'ನಿಖಿತಾ'ಗೆ ಕಂಕಣಭಾಗ್ಯ

0
426

ಸಿನಿ ಪ್ರತಿನಿಧಿ ವರದಿ
ನಟಿ ನಿಖಿತಾ ತುಕ್ರಾಲ್ ಅವರು ಸದ್ಯದಲ್ಲೇ ಹಸಮಣೆ ಏರಲಿದ್ದಾರೆ. ಮುಂಬೈ ಉದ್ಯಮಿ ಗಗನ್ ದೀಪ್ ಸಿಂಗ್ ಜೊತೆ ನಿಖಿತಾ ಮದುವೆ ಫಿಕ್ಸ್ ಆಗಿದೆ.
 
 
ಅ.9ರಂದು ನಿಖಿತಾ-ಗಗನ್ ದೀಪ್ ಸಿಂಗ್ ವಿವಾಹ ನಡೆಯಲಿದೆ. ಗಗನ್ ದೀಪ್ ಸಿಂಗ್ ಅವರು ಯೂತ್ ಕಾಂಗ್ರೆಸ್ ನ ಮಾಜಿ ಉಪಾಧ್ಯಕ್ಷ ಮಹಿಂದರ್ ಸಿಂಗ್ ಮಾಗೋ ಪುತ್ರ ಕೂಡ ಹೌದು.  ಇದೇ ಶನಿವಾರ ಮತ್ತು ಭಾನುವಾರ ಸಪ್ತಪದಿ ತುಳಿಯಲಿದ್ದಾರೆ. ಮುಂಬೈನ ಫೈವ್ ಸ್ಟಾರ್ ಹೊಟೇಲ್ ನಲ್ಲಿ ನಿಖಿತಾ-ಗಗನ್ ದೀಪ್ ಜೋಡಿಯ ಮದುವೆ ಸಮಾರಂಭ ನಡೆಯಲಿದೆ.
 
 
ಗುರುವಾರದಂದು ಮೆಹೆಂದಿ ಕಾರ್ಯಕ್ರಮ, ಅದಾದ ನಂತರ ಸಂಗೀತ್ ಕಾರ್ಯಕ್ರಮವೂ ಇರಲಿದೆ. ನಿಖಿತಾ ತಮ್ಮ ಮದುವೆಯಲ್ಲಿ ಕನ್ನಡ, ತೆಲುಗು ಹಾಗೂ ತಮಿಳು ಚಿತ್ರರಂಗದ ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ಕುಟುಂಬವರ್ಗದವರು ಭಾಗಿಯಾಗಲಿದ್ದಾರೆ.

LEAVE A REPLY

Please enter your comment!
Please enter your name here