ನಿಗೂಢ ಸಾವು

0
458

 
ರಾಷ್ಟ್ರೀಯ ಪ್ರತಿನಿಧಿ ವರದಿ
ಮಹಾರಾಷ್ಟ್ರದಲ್ಲಿ ಕರ್ನಾಟಕದ ಯುವಕನ ಲಾಕಪ್ ಡೆತ್ ಆದ ಪ್ರಕರಣ ಬೆಳಕಿಗೆ ಬಂದಿದೆ. ಉಮದಿ ಪೊಲೀಸ್ ಠಾಣೆಯಲ್ಲಿ ಯುವಕ ನಿಗೂಢವಾಗಿ ಸಾವನ್ನಪ್ಪಿದ್ದಾನೆ.
 
 
ಇಲ್ಲಿನ ಸಾಂಗ್ಲಿ ಜಿಲ್ಲೆಯ ತಕ್ ತಾಲೂಕಿನಲ್ಲಿರುವ ಉಮದಿ ಠಾಣೆಯಲ್ಲಿ ಯುವಕನ ಸಾವನ್ನಪ್ಪಿದ್ದು, ಕರ್ನಾಟಕದ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ದುಮಕನಾಳ ನಿವಾಸಿ ರಾಜಕುಮಾರ(29) ಎಂದು ತಿಳಿದುಬಂದಿದೆ.
 
 
 
ಪೊಲೀಸ್ ಠಾಣೆ ಶೌಚಾಲುದಲ್ಲಿ ಯುವಕನ ಶವ ಪತ್ತೆಯಾಗಿದೆ. ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಯುವಕ ಮೃತ ದೇಹ ಪತ್ತೆಯಾಗಿದೆ. ಪೊಲೀಸರೇ ಯುವಕನನ್ನು ಕೊಂದಿದ್ದಾರೆಂದು ಮೃತನ ಪೋಷಕರು ಆರೋಪಿಸಿದ್ದಾರೆ.
 
 
 
ಅಲ್ಲದೆ ಹತ್ಯೆಗೈದು ಆತ್ಮಹತ್ಯೆ ಎಂದು ಬಿಂಬಿದಲು ಪೊಲೀಸರು ಯತ್ನಿಸಿದ್ದಾರೆ ಎಂದು ಉಮದಿ ಠಾಣೆ ಪೊಲೀಸರ ವಿರುದ್ಧ ಪೋಷಕರು ಆರೋಪಿಸಿದ್ದಾರೆ.
 
 
 
ಉಮದಿ ಠಾಣಾ ವ್ಯಾಪ್ತಿಯಲ್ಲಿ ದುಮಕನಾಳ ನಿವಾಸಿ ಗಂಗಾಬಾಯಿ ಅಮಸಿದ್ದ ಹತ್ಯೆ ಕೇಸ್ ಸಂಬಂಧ ರಾಜ್ಯದ ಪೊಲೀಸರಿಗೆ ಮಾಹಿತಿ ನೀಡದೆ ಮೃತ ರಾಜಕುಮಾರ, ತಂದೆ ಗುಮಡಪ್ಪನನ್ನು ಬಂಧಿಸಿದ್ದರು. ನಿನ್ನೆ ಮಧ್ಯಾಹ್ನ ತಂಡೆ ಗುಂಡಪ್ಪ ನಂದಗೊಂಡ ಬಿಡುಗಡೆಯಾಗಿತ್ತು. ಆದರೆ ಗಂಡಪ್ಪ ಪುತ್ರ ರಾಜಕುಮಾರ ಠಾಣೆಯಲ್ಲೇ ಇದಿದ್ದು, ನಿನ್ನೆ ರಾತ್ರಿ ಶೌಚಾಲಯದಲ್ಲಿ ರಾಜಕುಮಾರನ ಶವ ಪತ್ತೆಯಾಗಿದೆ.

LEAVE A REPLY

Please enter your comment!
Please enter your name here