ನಾಳೆ ಯಶ್-ರಾಧಿಕಾ ನಿಶ್ಚಿತಾರ್ಥ

0
477

ಸಿನಿ ಪ್ರತಿನಿಧಿ ವರದಿ
ಈ ವರ್ಷವೇ ಸ್ಯಾಂಡಲ್ ವುಡ್ ನ ‘ಸಕ್ಸಸ್ ಜೋಡಿ’ ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಹಸೆಮಣೆ ಏರಲಿದ್ದಾರೆ.  ಈ ಹಿನ್ನೆಲೆಯಲ್ಲಿ ನಾಳೆ ನಟ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಅವರ ವಿವಾಹ ನಿಶ್ಚಿತಾರ್ಥಕ್ಕೆ ದಿನಾಂಕ ಫಿಕ್ಸ್ ಆಗಿದೆ. ನಟಿ ರಾಧಿಕಾ ಪಂಡಿತ್ ತಾಯಿಯವರ ಹುಟ್ಟೂರು ಗೋವಾದಲ್ಲಿ ನಿಶ್ಚಿತಾರ್ಥ ನಡೆಯಲಿದೆ.
 
 
ನಿಶ್ಚಿತಾರ್ಥ ಗೋವಾದಲ್ಲಿ ಆದರೂ ಕೂಡ ಮದುವೆಯನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. 2016ರ ಡಿಸೆಂಬರ್ ನಲ್ಲಿ ಯಶ್-ರಾಧಿಕಾ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿವಾಹ ನಡೆಯಲಿದೆ. ಮೂರು ದಿನ ಅದ್ದೂರಿಯಾಗಿ ಯಶ್-ರಾಧಿಕಾ ಅವರ ವಿವಾಹ ನಡೆಯಲಿದೆ.
 
ಒಂದು ದಿನ ಮಂಗಲ್ಯಾ ಧಾರಣೆ ಕಾರ್ಯಕ್ರಮ, ಮತ್ತೆರಡು ದಿನ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಎರಡು ದಿನ ಆರತಕ್ಷತೆ ನಡೆಸಲು ಉಭಯ ಕುಟುಂಬಗಳು ನಿರ್ಧರಿಸಿದ್ದು, ಇದು ಯಶ್-ರಾಧಿಕಾ ಮದುವೆಯ ವಿಶೇಷವಾಗಿದೆ. ಈ ಪೈಕಿ 1 ಆರತಕ್ಷತೆ ಸಮಾರಂಭ ಅಭಿಮಾನಿಗಳಿಗೆ ಮೀಸಲು ಇಡಲಾಗಿದೆ. ಬೆಂಗಳೂರಿನಲ್ಲಿ ಅಭಿಮಾನಿಗಳಿಗೋಸ್ಕರ ಅದ್ದೂರಿ ಆರತಕ್ಷತೆ ನಡೆಯಲಿದೆ.

LEAVE A REPLY

Please enter your comment!
Please enter your name here