ನಾಳೆ ರೈಲ್ವೆ ಬಂದ್

0
430

ಬೆಂಗಳೂರು ಪ್ರತಿನಿಧಿ ವರದಿ
ಕಾವೇರಿ ನದಿ ನೀರು ಹಂಚಿಕೆ ಮತ್ತು ಮಹದಾಯಿ ವಿವಾದದಲ್ಲಿ ಬಂದ ತೀರ್ಪನ್ನು ಖಂಡಿಸಿ ನಾಳೆ(ಸೆ.15) ಕನ್ನಡ ಒಕ್ಕೂಟದಿಂದ ರೈಲ್ವೆ ಬಂದ್ ಗೆ ಕರೆ ನೀಡಲಾಗಿದೆ.
 
 
 
ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ‘ಸೆಪ್ಟೆಂಬರ್ 15ರ ಗುರುವಾರ ಕರ್ನಾಟಕ ಬಂದ್‌ಗೆ ಕರೆ ನೀಡಿಲ್ಲ. ಆದರೆ, ಮೊದಲೇ ಘೋಷಣೆ ಮಾಡಿದಂತೆ ರೈಲ್ವೆ ಬಂದ್ ನಡೆಯಲಿದೆ’ ಎಂದು ಹೇಳಿದ್ದಾರೆ.
 
ಸುಮಾರು 1 ಲಕ್ಷ ಜನರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಆದ್ದರಿಂದ, ಗುರುವಾರ ರೈಲ್ವೆ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯ ತನಕ ರೈಲ್ವೆ ಬಂದ್ ಕರೆ ನೀಡಲಾಗಿದೆ. ಆದ್ದರಿಂದ, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಗುರುವಾರ ರೈಲ್ವೆ ಸಂಚಾರ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here