ನಾಳೆ ಭಾರತ್ ಬಂದ್

0
579

 
ನಮ್ಮ ಪ್ರತಿನಿಧಿ ವರದಿ
ರಸ್ತೆ ಸಾರಿಗೆ, ಸುರಕ್ಷತಾ ವಿಧೇಯಕ ನೀತಿ ವಿರೋಧಿಸಿ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ದೇಶವ್ಯಾಪಿ ಸಾರಿಗೆ ಮತ್ತು ವಾಣಿಜ್ಯ ಮುಷ್ಕರ ಹಮ್ಮಿಕೊಳ್ಳಲಾಗಿದೆ.
 
ಏನಿಲ್ಲ…ಏನುಂಟು?
ಕೆಎಸ್ ಆರ್ ಟಿಸಿ, ಬಿಎಂಟಿಸಿ ಸಂಸ್ಥೆ ಮುಷ್ಕರಕ್ಕೆ ಬೆಂಬಲ ನೀಡಿದೆ ಈ ಹಿನ್ನೆಲೆಯಲ್ಲಿ ಬಸ್ ಸಂಚಾರ ಇರುವುದಿಲ್ಲ. ಆಟೋಗಳ ಸಂಚಾರವೂ ಕೂಡ ಇರುವುದಿಲ್ಲ. ಲಾರಿಗಳೂ, ಮೊಬೈಲ್ ಆ್ಯಪ್ ಆಧರಿತ ಟ್ಯಾಕ್ಸಿ ಸೇವೆ, ಮ್ಯಾಕ್ಸಿ ಕ್ಯಾಬ್, ಟೂರಿಸ್ಟ್ ಮೋಟರ್ ಕ್ಯಾಬ್, ಖಾಸಗಿ ಬಸ್ ಇರಲ್ಲ. ನಾಳೆ ಏರ್ ಪೋರ್ಟ್ ಟ್ಯಾಕ್ಸಿ ಸೇವಯೂ ಕೂಡ ಸ್ಥಗಿತವಾಗಲಿದೆ.
 
 
 
ಮುಷ್ಕರಕ್ಕೆ ವಿವಿಧ ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿದೆ. ಬಿಎಂಎಸ್, ಎಐಟಿಯುಸಿ ಸಿಐಟಿಯು ಸಂಘಟನೆ ಬೆಂಬಲ ನೀಡಿದೆ.
ಆದರೆ ಮುಷ್ಕರಕ್ಕೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಬೆಂಬಲ ನೀಡಿಲ್ಲ. ಇದರಿಂದ ಎಂದಿನಂತೆ ಹೋಟೆಲುಗಳು ತೆರೆದಿರಲಿದೆ.
ತುರ್ತು ಸೇವೆಗಳಿಗೆ ನಾಳಿನ ಮುಷ್ಕರದಿಂದ ವಿನಾಯಿತಿ ನೀಡಲಾಗಿದೆ. ಹಾಲಿನ ವಾಹನ, ಮೆಡಿಕಲಸ ಶಾಪ್ ಗಳು ಆ್ಯಂಬುಲೆನ್ಸ್, ಆಸ್ಪತ್ರೆ ಸೇರಿದಂತೆ ತುರ್ತು ಸೇವೆಗೆ ಬಂದ್ ವಿನಾಯಿತಿ ನೀಡಲಿದೆ. ‘ನಮ್ಮ ಮೆಟೋ’ ಸಂಚಾರವೂ ಕೂಡ ಎಂದಿನಂತೆ ಇರಲಿದೆ.
 
 
 
ಶಾಲಾ ವಾಹನ ಚಾಲಕರ ಸಂಘ ಬಂದ್ ಗೆ ಬೆಂಬಲ ನೀಡಿದೆ. ಪೆಟ್ರೋಲ್ ಬಂಕ್ ಮಾಲೀಕರ ಸಂಘ ಮುಷ್ಕರಕ್ಕೆ ಬೆಂಬಲ ನೀಡುವುದರ ಬಗ್ಗೆ ನಿರ್ಧಾರವಿಲ್ಲ. ಇದರಿಂದ ಪೆಟ್ರೋಲ್ ಬಂಕ್ ಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ.
 
ಸಾರಿಗೆ ಮುಷ್ಕರದ ಬಿಸಿ ಶಾಲಾ-ಕಾಲೇಜುಗಳಿಗೆ ತಟ್ಟೋ ಸಾಧ್ಯತೆ ಇದೆ.  ಅನುದಾನ ರಹಿತ ಖಾಸಗಿ ಶಾಲೆಗಳಿಗೆ ರಜೆ ಇಲ್ಲ. 2400 ಕ್ಕೂ ಹೆಚ್ಚು ಸದಸ್ಯ ಶಾಲೆಗಳಿಗೆ ರಜೆ ಘೋಷಣೆ ಇಲ್ಲ. ಸ್ವಂತ ಸಾರಿಗೆ ವ್ಯವಸ್ಥೆ ಮೂಲಕ ಮಕ್ಕಳನ್ನು ಕರೆತರಲು ಮಕ್ಕಳ ಪೋಷಕರಿಗೆ ಶಾಲಾ ಆಡಳಿತ ಮಂಡಳಿ ಮನವಿ ಮಾಡಿದೆ.

LEAVE A REPLY

Please enter your comment!
Please enter your name here