ನಾಳೆ ಘಡ್ನವಿಸ್ ಸಂಪುಟ ವಿಸ್ತರಣೆ

0
435

ವರದಿ: ಲೇಖಾ
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಘಡ್ನವಿಸ್ ಜುಲೈ.8ರಂದು ಸಚಿವ ಸಂಪುಟವನ್ನು ವಿಸ್ತರಿಸಲಿದ್ದಾರೆ ಎಂದು ಮಹಾರಾಷ್ಟ್ರ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.
 
 
ಫಡ್ನವಿಸ್ ಜುಲೈ 10 ರಿಂದ ರಷ್ಯಾ ಪ್ರಸಾಸಕ್ಕೆ ತೆರಳುತ್ತಿದ್ದು, ಪ್ರವಾಸಕ್ಕೆ ತೆರಳುವ ಮುನ್ನ ತಮ್ಮ ಸಂಪುಟ ವಿಸ್ತರಿಸುವ ಉದ್ದೇಶ ಹೊಂದಿದ್ದಾರೆ. ಫಡ್ನವಿಸ್ ಅವರ ಸಚಿವ ಸಂಪುಟದಲ್ಲಿ 14 ಸಂಪುಟ ದರ್ಜೆ ಸಚಿವರಿದ್ದು, 10 ರಾಜ್ಯ ಸಚಿವರಿದ್ದಾರೆ. ಇನ್ನೂ 14 ಸ್ಥಾನಗಳು ಖಾಲಿಯಿದೆ. ಆದರೆ ಜುಲೈ.8ರಂದು ಎಷ್ಟು ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿಲ್ಲ.
 
 
ಕಳೆದ ತಿಂಗಳು ಫಡ್ನವಿಸ್ ಸರ್ಕಾರದ ಹಿರಿಯ ಸಚಿವ ಏಕನಾಥ್ ಖಡ್ಸೆ ಭ್ರಷ್ಟಾಚಾರ ಪ್ರಕರಣದಲ್ಲಿ ರಾಜೀನಾಮೆ ಸಲ್ಲಿಸಿದ್ದರು. ಅವರ ಬಳಿ ಇದ್ದ 10 ಖಾತೆಗಳನ್ನು ಫಡ್ನಿವಿಸ್ ತಾತ್ಕಾಲಿಕವಾಗಿ ನಿಭಾಯಿಸುತ್ತಿದ್ದು, ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಈ ಖಾತೆಗಳನ್ನು ಹಂಚಿಕೆ ಮಾಡುವ ಸಾಧ್ಯತೆ ಇದೆ.
 
 
ಬಿಜೆಪಿ ಮಿತ್ರ ಪಕ್ಷಗಳಾದ ಸ್ವಾಭಿಮಾನಿ ಪಕ್ಷದಿಂದ ಸದಾಭಾವ್ ಖೋಟ್ ಮತ್ತು ರಾಷ್ಟ್ರೀಯ ಸಮಾಜ ಪಕ್ಷದಿಂದ ಮಹಾದೇವ್ ಜಂಕರ್ ಸಂಫುಟಕ್ಕೆ ಸೇರುಸ ಸಾಧ್ಯತೆ ಇದೆ. ಶಿವ ಸೇನೆಗೆ ಸಂಫುಟ ವಿಸ್ತರಣೆಯಲ್ಲಿ ಎಷ್ಟು ಸ್ಥಾನ ಸಿಗಲಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

LEAVE A REPLY

Please enter your comment!
Please enter your name here