ನಿಂಬೆಕಾಯಿ ಚಟ್ನಿ/ಉಪ್ಪಿನಕಾಯಿ

0
299

ವಾರ್ತೆ ರೆಸಿಪಿ
ಬೇಕಾಗುವ ಸಾಮಾಗ್ರಿಗಳು:
ನೆನೆಸಿದ ನಿಂಬೆಕಾಯಿ, ಸಾಸಿವೆ ಹುಡಿ, ಸಾಸಿವೆ, ಮೆಣಸಿನ ಹುಡಿ ಮತ್ತು ಇಂಗು.
 
 
ತಯಾರಿಸುವ ವಿಧಾನ:
ಎರಡು ದಿನದ ಮೊದಲು ನಿಂಬೆಕಾಯಿಯನ್ನು ತುಂಡು ಮಾಡಿ ಉಪ್ಪಿನಲ್ಲಿ ನೆನೆಸಿಡಬೇಕು. ನಂತರ ನೆನೆಸಿದ ನಿಂಬೆಕಾಯಿಯನ್ನು ತರಿತರಿಯಾಗಿ ರುಬ್ಬಬೇಕು. ನಂತರ ಬಾಣಲೆಯನ್ನು ಸ್ವಲ್ಪ ಎಣ್ಣೆ ಹಾಕಿ, ಎಣ್ಣೆ ಕಾದ ಬಳಿಕ ರುಬ್ಬಿದ ನಿಂಬೆಕಾಯಿಯನ್ನು ಹಸಿ ವಾಸನೆ ಹೋಗುವವರೆಗೂ ಫ್ರೈ ಮಾಡಬೇಕು. ನಂತರ ಸಾಸಿವೆ ಮತ್ತು ಮೆಣಸಿನ ಹುಡಿಯನ್ನು ಹಾಕಿ ಮಿಕ್ಸ್ ಮಾಡಿ. ಕೊನೆಯಲ್ಲಿ ಸಾಸಿವೆ, ಇಂಗು ಒಗ್ಗರಣೆ ನೀಡಿ. ಈಗ ರುಚಿರುಚಿಯಾದ ನಿಂಬೆಕಾಯಿ ಚಟ್ನಿ/ಉಪ್ಪಿನಕಾಯಿ ರೆಡಿ. ಇದನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ಮೂರು ತಿಂಗಳು ಕಾಲ ಉಪಯೋಗಿಸಬಹುದು.

LEAVE A REPLY

Please enter your comment!
Please enter your name here