಸಮೃದ್ದ ಕೃಷಿ ಪ್ರಧಾನ ನಿಡ್ಡೋಡಿ ಗ್ರಾಮದ ಪರಿಸರ, ಜನಜೀವನಕ್ಕೆ ಸೀ ಪುಡ್ ಪಾರ್ಕ್ ಕಂಟಕ ಎಂಬ ವಾದವನ್ನು ನಿಯೋಗ ಆಲಿಸಿದ್ದು, ಘಟಕವನ್ನು ನಿಡ್ಡೋಡಿ ಗ್ರಾಮದಲ್ಲಿ ಸ್ಥಾಪಿಸುವ ಪ್ರಸ್ತಾಪವನ್ನು ಹಿಂದಕ್ಕೆ ಪಡೆಯಬೇಕು ಎಂಬ ಹೋರಾಟವನ್ನು ಬೆಂಬಲಿಸುವುದಾಗಿ ನಿಯೋಗ ಗ್ರಾಮಸ್ಥರಿಗೆ ಭರವಸೆ ನೀಡಿತು.

LEAVE A REPLY

Please enter your comment!
Please enter your name here