ನಾಳೆ ಕರ್ನಾಟಕ ಬಂದ್

0
245

ಬೆಂಗಳೂರು ಪ್ರತಿನಿಧಿ ವರದಿ
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ಆಕ್ರೋಶ ಹಿನ್ನೆಲೆಯಲ್ಲಿ ನಾಳೆ ಕರ್ನಾಟಕ ಬಂದ್ ಕರೆ ನೀಡಲಾಗಿದೆ. ಕಾವೇರಿ ನೀರು ಬಿಡುಗಡೆ ವಿರೋಧಿಸಿ ನಾಳೆ ಕನ್ನಡಪರ ಸಂಘಟನೆಗಳು ಬಂದ್ ಗೆ ಕರೆ ನೀಡಿದೆ.
 
 
ಸಾರ್ವಜನಿಕರೇ ನಿಮ್ಮ ಗಮನಕ್ಕಾಗಿ…
ಬಂದ್ ಗೆ ಕೆಎಸ್ ಆರ್ ಟಿಸಿ, ಬಿಎಂಟಿಸಿ ನೌಕರರ ಸಂಘಟನೆ ಅಧಿಕೃತವಾಗಿ ಬೆಂಬಲ ಸೂಚಿಸಿದೆ. ಇದರಿಂದ ನಾಳೆ ಸರ್ಕಾರಿ ಬಸ್ ಗಳ ಸಂಚಾರ ಬಂದ್ ಆಗಲಿದೆ. ಆಟೋ, ಕ್ಯಾಬ್ ಗಳು ರಸ್ತೆಗೆ ಇಳಿಯೋದಿಲ್ಲ. ಬೆಂಗಳೂರಿನ ಯಾವುದೇ ಹೋಟೆಲ್ ಗಳು ಮತ್ತು ರೆಸ್ಟೋರೆಂಟ್ ಗಳ ಬಾಗಿಲು ತೆಗೆಯೋದಿಲ್ಲ. ಏರ್ ಪೋರ್ಟ್ ನಲ್ಲಿನ ಟ್ಯಾಕ್ಸಿಗಳ ಸೇವೆಯೂ ನಾಳೆ ಸ್ಥಗಿತವಾಗಲಿದೆ. 93 ಸಾವಿರ ಮ್ಯಾಕ್ಸಿಕ್ಯಾಬ್, 30 ಸಾವಿರ ಟ್ಯಾಕ್ಸಿಗಳು ಸಂಚಾರ ನಡೆಸುವುದಿಲ್ಲ.
 
ಪೆಟ್ರೋಲ್ ಬಂಕ್ ಮಾಲೀಕರು ಬೆಂಬಲ ಸೂಚಿಸಿದ್ದಾರೆ. ನಾಳೆ ಬೆಂಗಳೂರಿನ 450 ಸೇರಿ 3800 ಬಂಕ್ ಗಳು ಬಂದ್ ಆಗಲಿದೆ.
ಬ್ಯಾಂಕ್ ನೌಕರರು ನಾಳೆ ಸಾಮೂಹಿಕ ರಜೆ ಹಾಕಲಿದ್ದಾರೆ. ಇವರು ಪ್ರತಿಭಟನೆಯಲ್ಲಿ ಭಾಗಿಯಾಗದೆ, ನೈತಿಕ ಬೆಂಬಲ ನೀಡಲಿದ್ದಾರೆ. ಸರ್ಕಾರಿ ನೌಕರರು ಕಚೇರಿಗಳಿಗೆ ಸಾಮೂಹಿಕ ರಜೆ ಹಾಕಲಿದ್ದಾರೆ. ನಂತರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಎತ್ತಿನಗಾಡಿ ರ್ಯಾಲಿ ನಡೆಸಲಿದ್ದಾರೆ.
ಬಂದ್ ಗೆ ಖಾಸಗಿ ಶಾಲೆಗಳ ಆಡಳಿತ ಒಕ್ಕೂಟ ಬೆಂಬಲ ನೀಡಿದೆ. ಇದರಿಂದ ಎಲ್ಲಾ ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಸರ್ಕಾರಿ ಶಾಲೆಗಳ ರಜೆ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಬಂದ್ ಗೆ ವಿವಿಧ ಯೂನಿಯನ್ ಗಳು ಬೆಂಬಲ ನೀಡಿದೆ.
 
 
ಸ್ಯಾಂಡಲ್ ವುಡ್ ಬೆಂಬಲ
ಕರ್ನಾಟಕ ಬಂದ್ ಗೆ’ ಕನ್ನಡ ಚಿತ್ರರಂಗದಿಂದಲೂ ಬೆಂಬಲ ದೊರಕಿದೆ. ಇದರಿಂದ ನಾಳೆ ಬೆಂಗಳೂರಿನ ಎಲ್ಲ ಚಿತ್ರಮಂದಿರಗಳೂ ಬಂದ್ ಆಗಲಿದೆ. ಇಡೀ ಕನ್ನಡ ಚಿತ್ರರಂಗ ಬಂದ್ ನಲ್ಲಿ ಭಾಗಿಯಾಗಲಿದೆ.ಅಲ್ಲದೆ ನಾಳೆ ಬೆಳಗ್ಗೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಧರಣಿಗೆ ನಿರ್ಧರಿಸಲಾಗಿದೆ.
ಯಾವುದೇ ಮಾಲ್ ಗಳು ನಾಳೆ ಓಪನ್ ಆಗೋದಿಲ್ಲ. ಎಪಿಎಂಸಿ ವರ್ತಕರ ಸಂಘದಿಂದಲೂ ಬಂದ್ ಗೆ ಬೆಂಬಲ ಸೂಚಿಸಿದೆ. ಎಲ್ಲಾ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು ಸೇರಿದಂತೆ ಇಡೀ ಚಿತ್ರರಂದ ಧರಣಿಯಲ್ಲಿ ಭಾಗಿಯಾಗಲಿದೆ. ಇದರಿಂದ ನಾಳೆ ಚಿತ್ರರಂಗದ ಯಾವುದೇ ಚಟುವಟಿಕೆ ಇರುವುದಿಲ್ಲ.ರಾಜ್ಯದ ಹೊರಗೆ ನಡೆಯುವ ಚಿತ್ರೀಕರಣವೂ ಬಂದ್ ಆಗಲಿದೆ.
ರಾಜ್ಯ ಕೇಬಲ್ ಆಪರೇಟರ್ಸ್ ಅಸೋಸಿಯೇಷನ್ ಬೆಂಬಲ ನೀಡಿದೆ. ನಾಳೆ ರಾಜ್ಯದಾದ್ಯಂತ ತಮಿಳು ಚಾನೆಲ್ ಗಳ ಪ್ರಸಾರ ಸ್ಥಗಿತವಾಗಲಿದೆ. 53 ತಮಿಳು ಚಾನೆಲ್ ಗಳ ಪ್ರಸಾರ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಬೆಳಗ್ಗೆ 6 ಗಂಟೆಗೆ ಸಂಜೆ 6 ಗಂಟೆಯವರೆಗೆ ಸ್ಥಗಿತವಾಗಲಿದೆ.
 
ಅಗತ್ಯ ವಸ್ತುಗಳು ದೊರೆಯಲಿದೆ…
ಬಂದ್ ಹಿನ್ನೆಲೆಯಲ್ಲಿ ಜನರಿಗೆ ಬೇಕಾದ ಅಗತ್ಯ ವಸ್ತುಗಳಿಗೆ ತೊಂದರೆ ಇಲ್ಲ. ಆಸ್ಪತ್ರೆ, ಮೆಡಿಕಲ್ ಶಾಪ್ ಎಂದಿನಂತೆ ಓಪನ್ ಆಗಲಿದೆ. ರೋಗಿಗಳಿಗೆ ಆ್ಯಂಬುಲೆನ್ಸ್ ಸೇವೆ ಒದಗಿಸಲಾಗುತ್ತದೆ. ಅಗತ್ಯ ವಸ್ತುಗಳಾದ ಹಾಲು, ತರಕಾರಿ ದೊರೆಯಲಿದೆ.

LEAVE A REPLY

Please enter your comment!
Please enter your name here